ಕೂಡಿಗೆ, ಏ. ೨೮: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಿರ್ವಹಿಸುತ್ತಿರುವ ಕ್ರೀಡಾ ವಸತಿ ಶಾಲಾ ನಿಲಯ ಗಳಿಗೆ ೨೦೨೬-೨೭ ನೇ ಸಾಲಿಗೆ ಪ್ರವೇಶ ಹೊಂದಲು ಪ್ರಥಮ ಪಿ.ಯು.ಸಿ. ಹಾಕಿ ಕ್ರೀಡಾಪಟುಗಳ ಅಂತಿಮ ರಾಜ್ಯ ಮಟ್ಟದ ಪರಿಶೀಲನಾ ಅಯ್ಕೆ ಪ್ರಕ್ರಿಯೆ ಶಿಬಿರವು ಕೂಡಿಗೆ ಕ್ರೀಡಾ ಪ್ರೌಢಶಾಲಾ ಮೈದಾನದಲ್ಲಿ ಆರಂಭಗೊAಡಿದೆ.

೧೦ ನೇ ತರಗತಿಯಲ್ಲಿ ತೇರ್ಗಡೆ ಹೊಂದಿ ಪ್ರಥಮ ಪಿಯುಸಿಗೆ ಸೇರ್ಪಡೆಗೊಳ್ಳುವ ಹುಡುಗ, ಹುಡುಗಿಯರ ಕ್ರೀಡಾ ಪರಿಶೀಲನಾ ತರಬೇತಿಯು ತಾ. ೨೭ರಿಂದ ಆರಂಭಗೊAಡಿದ್ದು, ಮೇ. ೧.ರವರೆಗೆ ನಡೆಯಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ. ವಿಸ್ಮಯಿ ಚಕ್ರವರ್ತಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಶಿಬಿರದ ಸಂಚಾಲಕ, ಹಾಕಿ ತರಬೇತಿದಾರ ಬಿ.ಎಸ್. ವೆಂಕಟೇಶ್, ತರಬೇತಿದಾರರಾದ ವಿಜಯ ಕೃಷ್ಣ, ಜಾಕೀರ್, ಸುಂದರೇಶ್, ಚಿತ್ರಾಶ್ರೀ, ಶಾಲಾ ಮುಖ್ಯೋಪಾಧ್ಯಾಯಿನಿ ಆಶ್ವಿತ್, ಸೇರಿದಂತೆ ಶಾಲಾ ಶಿಕ್ಷಕರ ವೃಂದ, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಹಾಜರಿದ್ದರು.