ವೀರಾಜಪೇಟೆ, ಏ. ೨೬: ಕೊಡವ ಜಮ್ಮಾ ಮುಸ್ಲಿಂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಅರಮೇರಿಯಲ್ಲಿರುವ ಎಸ್‌ಎಂಎಸ್ ಮೈದಾನದಲ್ಲಿ ಆಯೋಜನೆಗೊಂಡ ಪುದಿಯಂಡ ಕ್ರಿಕೆಟ್ ಪಂದ್ಯಾವಳಿಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಬ್ಯಾಟ್ ಬೀಸುವುದರ ಮೂಲಕ ಉದ್ಘಾಟಿಸಿದರು. ಈ ಪಂದ್ಯಾಟದಲ್ಲಿ ಕೊಡವ ಜಮ್ಮಾ ಮುಸ್ಲಿಂ ಕುಟುಂಬದ ತಂಡಗಳು ಭಾಗವಹಿಸುತ್ತಿದ್ದು, ಕ್ರಿಕೆಟ್ ಪಂದ್ಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ಅತ್ಯಂತ ಪ್ರತಿಭಾವಂತ ಯುವಕರನ್ನು ಹೊಂದಿರುವ ಈ ಕೌಟುಂಬಿಕ ಕ್ರಿಕೆಟ್ ಪಂದ್ಯಾಟವು ಯುವ ಕ್ರಿಕೆಟ್ ಪ್ರತಿಭೆಗಳನ್ನು ನಾಡಿಗೆ ಪರಿಚಯಿಸುವಂತಾಗಲಿ ಎಂದು ಹಾರೈಸಿದರು. ಈ ಸಂದರ್ಭ ದುದ್ದಿಯಂಡ ಸೂಫಿ ಹಾಜಿ, ಎರ್ಮು ಹಾಜಿ, ಪುದಿಯಂಡ ತಕ್ಕ ಮುಖ್ಯಸ್ಥ ಮೊಹಮ್ಮದ್, ಹುಸ್ಮಾನ್, ಅಬ್ದುಲಾ, ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹನೀಫ್, ಪುರಸಭೆ ಸದಸ್ಯ ಮಹಮ್ಮದ್ ರಾಫಿ, ಮಿತ್ತಲಂಡ ಇಸ್ಮಾಯಿಲ್, ಆಸಾಫ್, ಹಾಜಿ, ತಾಲೂಕು ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ರಫೀಕ್, ಹಂಸ, ಮುನೀರ್, ಪವಿಲ್, ಹಾಗೂ ಪ್ರಮುಖರು ಉಪಸ್ಥಿತರಿದ್ದರು.