ಮಡಿಕೇರಿ, ಏ. ೨೬: ಕೊಡವ ಕೌಟುಂಬಿಕ ಹಾಕಿ ಉತ್ಸವ ಇದೀಗ ಮತ್ತಷ್ಟು ರೋಚಕ ಘಟದತ್ತ ತಲುಪಿದೆ. ಚೇನಂಡ ಕಪ್ ಹಾಕಿ ನಮ್ಮೆಯ ಪ್ರಶಸ್ತಿ ಸುತ್ತಿನಲ್ಲಿ ಇದೀಗ ಕೇವಲ ೧೬ ತಂಡಗಳು ಮಾತ್ರ ಬಾಕಿ ಉಳಿದಿವೆ. ತಾ. ೨೭ ರಿಂದ (ಇಂದಿನಿAದ) ಪ್ರಿ ಕ್ವಾರ್ಟರ್ ಫೈನಲ್ ಪಂದ್ಯ ಆರಂಭಗೊಳ್ಳಲಿದ್ದು, ಮೊದಲ ದಿನ ಎಂಟು ತಂಡಗಳ ನಡುವೆ ಹೋರಾಟ ನಡೆಯಲಿದೆ.

ಈ ಬಾರಿಯ ಪಂದ್ಯಾವಳಿಯಿAದ ಮಾಜಿ ಚಾಂಪಿಯನ್‌ಗಳಾದ ಕಲಿಯಂಡ, ಅಂಜಪರವAಡ, ಚೇಂದAಡ, ಕೂತಂಡ, ಕುಪ್ಪಂಡ (ಕೈಕೇರಿ) ತಂಡಗಳು ಈಗಾಗಲೇ ನಿರ್ಗಮಿಸಿವೆ. ನಿನ್ನೆ ನಡೆದ ಪಂದ್ಯದಲ್ಲಿ ಬಲಿಷ್ಠ ಚೇಂದAಡ, ಕೂತಂಡ, ಕುಪ್ಪಂಡ (ಕೈಕೇರಿ) ಪರಾಭವಗೊಂಡರೆ, ಕಲಿಯಂಡ ಹಾಗೂ ಅಂಜಪರವAಡ ಈ ಹಿಂದೆಯೇ ಹೊರಬಿದ್ದಿತ್ತು.

ಇದೀಗ ಕಣದಲ್ಲಿ ೧೬ ಬಲಿಷ್ಠ ತಂಡಗಳು ಉಳಿದಿವೆ. ಸೊಮವಾರದಿಂದ ಒಂದೇ ಮೈದಾನದಲ್ಲಿ ಪಂದ್ಯ ಜರುಗಲಿದೆ. ಈ ಪೈಕಿ ಮಾಜಿ ಚಾಂಪಿಯನ್‌ಗಳಾದ ಪಳಂಗAಡ, ನೆಲ್ಲಮಕ್ಕಡ, ಕುಲ್ಲೇಟಿರ, ಹಾಲಿ ಚಾಂಪಿಯನ್ ಮಂಡೇಪAಡ ತಂಡಗಳು ೪೪ನೇ ಪುಟಕ್ಕೆ

(ಮೊದಲ ಪುಟದಿಂದ) ಮತ್ತೊಂದು ಪ್ರಶಸ್ತಿಯ ಕನಸ್ಸಿನಲ್ಲಿವೆ. ಈ ತಂಡಗಳೊAದಿಗೆ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಚೆಪ್ಪುಡಿರ, ಪರದಂಡ, ಪುಳ್ಳಂಗಡ, ಬಿದ್ದಾಟಂಡ, ಪೆಮ್ಮಂಡ, ಸಣ್ಣುವಂಡ, ಪಾಡೆಯಂಡ, ಕೋಳೆರ, ಮೂಕೋಂಡ, ಕಂಬೀರAಡ, ಇಟ್ಟೀರ, ಅರಮಣಮಾಡ ತಂಡಗಳು ಕಣದಲ್ಲಿವೆ.

- ಕಾಯಪಂಡ ಶಶಿ ಸೋಮಯ್ಯ