ಚೆಯ್ಯAಡಾಣೆ/ಕಡAಗ, ಏ. ೨೭: ಕ್ರೀಡೆಯನ್ನು ಅತ್ಯಂತ ಸ್ಫೂರ್ತಿ ದಾಯಕವಾಗಿ ಆಸ್ವಾದಿಸುತ್ತಾ, ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಹೇಳಿದರು.

ಕಡಂಗದಲ್ಲಿ ಲಿಮ್ರಾ ಫ್ರೆಂಡ್ಸ್ ಆಯೋಜಿಸಿದ್ದ ದ್ವಿತೀಯ ವರ್ಷದ ಜಿಲ್ಲಾಮಟ್ಟದ ಟಿಟ್ಟು ಮೆಮೊರಿಯಲ್ ವಾಲಿಬಾಲ್ ಪಂದ್ಯಾಟದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಕ್ರೀಡಾ ಮನೋಭಾವದಿಂದ ಎಲ್ಲರೊಂದಿಗೆ ಬೆರೆತು ಕೊಡಗಿನ ವೈಭವವನ್ನು ಎತ್ತಿ ಹಿಡಿಯುವಂತೆ ಕರೆ ನೀಡಿದ ಅವರು ಕ್ರೀಡೆಯು ಮಾನಸಿಕ ಹಾಗೂ ದೈಹಿಕ ಸಮತೋಲನಕ್ಕೆ ಸಹಕಾರಿಯಾಗಿದೆ. ವಿಶೇಷವಾಗಿ ವಾಲಿಬಾಲ್ ಪಂದ್ಯಾಟ ಅತ್ಯಂತ ಚುರುಕಿನಿಂದ ಕೂಡಿದ ಕ್ರೀಡೆಯಾಗಿದೆ ಎಂದರು.

ಇದೇ ಸಂದರ್ಭ ಕಡಂಗ ಗ್ರಾಮದ ಅತೀ ಹೆಚ್ಚು ಅಂಕ ಪಡೆದ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನು ಲಿಮ್ರಾ ಫ್ರೆsÀ್ರಂಡ್ಸ್ ವತಿಯಿಂದ ಶಾಸಕ ಎ.ಎಸ್. ಪೊನ್ನಣ್ಣ ಸನ್ಮಾನಿಸಿದರು.

ಆಯೋಜಕರ ವತಿಯಿಂದ ಎ. ಎಸ್. ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ವೀರಾಜಪೇಟೆ ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ರಫೀಕ್ ಕೊಳುಮಂಡ, ನಿವೃತ ಸೈನಿಕ ಅಬ್ದುಲ್ ಸಲಾಂ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸುಬೈರ್ ಸಿಇ, ಶಾಫಿ ಎಡಪಾಲ, ಬದ್ರಿಯಾ ಮಸೀದಿಯ ಅಧ್ಯಕ್ಷ ಉಸ್ಮಾನ್, ಬಿ.ಕೆ.ಶಫಿಕ್ ರನ್ ವೇ, ಜುನೈದ್ ಸಿ.ಎ,ಅಂದುಜಿ ಹಾಗೂ ಆಯೋಜಕರಾದ ಕರೀಂ ಲಿಮ್ರಾ, ಅಬ್ದುಲ್ಲ ಎ.ಎಂ. ಎಡಪಾಲ, ರಾಝಿಕ್ ಎಬಿಆರ್, ಹಾರೂನ್ ರಾಶಿದ್ (ಅಂಚಿ), ಉಬೈದ್, ರಾಶಿದ್, ಸೌಕತ್, ಜಬ್ಬಾರ್, ಹಾಸಿಂ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಟೀಮ್ ಅನ್ಸಾರಿ ಚಾಂಪಿಯನ್ : ವಿಜಯ ಪ್ರೌಢಶಾಲಾ ಮೈದಾನದಲ್ಲಿ ನಡೆದ ಹೊನಲು ಬೆಳಕಿನ ಫೈನಲ್ ಪಂದ್ಯಾಟದಲ್ಲಿ ಫೋರ್ ಸ್ಟಾರ್ ಎಡಪಾಲ ತಂಡವನ್ನು ೨೧-೧೭, ೨೧-೧೬ರ ನೇರ ಸೆಟ್‌ನಿಂದ ಮಣಿಸಿ ಟೀಮ್ ಅನ್ಸಾರಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಇದಕ್ಕೂ ಮೊದಲು ನಡೆದ ಮೊದಲ ಸೆಮಿಫೈನಲ್ ಪಂದ್ಯಾಟದಲ್ಲಿ ಉಂಡಪಾರ ತಂಡವನ್ನು ಟೀಮ್ ಅನ್ಸಾರಿ ತಂಡ ಸೋಲಿಸಿ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡರು.

ಎರಡನೇಯ ಸೆಮಿಫೈನಲ್‌ನಲ್ಲಿ ಇಂಡಿಯನ್ ಆಟೋ ಲಿಂಕ್ಸ್ ತಂಡವನ್ನು ಫೋರ್ ಸ್ಟಾರ್ ಎಡಪಾಲ ತಂಡ ಸೋಲಿಸಿ ಫೈನಲ್‌ಗೆ ಪ್ರವೇಶಿಸಿತು.

ವ್ಯೆಯಕ್ತಿಕ ಬಹುಮಾನ : ಉತ್ತಮ ಪಾಸರ್ ಆಗಿ ಟೀಮ್ ಅನ್ಸಾರಿ ತಂಡದ ಆಟಗಾರ ಆದಿಲ್, ಉತ್ತಮ ಅಟ್ಯಾಕರ್ ಆಗಿ ಫೋರ್ ಸ್ಟಾರ್ ಎಡಪಾಲ ತಂಡದ ಆಟಗಾರ ಸಂತು, ಬೆಸ್ಟ್ ಬ್ಲೋಕರ್ ಆಗಿ ಫೋರ್ ಸ್ಟಾರ್ ತಂಡದ ಪ್ರಜ್ವಲ್, ಉತ್ತಮ ಅಲ್ ರೌಂಡರ್ ಆಟಗಾರನಾಗಿ ಟೀಮ್ ಅನ್ಸಾರಿ ತಂಡದ ಸ್ಯಾಂಡಿ,ಉತ್ತಮ ಡಿಫೆಂಡರ್ ಆಟಗಾರನಾಗಿ ಫೋರ್ ಸ್ಟಾರ್ ತಂಡದ ಕುಟ್ಟಪ್ಪ ಪ್ರಶಸ್ತಿ ಪಡೆದುಕೊಂಡರು.

ತೀರ್ಪುಗಾರರಾಗಿ ಅಂತರರಾಷ್ಟ್ರೀಯ ತೀರ್ಪುಗಾರದ ಕೇರಳದ ಸುನಿಲ್ ಹಾಗೂ ವಿಜೇಶ್ ಕಾರ್ಯ ನಿರ್ವಹಿಸಿದರೆ, ವೀಕ್ಷಕ ವಿವರಣೆಯನ್ನು ಕೇರಳದ ಖ್ಯಾತ ವೀಕ್ಷಕ ವಿವರಣೆಗಾರ ಸಾಜಿ ನೀಡಿದರು. ವಿಜೇತರಿಗೆ ಅತಿಥಿ ಗಣ್ಯರು ಬಹುಮಾನ ವಿತರಿಸಿದರು. ಅರ್ಷಾದ್ ಸ್ವಾಗತಿಸಿ, ಸರ್ವರನ್ನು ವಂದಿಸಿದರು.