ಮಡಿಕೇರಿ, ಏ. ೨೪: ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ವತಿಯಿಂದ ಶ್ರೀ ಓಂಕಾರೇಶ್ವರ ಹಾಗೂ ಶ್ರೀ ಆಂಜನೇಯ ದೇವಾಲಯಗಳ ವಾರ್ಷಿಕ ಪ್ರತಿಷ್ಠಾ ದಿನಾಚರಣೆ ತಾ. ೨೬ ರಂದು ನಡೆಯಲಿದೆ.

ಶ್ರೀ ಆಂಜನೇಯ ದೇವಾಲಯ ಆವರಣದಲ್ಲಿ ನೂತನವಾಗಿ ನವಗ್ರಹ ಪ್ರತಿಷ್ಠಾಪನೆ ನಡೆಯಲಿದೆ. ತಾ. ೨೫ ರಂದು ಸಂಜೆ ೬ ಗಂಟೆಗೆ ಪ್ರಾರ್ಥನೆ, ಆಂಜನೇಯ ಗುಡಿಯಲ್ಲಿ ಪುಣ್ಯಾಹ, ಆರೂಢ ಪರಿಗ್ರಹ ಹಾಗೂ ನವಗ್ರಹ ಬಿಂಬ ಪರಿಗ್ರಹ, ಜಲಾಧಿವಾಸ, ವಾಸ್ತುರಾಕ್ಷೆÆÃಘ್ನ ಹೋಮ, ವಾಸ್ತು ಬಲಿ ಹಾಗೂ ಮಹಾಪೂಜೆ ನಡೆಯಲಿದೆ. ತಾ. ೨೬ ರಂದು ಬೆಳಿಗ್ಗೆ ೭ ರಿಂದ ಗಣಪತಿ ಹೋಮ, ಬಿಂಬ ಶುದ್ಧಿ, ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಯವರಿAದ ೧೧ ಗಂಟೆಗೆ ಮಿಥುನ ಲಗ್ನದ ಶುಭ ಮುಹೂರ್ತದಲ್ಲಿ ನವಗ್ರಹ ಪ್ರತಿಷ್ಠಾಪನೆ, ಸಾನ್ನಿಧ್ಯ ಕಳಶ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ.