ಮಡಿಕೇರಿ, ಏ. ೨೬: ಮಡಿಕೇರಿಯ ಐತಿಹಾಸಿಕ ದೇವಾಲಯಗಳಾದ ಶ್ರೀ ಓಂಕಾರೇಶ್ವರ - ಆಂಜನೇಯ ಸಮುಚ್ಛಯ ದೇವಾಲಯಗಳ ಸನ್ನಿಧಿಯಲ್ಲಿ ನೂತನವಾಗಿ ನವಗ್ರಹ ಪ್ರತಿಷ್ಠಾಪನಾ ಕಾರ್ಯವನ್ನು ಇಂದು ನಡೆಸಲಾಯಿತು. ಉಚ್ಚಿಲದ ವೇದಬ್ರಹ್ಮ ಶ್ರೀ ನೀಲೇಶ್ವರ ತಂತ್ರಿಯವರ ನೇತೃತ್ವದಲ್ಲಿ ಈ ಕಾರ್ಯ ನಡೆಯಿತು. ಅವರು ಈ ಸಂದರ್ಭ ಭಕ್ತಾದಿಗಳನ್ನುದ್ದೇಶಿಸಿ ಮಾತನಾಡಿ, ಓಂಕಾರೇಶ್ವರವು ಐತಿಹಾಸಿಕ ದೇವಾಲಯವಾಗಿದ್ದು, ರಾಜರ ಆಳ್ವಿಕೆ ಕಾಲದಲ್ಲಿ ಪ್ರತಿಷ್ಠಾಪನೆಗೊಂಡಿತು. ಆಂಜ ನೇಯ ದೇವಾಲಯ ಇದಕ್ಕಿಂತಲೂ ಪ್ರಾಚೀನವಾದುದು. ಆಗ ರಾಜರ ಕಾಲದ ಯೋಧರು ವೀರತನದ ಸಂಕೇತವಾಗಿ ಆಂಜನೇಯ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು ಎಂದರು. ಇದೀಗ ಭಕ್ತಾದಿಗಳ ಆಶಯಕ್ಕೆ ಪೂರಕವಾಗಿ ಈ ಸನ್ನಿಧಿಯಲ್ಲಿ ನವಗ್ರಹಗಳ ಮೂರ್ತಿಗಳೂ ಪ್ರತಿಷ್ಠಾಪನೆಗೊಳ್ಳುತ್ತಿರುವುದು ಭಕ್ತಾದಿಗಳಿಗೆ ವರದಾಯಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

೪೪ನೇ ಪುಟಕ್ಕೆ

(ಮೊದಲ ಪುಟದಿಂದ) ದೇವಾಲಯ ಆವರಣದಲ್ಲಿ ನಿನ್ನೆ ರಾತ್ರಿಯಿಂದ ಇಂದು ಮಧ್ಯಾಹ್ನ ತನಕ ಪುಣ್ಯಾಹ, ಆರೂಢ ಪರಿಗ್ರಹ, ನವಗ್ರಹ ಬಿಂಬ ಪರಿಗ್ರಹ, ಜಲಾಧಿವಾಸ, ವಾಸ್ತುರಾಕ್ಷೆÆÃಘ್ನ ಹೋಮ, ವಾಸ್ತು ಬಲಿ, ಗಣಪತಿ ಹೋಮ, ಬಿಂಬ ಶುದ್ಧಿ ಸಾನ್ನಿಧ್ಯ ಕಲಶ ಪೂಜೆಗಳು ನಡೆದವು ಎಂದರು. ಈ ಸಂದರ್ಭ ಶ್ರೀ ಓಂಕಾರೇಶ್ವರ ಹಾಗೂ ಆಂಜನೇಯ ದೇವಾಲಯಗಳ ಪುನರ್ ಪ್ರತಿ ಷ್ಠಾಪನಾ ವಾರ್ಷಿಕೋತ್ಸವ ಕಾರ್ಯ ವೂ ನಡೆದಿದೆ ಎಂದರು.

ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭ ಆಗಮಿಸಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಶಿಲ್ಪಿ ಮಂಜುನಾಥ್ ಮತ್ತು ಇಂಜಿನಿಯರ್ ರೋಷನ್ ಇವರುಗಳನ್ನು ಸನ್ಮಾನಿಸಿದರು. ಆಂಜನೇಯ ದೇವಾಲಯದ ಸುತ್ತ ವಿಸ್ತರಣೆಯೊಂದಿಗೆ ಈಗ ನಿರ್ವಹಿಸಿರುವ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿದರು. ಮುಂದೆ ಓಂಕಾರೇಶ್ವರ ದೇವಾಲಯದ ಹೆಚ್ಚಿನ ಅಭಿವೃದ್ಧಿಗೆ ಸರಕಾರೀ ಅನುದಾನದಿಂದ ರೂ. ೧ ಕೋಟಿ ನೆರವು ನೀಡುವುದಾಗಿ ಪುನರುಚ್ಚರಿಸಿದರು. ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಅವರೂ ಆಗಮಿಸಿ ಕೆಲಕಾಲ ದೇವಾಲಯ ಉತ್ಸÀವವನ್ನು ವೀಕ್ಷಿಸಿ ತೆರಳಿದರು. ಈ ಸಂದರ್ಭ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.

ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ, ಸದಸ್ಯರುಗಳಾದ ಅಂಬೆಕಲ್ ಕುಶಾಲಪ್ಪ, ಪ್ರಕಾಶ್ ಆಚಾರ್ಯ, ವಿಶಾಲ್ ನಂದಕುಮಾರ್, ಸಂತೋಷ್ ಭಟ್, ಜಿ. ರಾಜೇಂದ್ರ, ಕನ್ನಂಡ ಕವಿತಾ, ಕೆ. ವೀಣಾಕ್ಷಿ, ಕಾರ್ಯ ನಿರ್ವಹಣಾಧಿಕಾರಿ ದೇವರಾಜು ಮೊದಲಾದವರು ಉಪಸ್ಥಿತರಿದ್ದರು.