ಚೆಯ್ಯಂಡಾಣೆ, ಏ. ೨೪: ಸ್ಥಳೀಯ ನರಿಯಂದಡ ಶ್ರೀ ಭಗವತಿ ವಿಷ್ಣುಮೂರ್ತಿ ಹಾಗೂ ಕ್ಷೇತ್ರಪಾಲ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನಡೆಯಿತು.
ಮಹಾ ಗಣಪತಿ ಹೋಮ, ಪ್ರಸಾದ ವಿತರಣೆ, ಮಧ್ಯಾಹ್ನ ಮಹಾ ಪೂಜೆ ಮತ್ತು ತೀರ್ಥ ಪ್ರಸಾದ ವಿತರಣೆ ಸಂಜೆ ಚೆಯ್ಯಂಡ ಕುಟುಂಬದಿAದ ಭಂಡಾರ ಆಗಮಿಸುವ ಸಂಪ್ರದಾಯ, ಕೊಡಿ ಮರ ನಿಲ್ಲುವುದು, ದೇವಸ್ಥಾನಕ್ಕೆ ಮೂರು ಸುತ್ತು ಬಲಿ ಬರುವುದು. ಅಂದಿ ಭೊಳಕು ನಡೆಯಿತು ನಂತರ ಮಹಾಪೂಜೆ ಇರು ಬೆಳಕು ಚಂಡಿಕಾ ಹೋಮ, ತೀರ್ಥ ಪ್ರಸಾದ, ನೆರಪು ಬಲಿ, ದೇವರ ನೃತ್ಯ, ಅಲಂಕಾರ ಪೂಜೆ, ಸಂಜೆ ಶ್ರೀ ಭಗವತಿ ದೇವರ ಅವಭೃತ ಸ್ನಾನ ದೇವರ ನೃತ್ಯ, ವಸಂತ, ವಿಷ್ಣುಮೂರ್ತಿ ಮೇಲೇರಿಗೆ ಸೌದೆ ಕಡಿಯುವುದು, ಭಗವತಿ ದೇವರ ಸನ್ನಿಧಿಯಲ್ಲಿ ಕಲಶ, ಕ್ಷೇತ್ರಪಾಲ ಸನ್ನಿಧಿಯಲ್ಲಿ ಕ್ಷೇತ್ರಪಾಲ ಕೋಲ, ವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿ ವಿವಿಧ ದೈವ ಕೋಲವು, ವಿಷ್ಣು ಮೂರ್ತಿ ಕೋಲವು ವಿಷ್ಣುಮೂರ್ತಿ ದೇವರ ಪ್ರಸಾದ (ಭಾರಣಿ) ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು. ಈ ಬಾರಿ ರಘು ಮಾಯಮುಡಿ ನೇತೃತ್ವದ ಚಂಡೆ ವಾದ್ಯ ತಂಡದವರಿAದ ಚಂಡೆ ಮೇಳ, ಕಿಶನ್ ಅವರ ನೇತೃತ್ವದಲ್ಲಿ ವಿಷ್ಣುಮೂರ್ತಿ ಕೋಲ, ಪೂಜಾ ಕಾರ್ಯಕ್ರಮದ ನೇತೃತ್ವವನ್ನು ವೀರಾಜಪೇಟೆಯ ಪಂಡರೀಶ, ವೆಂಕಟೇಶ ಹಾಗೂ ಪ್ರಧಾನ ಅರ್ಚಕರಾದ ಶಿವಶರ್ಮ ವಹಿಸಿದ್ದರು. ಇದೆ ಸಂದರ್ಭ ಕಳೆದ ೩ ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಬಟ್ಟಿಯಂಡ ಜಯರಾಂ ಅವರನ್ನು ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಗೌರವಿಸಲಾಯಿತು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತು.
ಈ ಸಂದರ್ಭ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಮಂಞಪುರ ಛಾಯಾ ಪ್ರಕಾಶ್, ಉಪಾಧ್ಯಕ್ಷರುಗಳಾದ ಬಿಳಿಯಂಡ್ರ ಹರಿಪ್ರಸಾದ್, ಚೆಯ್ಯಂಡ ಶಂಕರಿ (ಶಾನ್), ಕಾರ್ಯದರ್ಶಿ ಮಕ್ಕಿಮನೆ ಸುದೀರ್, ಆಡಳಿತ ಮಂಡಳಿಯ ಪದಾಧಿಕಾರಿಗಳು, ಭಕ್ತಾದಿಗಳು ಹಾಜರಿದ್ದರು.