ನಾಪೋಕ್ಲು, ಏ. ೨೬: ಇಲ್ಲಿಗೆ ಸಮೀಪದ ನೆಲಜಿ ಗ್ರಾಮದ ಶ್ರೀ ಇಗ್ಗುತಪ್ಪ ಭಕ್ತಜನ ಸಂಘದ ವತಿಯಿಂದ ಮೇ ೧ ರಂದು ಭಕ್ತ ಸಮಾರಾಧನೆ ಉತ್ಸವ ಮತ್ತು ವಾರ್ಷಿಕ ಮಹಾಸಭೆ ನಡೆಯಲಿದೆ.
ಉತ್ಸವದ ಅಂಗವಾಗಿ ಅಂದು ತುಲಾಭಾರ ಸೇವೆ, ದೇವರ ಬಲಿ, ನೃತ್ಯ ಹಾಗೂ ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಅದೇ ದಿನ ಸಂಘದ ವಾರ್ಷಿಕ ಮಹಾಸಭೆಯನ್ನು ಬೆಳಿಗ್ಗೆ ೧೦.೩೦ಕ್ಕೆ ದೇವಸ್ಥಾನದ ಆವರಣದಲ್ಲಿ ಸಂಘದ ಅಧ್ಯಕ್ಷ ಮುಕ್ಕಾಟಿರ ಎಂ. ವಿನಯ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಗುತ್ತದೆ. ತುಲಾಭಾರ ಸೇವೆ ಮಾಡಿಸುವ ಭಕ್ತಾದಿಗಳು ಹೆಚ್ಚಿನ ಮಾಹಿತಿಗೆ ಮೊ. ೯೪೪೯೫೫೪೯೯೭, ೮೭೬೨೭೦೩೪೮೭ ಸಂಪರ್ಕಿಸಬಹುದಾಗಿದೆ.