ಚೆಯ್ಯಂಡಾಣೆ, ಏ. ೨೪: ಹಜ್ರತ್ ಸೂಫಿ ಶಹೀದ್ ಮತ್ತು ಹಜ್ರತ್ ಸೈಯದ್ ಹಸನ್ ಸಖಾಪ್ ಹಾಗೂ ಇನ್ನಿತರ ಮಹಾತ್ಮರುಗಳ ಹೆಸರಿನಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ೮ ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆದು ಶುಕ್ರವಾರ ಸಂಪನ್ನಗೊAಡಿತು.
ಶುಕ್ರವಾರ ಜುಮಾ ನಮಾಝಿನ ಬಳಿಕ ಕೂರ್ಗ್ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯಿದ್ ಶಿಹಾಬುದ್ದೀನ್ ಸಖಾಫಿ ಅಲ್ ಐದರೂಸಿ ತಂಙಳ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಎಸ್‌ವೈಎಸ್ ರಾಜ್ಯ ಉಪಾಧ್ಯಕ್ಷÀ ಸಯ್ಯಿದ್ ಇಲ್ಯಾಸ್ ಅಲ್ ಐದರೂಸಿ ತಂಙಳ್ ಎಮ್ಮೆಮಾಡು ಉದ್ಘಾಟಿಸಿ ಮಾತನಾಡಿದರು.
ಮರ್ಕಝ್ ಮೂದರ್ರಿಸ್ ಹಾಗೂ ಕೇರಳ ಹಜ್ ಕಮಿಟಿಯ ಚೇರ್ಮೆನ್ ಡಾ. ಹುಸೈನ್ ಸಖಾಫಿ ಚುಳ್ಳಿಕೋಡ್ ಮುಖ್ಯ ಪ್ರಭಾಷಣ ನಡೆಸಿ ಸೂಫಿ ಶಹೀದ್ ಮಹಾನುಬಾವರ ಆದರ್ಶ ಪವಾಡಗಳ ಬಗ್ಗೆ ವಿವರಿಸಿ, ಇಸ್ಲಾಂನ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಸಮುದಾಯವು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸಮುದಾಯದ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಆಲಂಕರಿಸಿ ದೇಶಕ್ಕೆ ಕೀರ್ತಿ ತರಬೇಕೆಂದರು.
ಸಯ್ಯಿದ್ ಮುಹಮ್ಮದ್ ತುರಾಬ್ ತಂಙಳ್ ಅಲ್ ಅಝರಿ ಕ್ಯಾಲಿಕೆಟ್ ಸಮಾರೋಪ ಪ್ರಾರ್ಥನೆಗೆ ನೇತೃತ್ವ ವಹಿಸಿದರು.ಇದೆ ಸಂದರ್ಭ ಎಸ್‌ಎಸ್‌ಎಲ್‌ಸಿಯಲ್ಲಿ ಎಮ್ಮೆ ಮಾಡು ಪ್ರೌಢಶಾಲೆಗೆ ಉತ್ತಮ ಫಲಿತಾಂಶ ಬಂದ ಹಿನ್ನೆಲೆ ಶಾಲೆಯ ಮುಖ್ಯ ಶಿಕ್ಷಕ ಪ್ರಸನ್ನ ಕುಮಾರ್ ಅವರನ್ನು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಈ ಸಂದರ್ಭ ವೇದಿಕೆಯಲ್ಲಿ ಫೈಝಿ, ಮುದರ್ರಿಸ್ ಹಂಝ ಸಖಾಫಿ, ಅಶ್ರಫ್ ಬಿ.ಯು., ನಾಪೋಕ್ಲು ಜಮಾಅತ್ ಮುದರ್ರಿಸ್ ಇಬ್ರಾಹಿಂ ಖಲೀಲ್ ಸಖಾಫಿ, ಕೊಳಕೇರಿ ಜಮಾಅತ್ ಅಧ್ಯಕ್ಷ ಅಶ್ರಫ್, ಪಡಿಯಾಣಿ ಅಧ್ಯಕ್ಷ ಇಬ್ರಾಹಿಂ ಮುಸ್ಲಿಯಾರ್, ಪಳ್ಳಿರಾಣೆ ಅಧ್ಯಕ್ಷ ಅಬ್ದುಲ್ ಖಾದರ್, ಬೆಟ್ಟಗೇರಿ ಅಧ್ಯಕ್ಷ ಮೊಯ್ದು ಕುಂಞ ಹಾಜಿ, ಮುದರ್ರಿಸ್ ಅಬ್ದುಲ್ ರಹ್ಮನ್ ಅನ್ವಾರಿ ಅಲ್ ಅಹ್ಸನಿ, ಜಮಾಅತ್ ಆಡಳಿತ ಮಂಡಳಿ ಪದಾಧಿಕಾರಿಗಳು, ಧಾರ್ಮಿಕ, ರಾಜಕೀಯ ನೇತಾರರು ಪಾಲ್ಗೊಂಡಿದ್ದರು.
ಇದಕ್ಕೂ ಮೊದಲು ಜುಮಾ ನಮಾಜ್ ಬಳಿಕ ದಫ್ ಪ್ರದರ್ಶನದ ಮೂಲಕ ದರ್ಗಾಕ್ಕೆ ತೆರಳಿದ ಸಮುದಾಯದವರು ಸಯ್ಯಿದ್ ಮುಹಮ್ಮದ್ ತುರಾಬ್ ತಂಙಳ್ ಅಲ್ ಅಝರಿ ಕ್ಯಾಲಿಕೆಟ್ ನೇತೃತ್ವದಲ್ಲಿ ಮಖಾಂ ಝಿಯಾರತ್ ಹಾಗೂ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಉರೂಸ್ ಅಂಗವಾಗಿ ಸಂಜೆ ಸಾವಿರಾರು ಭಕ್ತಾದಿಗಳಿಗೆ ಅನ್ನದಾನ ನಡೆಯಿತು. ಅಶ್ರಫ್ ಬಿ.ಯು. ನಿರೂಪಿಸಿ, ಎಮ್ಮೆಮಾಡು ಜಮಾಅತ್ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಝಕರಿಯ ಸಅದಿ ಅಲ್ ಐದರೂಸಿ ತಂಙಳ್ ಸ್ವಾಗತಿಸಿ, ಜಮಾಅತ್ ಸದಸ್ಯ ಮನಾಫ್ ಮುಸ್ಲಿಯಾರ್ ವಂದಿಸಿದರು.