ವೀರಾಜಪೇಟೆ, ಏ. ೨೫: ವೀರಾಜಪೇಟೆಯ ಕೊಡವ ಸೌಹಾರ್ದ ಸಹಕಾರಿ ಸಂಸ್ಥೆಯ ೨೦೨೫-೨೬ನೇ ಸಾಲಿನ ವಾರ್ಷಿಕ ವಹಿವಾಟು ೪೨ ಕೋಟಿ ರೂಪಾಯಿಗಳಾಗಿದೆ ಎಂದು ಸಹಕಾರಿ ಸಂಸ್ಥೆಯ ಅಧ್ಯಕ್ಷ ನೆಲ್ಲಮಕ್ಕಡ ಪಿ. ಉಮೇಶ್ ಮುತ್ತಣ್ಣ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರಿ ಸಂಸ್ಥೆ ಪ್ರಾರಂಭಗೊAಡು ಕಡಿಮೆ ಅವಧಿಯಲ್ಲಿ ಆಡಳಿತ ಮಂಡಳಿ ಹಾಗೂ ಎಲ್ಲಾ ಸದಸ್ಯರುಗಳ ಸಹಕಾರದಿಂದ ದೊಡ್ಡ ಮೊತ್ತದ ವ್ಯವಹಾರ ನಡೆಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಈಗಾಗಲೇ ೧೪೦೦ ಸದಸ್ಯರುಗಳನ್ನು ಹೊಂದಿದ್ದು, ೧.೧೦ ಕೋಟಿ ಪಾಲು ಬಂಡವಾಳ ಇದ್ದು, ೮.೬೦ ಕೋಟಿ ಒಟ್ಟು ಠೇವಣಾತಿಗಳಾಗಿದೆ. ೭.೭೦ ಕೋಟಿ ಸಾಲ ವಿತರಿಸಲಾಗಿದ್ದು, ಇತರೆ ಬ್ಯಾಂಕ್‌ಗಳಲ್ಲಿ ೩.೨೦ ಕೋಟಿ ಹೂಡಿಕೆ ಮಾಡಲಾಗಿದೆ. ೨೦೨೫-೨೬ನೇ ಸಾಲಿಗೆ ೨೬.೭೦ ಲಕ್ಷ ಲಾಭ ಗಳಿಸಿದೆ.

ಈ ಸಹಕಾರಿಯಲ್ಲಿ ನೆಫ್ಟ್, ಆರ್.ಟಿ.ಜಿ.ಎಸ್, ನಂತಹ ಕ್ಯಾಶ್‌ಲೆಸ್ ಬ್ಯಾಂಕಿAಗ್ ಸೇವೆಗಳು ಲಭ್ಯವಿದ್ದು, ಸದಸ್ಯರುಗಳು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ವಾರ್ಷಿಕ ಮುಕ್ತಾಯದ ಅವಧಿಗೆ ಶೇ. ೯೭ರಷ್ಟು ಸಾಲ ವಸೂಲಾತಿ ಆಗಿದೆ ಎಂದರು. ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಭಾರತೀಯ ರಕ್ಷಣಾ ಪಡೆಯಲ್ಲಿ ಹಗಲು, ರಾತ್ರಿ ಎನ್ನದೆ ದೇಶದ ರಕ್ಷಣೆಗಾಗಿ ತೊಡಗಿ ಕಾರ್ಯನಿರ್ವಹಿಸಿದ ನಿವೃತ್ತ ಯೋಧರು ಹಾಗೂ ಹಾಲಿ ಯೋಧರುಗಳಿಗೆ ವೀರಾಜಪೇಟೆ ಕೊಡವ ಸೌಹಾದÀð ಸಹಕಾರಿಯಲ್ಲಿ ಸದಸ್ಯತ್ವವನ್ನು ಹೊಂದಿದ, ಹೊಂದಲಿರುವ ಸಂದರ್ಭದಲ್ಲಿ ಅವರುಗಳು ನಮ್ಮ ಬ್ಯಾಂಕಿನಲ್ಲಿ ಹೂಡುವ ಠೇವಣಿಗಳಿಗೆ ಹೆಚ್ಚಿನ ಬಡ್ಡಿ (ನಿರಖು ಠೇವಣಿ) ಹಾಗೂ ಇವರುಗಳು ಅಪೇಕ್ಷಿತ ಸಾಲ ಪಡೆಯುವ ಸಂದರ್ಭದಲ್ಲಿ ಸಾಮಾನ್ಯ ಬಡ್ಡಿ ದರಕ್ಕಿಂತ ಹೆಚ್ಚಿನ ರಿಯಾಯಿತಿ ನೀಡಲಾಗುತ್ತಿದೆ. ಈ ಸಾಲಿನಿಂದ ಮರಣ ಹೊಂದಿದ ಸೈನಿಕರ ಪತ್ನಿಯರಿಗೂ ಈ ವಿಶೇಷ ಸೌಲಭ್ಯ ಕಲ್ಪಸಲಾಗುವುದು ಎಂದು ಹೇಳಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಚೇಂದAಡ ವಸಂತ್ ಕುಮಾರ್, ನಿರ್ದೇಶಕರುಗಳಾದ ವಾಂಚಿರ ನಾಣಯ್ಯ, ವಾಟೇರಿರ ಪೂವಯ್ಯ, ಚೇಂದ್ರಿಮಾಡ ನಂಜಪ್ಪ, ನೆಲ್ಲಚಂಡ ಭೀಮಯ್ಯ ಕಾಂಡAಡ ಚರ್ಮಣ, ಐನಂಡ ಗಣಪತಿ, ಕೇಳಪಂಡ ವಿಶ್ವನಾಥ್, ಕಾಳೇಂಗಡ ಬಿ. ತಿಮ್ಮಯ್ಯ, ಬೊಳ್ಯಪಂಡ ಸುರೇಶ್, ಕೊಂಗAಡ ನಾಣಯ್ಯ, ಮೇಕೇರಿರ ಪಾಲಿ ಸುಬ್ರಮಣಿ, ಪಟ್ಟಡ ದಿವ್ಯಾ, ಕಾರ್ಯನಿರ್ವಣಾಧಿಕಾರಿ ಪಟ್ಟಡ ಟೀನಾ ಉಪಸ್ಥಿತರಿದ್ದರು.