ಚೆಯ್ಯAಡಾಣೆ, ಏ. ೨೪: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಾಂಸ್ಕೃತಿಕ ಮತ್ತು ಸಾಹಿತ್ಯ ಪರಿಷತ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಸಾಧಕರಿಗೆ ಪ್ರಶಸ್ತಿಯನ್ನು ಪ್ರಧಾನ ಸಮಾರಂಭವನ್ನು ತಾ. ೨೬ ರಂದು ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಾಂಸ್ಕೃತಿಕ ಮತ್ತು ಸಾಹಿತ್ಯ ಪರಿಷತ್ ರಾಜ್ಯ ಉಪಾಧ್ಯಕ್ಷ ಗಣೇಶ್ ನಿಲುವಾಗಿಲು ಮಾಹಿತಿ ನೀಡಿದರು.
ವೀರಾಜಪೇಟೆ ಪತ್ರಕರ್ತರ ವೇದಿಕೆಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಸರ್ಕಾರಿ ನೌಕರರ ಒತ್ತಡವನ್ನು ನಿವಾರಿಸಿ ಅವರಲ್ಲಿರುವ ಮನೋರಂಜನೆಯ ಕೊರತೆಯನ್ನು ಹೋಗಲಾಡಿಸುವುದರೊಂದಿಗೆ ಕನ್ನಡ ನಾಡು, ನುಡಿ ಸಾಹಿತ್ಯ ,ಕಲೆ ಬೆಳೆಸುವುದರೊಂದಿಗೆ ಸರ್ಕಾರಿ ನೌಕರರಲ್ಲಿ ಇರುವಂತಹ ಕಲೆ ಮತ್ತು ಪ್ರತಿಭೆಯನ್ನು ಹೊರ ಹಾಕುವ ಉದ್ದೇಶದಿಂದ ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡುವ ದೃಷ್ಟಿಯಿಂದ ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಾಂಸ್ಕೃತಿಕ ಮತ್ತು ಸಾಹಿತ್ಯ ಪರಿಷತನ್ನು ಆರಂಭಿಸಲಾಗಿದೆ. ಏಪ್ರಿಲ್ ೨೬ರ ಭಾನುವಾರದಂದು ಧಾರವಾಡ ವಿದ್ಯಾವರ್ಧಕ ಸಂಘದ ಪಾಟೀಲ್ ಪುಟ್ಟಪ್ಪ ಸಭಾಂಗಣದಲ್ಲಿ ರಾಜ್ಯ ಅಧ್ಯಕ್ಷರಾದ ರಮಾರವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಾಧಕರಿಗೆ ಕಾಯಕ ರತ್ನ ಪ್ರಶಸ್ತಿಯನ್ನು ವಿತರಿಸಲಾಗುವುದು. ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವತಿಯಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ.ಮುಂದಿನ ದಿನಗಳಲ್ಲಿ ಜಿಲ್ಲಾ ಪರಿಷತ್ ವತಿಯಿಂದ ಜಿಲ್ಲಾಮಟ್ಟದಲ್ಲಿ ಸರ್ಕಾರಿ ನೌಕರರಿಗೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಾಂಸ್ಕೃತಿಕ ಮತ್ತು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಕಮಲಮ್ಮ ಮಾತನಾಡಿ ಪ್ರಸ್ತುತ ಕಾಲಘಟ್ಟದಲ್ಲಿ ಸರ್ಕಾರಿ ನೌಕರರು ಹೆಚ್ಚಿನ ಒತ್ತಡದಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದು ಮಾನಸಿಕವಾಗಿ ದೈಹಿಕವಾಗಿ ಬಳಲುತ್ತಿರುತ್ತಾರೆ. ಇಂತಹ ಸರ್ಕಾರಿ ನೌಕರರ ಮನೋರಂಜನೆ ಹಾಗೂ ಅವರಲ್ಲಿರುವ ಕಲೆಯನ್ನು ಪೋಷಿಸುವುದರೊಂದಿಗೆ ಇತರರಿಗೆ ಪ್ರದರ್ಶನ ಮಾಡಲು ಉತ್ತಮವಾದ ವೇದಿಕೆಯನ್ನು ಕಲ್ಪಿಸಿ ಕೊಡುವುದರೊಂದಿಗೆ ಸರ್ಕಾರಿ ನೌಕರರಲ್ಲಿ ಸಾಹಿತ್ಯ, ಕಲೆ,ದೇಶ ಪ್ರೇಮ ,ಪರಿಸರದ ಕಾಳಜಿ,ಭ್ರಾತೃತ್ವ,ಸಮಾನತೆ ಮುಂತಾದAತಹ ವಿಚಾರ ಇನ್ನಷ್ಟು ಬಲವಾಗಿ ಬೆಳೆಸುವ ಉದ್ದೇಶದಿಂದ ಈ ಸಂಘವನ್ನು ಆರಂಭಿಸಲಾಗಿದ್ದು ಸರ್ವ ಸರ್ಕಾರಿ ನೌಕರರು ಅತಿ ಉತ್ಸಾಹದಿಂದ ಧಾರವಾಡದಲ್ಲಿ ನಡೆಯುವ ಪದಗ್ರಹಣ ಹಾಗೂ ಪರಿಷತ್ತಿನ ವತಿಯಿಂದ ಮುಂದೆ ಜಿಲ್ಲಾ ಮಟ್ಟದಲ್ಲಿ ನಡೆಯುವಂತಹ ಕಾರ್ಯಕ್ರಮಕ್ಕೆ ಸಕ್ರಿಯವಾಗಿ ಭಾಗವಹಿಸಬೇಕೆಂದರು. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಾಂಸ್ಕೃತಿಕ ಮತ್ತು ಸಾಹಿತ್ಯ ಪರಿಷತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಪಿ.ನೀಲಮ್ಮ, ಸಹ ಕಾರ್ಯದರ್ಶಿ ಟಿ.ಮಲ್ಲಿಕಾ ಉಪಸ್ಥಿತರಿದ್ದರು.