ಪೊನ್ನಂಪೇಟೆ, ಏ. ೨೭: ಆಕಸ್ಮಿಕವಾಗಿ ಕೆರೆಗೆ ಬಿದ್ದು ಬಾಲಕಿ ಸಾವನಪ್ಪಿದ ದುರ್ಘಟನೆ ಪೊನ್ನಂಪೇಟೆ ತಾಲೂಕಿನ ಹಾತೂರು ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
ಹಾತೂರು ಗ್ರಾಮದ ಕೊಂಗೆಪAಡ ಕುಟ್ಟಪ್ಪ, ದಿವ್ಯಾ ದಂಪತಿಯ ಪುತ್ರಿ, ೮ನೇ ತರಗತಿ ವಿದ್ಯಾರ್ಥಿನಿ ಸಾನ್ವಿ (೧೩) ಮೃತ ದುರ್ದೈವಿ.
ತಾ. ೨೫ ರಂದು ಸಂಜೆ ಮನೆಯ ಹೂದೋಟದಲ್ಲಿ ಗಿಡಗಳಿಗೆ ತಾಯಿಯೊಂದಿಗೆ ಸಾನ್ವಿ ನೀರು ಹಾಕುತ್ತಿದ್ದು, ನಂತರದ ಕೆಲ ಕ್ಷಣದಲ್ಲಿ ¸ ಕಾಣೆಯಾಗಿದ್ದಳು. ಮನೆಯವರು ಹುಡುಕಿದಾಗ ಮನೆಯ ಸಮೀಪದಲ್ಲಿದ್ದ ಕೆರೆಯಲ್ಲಿ ಮುಳುಗಿ ಸಾವನಪ್ಪಿರುವುದು ಕಂಡುಬAದಿದೆ ಎಂದು ತಿಳಿದು ಬಂದಿದೆ. ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.