ವೀರಾಜಪೇಟೆ, ಏ. ೨೬: ಜಿಲ್ಲಾ ಶಸ್ತ್ರಚಿಕಿತ್ಸಕರ ಕಚೇರಿ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆ, ಮಡಿಕೇರಿ ಇವರ ವತಿಯಿಂದ ವಿರಾಜಪೇಟೆಯ ಅರಮೆರಿ ಕಳಂಚೆರಿ ಮಠದಲ್ಲಿ ಉಚಿತ ಕೃತಕ ಕಾಲು ಜೋಡಣೆ ಉಪಕರಣ ವಿತರಣೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಮಠದ ಸಭಾಂಗಣದಲ್ಲಿ ನಡೆಯಿತು. ಅರಮೇರಿ ಮಠದ ಎಸ್‌ಎಂಎಸ್ ಶಾಲಾ ಆವರಣದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು.

ಉಚಿತ ವೈದ್ಯಕೀಯ ಹಾಗೂ ಉಚಿತ ಕೃತಕ ಕಾಲು ವಿತರಣಾ ಶಿಬಿರದ ಉದ್ಘಾಟನೆಯನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ ಅವರು ನೆರವೇರಿಸಿ ಮಾತನಾಡಿ, ಶ್ರೀ ಅರಮೇರಿ ಕಳಂಚೇರಿ ಮಠದ ಸಹಯೋಗದಲ್ಲಿ ಇಂತಹ ಸಾಮಾಜಿಕ ಕಾರ್ಯಕ್ರಮ ಆಯೋಜನೆಗೊಂಡಿರುವುದು ನಾಡಿನ ಅನೇಕ ಬಡ ಜನರಿಗೆ ಅತ್ಯಂತ ಅನುಕೂಲಕಾರಿಯಾಗಿದೆ. ಶಿಕ್ಷಣ ದೊಂದಿಗೆ ಇಂತಹ ಸಾಮಾಜಿಕ ಕಳಕಳಿಯ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಿದೆ. ಇದರ ಸದುಪಯೋಗವನ್ನು ಅಗತ್ಯ ಇರುವ ಎಲ್ಲರೂ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಉಚಿತವಾಗಿ ಕೃತಕ ಕಾಲು ಹಂಚುವಿಕೆ ಅನೇಕ ಜನರಿಗೆ ಮರುಜನ್ಮ ನೀಡಿದಕ್ಕೆ ಸಮ. ಇದರಿಂದ ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರೊಂದಿಗೆ ಉತ್ತಮ ಬದುಕು ಮುಂದುವರಿಸಲು ಸಹಕಾರಿಯಾಗಲಿದೆ ಎಂದÀರು. ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕಾರ್ಯಕ್ರಮಕ್ಕೆ ಶುಭ ಕೋರಿ ಮಾತನಾಡಿ ಎಲ್ಲರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಪ್ರತಿದಿನ ಯೋಗ ಧ್ಯಾನ ಮಾಡುವುದರೊಂದಿಗೆ ಉತ್ತಮ ಆಹಾರವನ್ನು ಸೇವಿಸಬೇಕು ಎಂದು ಸಲಹೆ ನೀಡಿದರು.

ಮುಂದಿನ ದಿನಗಳಲ್ಲಿ ಶ್ರೀಮಠದ ವತಿಯಿಂದ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಕೊಡಗು ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡಾಕ್ಟರ್ ಲೋಕೇಶ್, ಡಾಕ್ಟರ್ ನಂಜುAಡಯ್ಯ, ಡಾ. ಮೋಹನ್ ಅಪ್ಪಾಜಿ ಸೇರಿದಂತೆ ಇತರ ಆಡಳಿತ ವರ್ಗದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವೈದ್ಯಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಪವನ್, ಶಸ್ತçಚಿಕಿತ್ಸಾ ವಿಭಾಗದ ಡಾಕ್ಟರ್ ಅಕ್ಷತಾಮ ಕೀಲು ಮತ್ತು ಮೂಳೆ ವಿಭಾಗದ ಡಾ. ಜೀವನ್, ಈಎನ್‌ಟಿ ವಿಭಾಗದ ಸೀನಿಯರ್ ಪ್ರೆಸಿಡೆಂಟ್ ಡಾಕ್ಟರ್ ಮೌನೇಶ್, ಕ್ಷಯ ಮತ್ತು ಎದೆ ರೋಗ ವಿಭಾಗದ ಸೀನಿಯರ್ ಪ್ರೆಸಿಡೆಂಟ್ ಡಾಕ್ಟರ್ ನಿಶಾ ಬೋಪಣ್ಣ, ಜಿಲ್ಲಾ ಸಂಯೋಜಕರುಗಳು, ಗಣಕಯಂತ್ರ ಸಹಾಯಕರು, ಆರೋಗ್ಯ ಮಿತ್ರದವರು ಸೇರಿದಂತೆ ಇತರ ವೈದ್ಯಕೀಯ ವಿಭಾಗದ ತಜ್ಞರುಗಳು, ವೈದ್ಯರುಗಳು ಕಾರ್ಯಕ್ರಮದಲ್ಲಿ ಹಾಜರಿದ್ದು ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಗೊಳಿಸಿದರು. ಇದೇ ಸಂದರ್ಭ ಕಾರ್ಯಕ್ರಮದಲ್ಲಿ ಶಾಸಕ ಪೊನ್ನಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.