ಚೆಯ್ಯಂಡಾಣೆ, ಏ. ೨೬: ಚೆಯ್ಯಂಡಾಣೆ ಸಮೀಪದ ಚೇಲಾವರ ಗ್ರಾಮದ ಚೇಲಮಾನಿ ಶ್ರೀ ಚೋಯಿಲಿ ಭಗವತಿ ದೇವಸ್ಥಾನದ ೧೬ನೇ ವಾರ್ಷಿಕೋತ್ಸವವು ತಾ.೨೭ ರಿಂದ ವಿವಿಧ ಕಾರ್ಯಕ್ರಮಗಳ ಮೂಲಕ ೩೦ರ ವರೆಗೆ ನಡೆಯಲಿದೆ.
ತಾ : ೨೭ ರಂದು ಬೆಳಿಗ್ಗೆ ೯ಗಂಟೆಗೆ ಸ್ವಚ್ಛತಾ ಕಾರ್ಯಕ್ರಮ, ಸಂಜೆ ೫ಕ್ಕೆ ಬಾಚಮ್ಮಂಡ ತಕ್ಕರ ಮನೆಯಿಂದ ಭಂಡಾರ ಆಗಮಿಸುವುದು, ರಾತ್ರಿ ೭ ಕ್ಕೆ ಅಂದಿ ಬೊಳಕ್, ತೂಚಂಬಲಿ ಮತ್ತು ದೇವರು ಹೊರಗೆ ಬರುವುದು ಹಾಗೂ ಮಹಾ ಪೂಜೆ ನಡೆಯಲಿದೆ.
ತಾ : ೨೮ ರಂದು ಪ್ರಾತಕಾಲ ೫.೩೦ ಗಂಟೆಗೆ ದೇವರ ನೃತ್ಯ ೯.೩೦ಕ್ಕೆ ವಿಶೇಷ ಪೂಜೆ,೧೧ ಕ್ಕೆ ಎತ್ತು ಪೋರಾಟ, ತೆಂಗಿನಕಾಯಿಗೆ ಗುಂಡು ಹೊಡೆಯುವುದು,ಮಹಾ ಪೂಜೆ ನಂತರ ಅನ್ನದಾನ, ಅಪರಾಹ್ನ ೨ ಗಂಟೆಗೆ ದೇವರು ಹೊರಗೆ ಬರುವುದು ಮತ್ತು ನೆರಪು ನೃತ್ಯ, ೩ ಗಂಟೆಗೆ ದೇವರು ಪೋನ್ನೊಲ ಸಾರ್ಥಾವು ದೇವಸ್ಥಾನಕ್ಕೆ ಮಲೆ ಮುರಿಯುವುದು, ಪೋನ್ನೊಲ ದೇವಸ್ಥಾನದಲ್ಲಿ ಪೂಜೆ ಸಂಜೆ ೭ಕ್ಕೆ ಮಂಟಪದಲ್ಲಿ ವಸಂತ ಪೂಜೆ ರಾತ್ರಿ ೮ ಕ್ಕೆ ಮಹಾಪೂಜೆ ಮತ್ತು ಅನ್ನದಾನ, ತಾ.೨೯ ರಂದು ಬೆಳಿಗ್ಗೆ ೯ ಗಂಟೆಯಿAದ ವಿಶೇಷ ಪೂಜೆ ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ, ೧.೩೦ ಕ್ಕೆ ವಾರ್ಷಿಕ ಮಹಾಸಭೆ, ೩ ಗಂಟೆಗೆ ದೇವರು ಅವವೃತ ಸ್ನಾನಕ್ಕೆ ಹೊರಡುವುದು ನಂತರ ದೇವರ ನೃತ್ಯ, ಮಹಾಪೂಜೆ, ಅನ್ನದಾನ ನಡೆಯಲಿದೆ.
ತಾ.೩೦ ರ ಮಂಗಳವಾರ ಬೆಳಿಗ್ಗೆ ೧೦ ಗಂಟೆಗೆ ಭಂಡಾರ ಲೆಕ್ಕ ಮಾಡುವುದು, ಶುದ್ಧ ಕಲಶ ಸಮಾರಾಧನೆ ಪೂಜೆ, ಮಂತ್ರಾಕ್ಷತೆ, ದೇವತಕ್ಕರ ಮನೆಗೆ ಭಂಡಾರ ಇಳಿಯುವ ಕಾರ್ಯಕ್ರಮ ನಡೆಯಲಿದೆ.