ಗೋಣಿಕೊಪ್ಪಲು, ಏ. ೨೭: ಕೊಡವ ಸವಿತಾ ಸಮಾಜದ ಕೌಟುಂಬಿಕ ಕ್ರಿಕೆಟ್ ಪಂದ್ಯಾಟದಲ್ಲಿ ಪೂಣಚ್ಚಿರ ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದು, ಹಲ್ಚಿರ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.

ಕೊಡವ ಸವಿತಾ ಸಮಾಜದ ವತಿಯಿಂದ ಗೋಣಿಕೊಪ್ಪ ಸಮೀಪದ ಹಾತೂರು ಶಾಲಾ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟ ನಡೆಯಿತು.

ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಪೂಣಚ್ಚಿರ ರಾಬಿನ್, ಉದಯೋನ್ಮುಖ ಆಟಗಾರ ಹೊನ್ನೆಂಗಡ ಲೆನಿನ್ ಅಯ್ಯಪ್ಪ, ಬೆಸ್ಟ್ ಬ್ಯಾಟ್ಸ್ಮ್ಯಾನ್ ಚೋಂದುವAಡ ರಿವಿನ್ ಕಾವೇರಪ್ಪ, ಬೆಸ್ಟ್ ಬೌಲರ್ ಹಲ್ಚಿರ ಶೆರಿನ್, ಬೆಸ್ಟ್ ಫೀಲ್ಡರ್ ಹಲ್ಚಿರ ಶೃತಿ, ಮ್ಯಾನ್ ಆಫ್ ದ ಸೀರಿಸ್ ಪ್ರಶಸ್ತಿಯನ್ನು ವೇದಪಂಡ ಸಾಗರ್ ಪಡೆದರು.

ಪಂದ್ಯಾವಳಿಯನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಉದ್ಘಾಟಿಸಿದರು.

ಇದೇ ಸಂದರ್ಭ ಶಾಸಕ ಎ.ಎಸ್.ಪೊನ್ನಣ್ಣ, ಎಂಎಲ್‌ಸಿ ಸುಜಾ ಕುಶಾಲಪ್ಪ ಟಿ.ಶೆಟ್ಟಿಗೇರಿ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕಿ ಹೊನ್ನೆಂಪAಡ ಲೌಲಿ, ಸಮಾಜದ ಅಧ್ಯಕ್ಷ ತಾಪನೇರ ಸಾಬು, ಕೊಡವ ಭಾಷಿಕ ಸಮುದಾಯಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಎಲ್ಲರನ್ನೂ ಗೌರವದಿಂದ ಕಾಣಬೇಕು

ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಶಾಸಕ ಪೊನ್ನಣ್ಣ, ಪ್ರತಿ ಸಮಾಜವನ್ನು ಗೌರವದಿಂದ ಕಾಣಬೇಕು. ಸಮಾನತೆಯೊಂದಿಗೆ ಮುನ್ನಡೆಯಬೇಕು. ಸಾಮರಸ್ಯಕ್ಕಾಗಿ ಎಲ್ಲಾರು ಒಗ್ಗಟ್ಟಾಗಿ ಕೈ ಜೋಡಿಸಿದ್ದಲ್ಲಿ ಉತ್ತಮ ಸಮಾಜ ನಿರ್ಮಾಣವಾಗಲಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಮಾತನಾಡಿ, ಕ್ರೀಡೆಯಿಂದ ಸಮಾಜದಲ್ಲಿ ಒಗ್ಗಟ್ಟು ಮೂಡುತ್ತದೆ. ಆಚಾರ ವಿಚಾರ, ಪದ್ಧತಿ ಪರಂಪರೆ ಕಾಪಾಡಿಕೊಳ್ಳುವಂತೆ ಕರೆ ನೀಡಿದರು.

ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಮಾತನಾಡಿ, ಕೊಡಗಿನಲ್ಲಿರುವ ಮೂಲ ನಿವಾಸಿಗಳು ಕ್ರೀಡಾಕೂಟ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.

ಸನ್ಮಾನ ಸ್ವೀಕರಿಸಿದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಟಿ.ಶೆಟ್ಟಿಗೇರಿ ವ್ಯವಸ್ಥಾಪಕಿ ಹೊನ್ನೆಪಂಡ ಲೌಲಿ ಮಾತನಾಡಿ, ಸಮಾಜದಲ್ಲಿ ಪ್ರತಿಭಾವಂತರಿದ್ದು ಸಾಕಷ್ಟು ಅವಕಾಶಗಳು ಇರುವುದರಿಂದ ಸದುಪಯೋಗ ಪಡಿಸಿಕೊಳ್ಳುವ ಮೂಲಕ ಸಾಧನೆ ಮಾಡಬೇಕೆಂದು ಕರೆ ನೀಡಿದರು. ಕಳೆದ ೨ ವರ್ಷಗಳಿಂದ ಯಶಸ್ವಿಯಾಗಿ ಪಂದ್ಯಾಟ ಆಯೋಜನೆ ಮಾಡಲಾಗಿದ್ದು, ಸಮಾಜದವರು ಉತ್ತಮ ಬೆಂಬಲ ನೀಡಿದ್ದಾರೆ. ಸಮಾಜದ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಶಾಸಕರ ಬಳಿ ೨ ಎಕರೆ ಭೂಮಿಗಾಗಿ ಮನವಿ ಮಾಡಲಾಗಿದೆ ಎಂದು ಕೊಡಗು ಕೊಡವ ಸವಿತಾ ಸಮಾಜ ಅಧ್ಯಕ್ಷ ತಾಪನೇರ ಸಾಬು ತಿಳಿಸಿದರು

ಕೊಡವ ಭಾಷಿಕ ಸಮುದಾಯ ಕೂಟದ ನಿರ್ದೇಶಕ ವೇದಪಂಡ ಕಿರಣ್ ಪ್ರಾಸ್ತವಿಕವಾಗಿ ಮಾತನಾಡಿದರು. ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಸಮಾಜದ ವತಿಯಿಂದ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಬಿ.ಶೆಟ್ಟಿಗೇರಿ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಕೊಲ್ಲಿರ ಬೋಪಣ್ಣ, ಪೊನ್ನಂಪೇಟೆ ತಾಲೂಕು ಸವಿತ ಸಮಾಜದ ಅಧ್ಯಕ್ಷ ಪೂಣಚ್ಚಿರ ಮನೋಜ್, ನಿವೃತ್ತ ಪೊಲೀಸ್ ಸಹಾಯಕ ಉಪನಿರೀಕ್ಷಕ ಹಲ್ಚಿರ ಬೋಪಣ್ಣ, ಸಮಾಜದ ಹಿರಿಯರಾದ ಮುಡುವಂಡ ಗೌರಮ್ಮ, ಉಪಾಧ್ಯಕ್ಷರಾದ ಹೊನ್ನೆಪಂಡ ಮನು, ಕಾರ್ಯದರ್ಶಿ ಹಲ್ಚಿರ ದೇವಯ್ಯ, ಭಾರತೀಯ ಸೇನೆಯ ನಾಯಕ್ ಸುಬೇದಾರ್ ಹೊನ್ನೆಂಗಡ ರಾಬಿನ್, ನಿವೃತ್ತ ಸೈನಿಕ ನಾಯಂದಿರ ಅರುಣ, ನಿವೃತ್ತ ಸಹಾಯಕ ಪೊಲೀಸ್ ಉಪ ನಿರೀಕ್ಷಕ ತಾಪನೇರ ಸುರೇಶ್, ಹಿರಿಯರಾದ ಹಲ್ಚಿರ ಸುಬ್ರಮಣಿ ಸವಿತ ಸಮಾಜದ ಮಾಜಿ ಅಧ್ಯಕ್ಷ ವೇದಪಂಡ ಹರಿ, ಹಿರಿಯರಾದ ಚೋಂದುವAಡ ಬೇಬಿ, ಮುಡುವಂಡ ಗಿಣಿ, ವಿದ್ಯುತ್ ಗುತ್ತಿಗೆದಾರರಾದ ನಾಯಂದಿರ ಮುತ್ತಣ್ಣ, ಚಿಣ್ಣಿರ ರಾಜು, ಉದ್ಯಮಿಗಳಾದ ನಾಯಂದಿರ ದಿನೇಶ್, ಹಾಗೂ ಚೋಂದುವAಡ ದಿನೇಶ್ ಸುಬ್ಬಯ್ಯ, ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು. ತಾಪನೇರ ಶ್ರೇಯಾ ಪ್ರಾರ್ಥಿಸಿ, ಪೂಣಚ್ಚಿರ ಸುಮನ ಸ್ವಾಗತಿಸಿ, ರಾಖಿ, ಸುಮನ್, ಪಲ್ಲವಿ ನಿರೂಪಿಸಿ, ನಾಯಂದಿರ ಪಲ್ಲವಿ ಗಣಪತಿ ವಂದಿಸಿದರು.