ಮಡಿಕೇರಿ, ಏ. ೨೪ : ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಸಭೆಯು ಶನಿವಾರ ನಗರದ ಪತ್ರಿಕಾಭವನದಲ್ಲಿ ನಡೆಯಿತು.

ಬಳಗದಲ್ಲಿ ಪ್ರಾರಂಭ ಹಂತದಿAದಲೂ, ಸದಸ್ಯರಾಗಿ, ಬಳಗದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸಿ, ಬಳಗದ ಯಶಸ್ಸಿಗೆ ಕಾರಣರಾಗಿ, ಇತ್ತೀಚೆಗೆ ಅಗಲಿದ ಕಮಲ ಕರಿಯಪ್ಪ, ಹಿರಿಯ ಗಾಯಕ ಲಿಯಾಕತ್ ಅಲಿ ಹಾಗೂ ತಮ್ಮಯ್ಯ ಅವರಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಟಿ ಪಿ ರಮೇಶ್ ಬಳಗದ ವತಿಯಿಂದ ಸ್ಥಾಪಿಸಲ್ಪಟ್ಟಿರುವ ಟಿ.ಪಿ.ರಮೇಶ್ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಾಗೂ ಮಹಾಸಭೆಯನ್ನು ನಡೆಸುವ ಬಗ್ಗೆ ಚರ್ಚಿಸಲಾಯಿತು. ಲೋಕನಾಥ್ ಅಮೇಚೂರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೇಶವ ಕಾಮತ್, ಟಿ.ಪಿ.ರಮೇಶ್, ಕೆ.ಟಿ. ಬೇಬಿಮ್ಯಾಥ್ಯೂ, ಉಮೇಶ್, ಕೋಶಾಧಿಕಾರಿ, ಕಡ್ಲೇರ ತುಳಸಿ ಮೋಹನ್, ಸುನೀತಾ ಪ್ರೀತು ಸಭೆಯಲ್ಲಿ ಹಾಜರಿದ್ದರು. ಕಾರ್ಯದರ್ಶಿ ಭಾರತಿ ರಮೇಶ್ ವಂದಿಸಿದರು.