ಮಡಿಕೇರಿ, ಏ. ೨೬: ಮಡಿಕೇರಿ ತಾಲೂಕು ಬಿಳಿಗೇರಿ ಗ್ರಾಮದ ಶ್ರೀ ಅರ್ಧನಾರೀಶ್ವರ ದೇವಾಲಯದ ವಾರ್ಷಿಕೋತ್ಸವವು ತಾ೨೭ ರಿಂದ ಮೇ ೧ವರೆಗೆ ನಡೆಯಲಿದೆ. ಅದರ ಅಂಗವಾಗಿ ತಾ ೨೭ ರ ಸೋಮವಾರ ಬೆಳಿಗ್ಗೆ ೬-೩೦ ಗಂಟೆಗೆ ಬೊಟ್ಲಪ್ಪ ದೇವಾಲಯದಿಂದ ತೀರ್ಥ ತರುವುದು, ಗಣಪತಿ ಹೋಮ, ದೇವರಿಗೆ ತೀರ್ಥ ಅಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ

ಸಂಜೆ ೬ಗಂಟೆಗೆ ದೇವರ ಭಂಡಾರ ತರುವುದು, ದೇವರು ಬಲಿಬರುವುದು, ಅಂದಿ ಬೆಳಕು, ಪ್ರಸಾದ ವಿತರಣೆ, ಅನ್ನಸಂತರ್ಪಣೆ ತಾ೨೮ ರ ಮಂಗಳವಾರ ಬೆಳಿಗ್ಗೆ ೫ ಗಂಟೆಗೆ ದೇವರು ನೃತ್ಯ ಬಲಿ ಬರುವುದು ೧೦ ಗಂಟೆಗೆ ಸರಿಯಾಗಿ ಹಬ್ಬದ ಕಟ್ಟು ಮುರಿಯುದು, ಮಹಾಪೂಜೆ, ದೇವರ ನೆರಪು ಬಲಿ ಬರುವುದು, ವಸಂತ ಪೂಜೆ, ದೇವರ ಶಯನ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಹಾಗೂ ಸಂಜೆ ೪ ಗಂಟೆಗೆ ದೇವರ ಜಳಕ ಕಾರ್ಯ ನಡೆಯಲಿರುವುದು, ದೇವರು ನೃತ್ಯ ಬಲಿ ಬರುವುದು, ನಂತರ ಅನ್ನಸಂತರ್ಪಣೆ ತಾ೨೯. ರ ಬುಧವಾರ ಬೆಳಗ್ಗೆ ೧೦ ಗಂಟೆಗೆ ಶುದ್ಧ ಕಲಶ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ತಾ.೩೦ರ ಗುರುವಾರ ಸಂಜೆ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ೬ ಗಂಟೆಗೆ ತೋತ ಬರುವುದು, ದೀಪ ತರುವುದು ಮೇಲೇರಿಗೆ ಅಗ್ನಿ ಸ್ಪರ್ಶ, ಮೂರ್ತಿಗಳ ತೆರೆ ಅಲ್ಲದೆ ಮೇ ೧ ರಂದು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ೧೦ ಗಂಟೆಯಿAದ ಮೇಲೇರಿ ಹಾಗೂ ಅಜ್ಜಪ್ಪ ದೈವದ ಕೋಲ, ಅನ್ನಸಂತರ್ಪಣೆ , ೨.೩೦ ಗಂಟೆಗೆ ದೇವರಿಗೆ ಬೇಟೆ ನಡೆಯಲಿದೆ.