ಮಡಿಕೇರಿ, ಏ.೨೪: ಅಖಿಲ ಅಮ್ಮ ಕೊಡವ ಸಮಾಜ ಹಾಗೂ ಬಾನಂಡ ಕುಟುಂಬದ ಸಹಯೋಗದೊಂದಿಗೆ ೨ನೇ ವರ್ಷದ ಬಾನಂಡ ಕಪ್ ಕ್ರಿಕೆಟ್ ಪಂದ್ಯಾವಳಿ ಮೇ.೧ ರಿಂದ ಮೇ.೩ ರವರೆಗೆ ಮಾಯಮುಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆಯಲಿದೆ ಎಂದು ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷರಾದ ಬಾನಂಡ ಎನ್ ಪ್ರತ್ಯು ಅವರು ಮಾಹಿತಿ ನೀಡಿದರು. ಈ ಬಗ್ಗೆ ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ೩ ದಿನಗಳ ಟೂರ್ನಿ ಪ್ರಯಕ್ತ ಮೇ.೧ ರಂದು ಮಾಯಮುಡಿಯ ಭಜನಾ ಮಂದಿರ ಬಳಿಯಿಂದ ಬೆಳಿಗ್ಗೆ ೯ ಗಂಟೆಗೆ ಮೆರವಣಿಗೆ ನಡೆಯಲಿದೆ. ಮೆರವಣಿಗೆ ಮೂಲಕ ಅಮ್ಮ ಕೊಡವ ಸಂಸ್ಕೃತಿ, ಆಚಾರ-ವಿಚಾರಗಳನ್ನು ಪ್ರದರ್ಶಿಸಲಾಗುವುದು. ಮೆರವಣಿಗೆ ಮಾಯಮುಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮಾಪ್ತಿಗೊಳ್ಳಲಿದೆ ಎಂದರು.
ಬಳಿಕ ೧೦ ಗಂಟೆಗೆ ಶಾಸಕ ಎ.ಎಸ್ ಪೊನ್ನಣ್ಣ ಅವರು ಮಾಯಮುಡಿ ಸರಕಾರಿ ಶಾಲಾ ಮೈದಾನದಲ್ಲಿ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾನಂಡ ಕುಟುಂಬದ ಅಧ್ಯಕ್ಷರಾದ ಬಾನಂಡ ಎಸ್ ರಮೇಶ್ ಅವರು ವಹಿಸಲಿದ್ದಾರೆ. ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷ ಬಾನಂಡ ಎನ್ ಪ್ರತ್ಯು ಸಭಾಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಯಮುಡಿಯವರೇ ಆದ ಪ್ರಸ್ತುತ ರಾಜ್ಯ ಸರಕಾರದ ಇಂಧನ ಸಚಿವರಾಗಿರುವ ಕೆ.ಜೆ ಜಾರ್ಜ್ ಅವರು ಭಾಗವಹಿಸುವ ನಿರೀಕ್ಷೆಯಿದೆ. ಇವರೊಂದಿಗೆ ಶಾಸಕ ಡಾ.ಮಂತರ್ ಗೌಡ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ, ಮೈಸೂರಿನಲ್ಲಿ ನ್ಯಾಯಾಧೀಶರಾಗಿರುವ ಅಮ್ಮತ್ತೀರ ಶಿಲ್ಪಾ ಗಣೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಹೈಕೋರ್ಟ್ ವಕೀಲರಾದ ಹೆಮ್ಮಚ್ಚಿಮನೆ ಸುಧೀರ್ ಮಾದಮ್ಮಯ್ಯ, ಬಾನಂಡ ಕ್ರೀಡಾ ಸಮಿತಿ ಅಧ್ಯಕ್ಷ ಬಾನಂಡ ಎ ಸುನಿತ್, ಮಾಯಮುಡಿ ಆರ್.ಎಂ.ಸಿ ಮಾಜಿ ಅಧ್ಯಕ್ಷ ಕಾಳಪಂಡ ಟಿಪ್ಪು ಬಿದ್ದಪ್ಪ ಹಾಗೂ ಪ್ರಮುಖರಾದ ಬಾನಂಡ ಲೀಲಾವತಿ ಶಂಭು ಅವರುಗಳು ಭಾಗವಹಿಸಲಿದ್ದಾರೆ.ಸಮಾರೋಪ ಸಮಾರಂಭ ಮೇ. ೩ ರಂದು ಮಧ್ಯಾಹ್ನ ೨ ಗಂಟೆಗೆ ನಡೆಯಲಿದೆ. ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಒಟ್ಟು ೨೪ ತಂಡಗಳು :ಕೊಡಗಿನಲ್ಲಿ ೩೨ ಅಮ್ಮ ಕೊಡವ ಕುಟುಂಬಗಳು ನೆಲೆಸಿದ್ದು, ೨೪ ಕುಟುಂಬಗಳ ತಂಡ ಟೂರ್ನಿಯಲ್ಲಿ ಭಾಗವಹಿಸಲಿವೆ. ಟೂರ್ನಿಯಲ್ಲಿ ವಿಜೇತ ತಂಡಕ್ಕೆ ಟ್ರೋಫಿ ಹಾಗೂ ನಗದು ಸೇರಿದಂತೆ ಉತ್ತಮ ಬ್ಯಾಟ್ಸ್ಮ್ಯಾನ್, ಬೌಲರ್, ಇತರ ವೈಯಕ್ತಿಕ ಬಹುಮಾನಗಳೊಂದಿಗೆ ಮಹಿಳಾ ಆಟಗಾರ್ತಿ ಪ್ರಶಸ್ತಿಯನ್ನೂ ನೀಡಲಾಗುವುದು ಎಂದರು.
ಬಾನAಡ ಕುಟುಂಬದದಲ್ಲಿ ೧೦೩ ಜನಸಂಖ್ಯೆಯಿದೆ. ಟೂರ್ನಿ ಆಯೋಜನೆಗೆ ಕುಟುಂಬದ ಸಹಕಾರದೊಂದಿಗೆ ಶಾಸಕ ಎ.ಎಸ್ ಪೊನ್ನಣ್ಣ ಅವರ ಮೂಲಕ ಸರಕಾರದ ಸಹಕಾರವೂ ಪಡೆಯಲಾಗಿದೆ. ಕಳೆದ ಬಾರಿ ಶಾಸಕರ ಸಹಕಾರದಿಂದ ರೂ.೫ ಲಕ್ಷ ಅನುದಾನ ಕ್ರಿಕೆಟ್ ಟೂರ್ನಿಗೆ ದೊರಕಿತ್ತು. ಈ ಬಾರಿ ಕ್ರೀಡಾಕೂಟ ಸೇರಿದಂತೆ ಸಮಾಜದ ಇತರ ಅಭಿವೃದ್ಧಿ ಕಾರ್ಯಗಳಿಗೆ ಒಟ್ಟು ರೂ.೨೫ ಲಕ್ಷ ಶಾಸಕರ ಪ್ರಯತ್ನದ ಮೂಲಕ ಸರಕಾರದಿಂದ ಲಭಿಸಿದೆ ಎಂದರು.
ಗೋಷ್ಠಿಯಲ್ಲಿ ಬಾನಂಡ ಕುಟುಂಬದ ಕಾರ್ಯದರ್ಶಿ ಬಾನಂಡ ಸೂದನ್, ಖಜಾಂಚಿ ಬಾನಂಡ ಪ್ರಕಾಶ್, ಸಂಚಾಲಕ ಕೃಷಿರಾಜ್, ಅಖಿಲ ಅಮ್ಮ ಕೊಡವ ಸಮಾಜದ ನಿರ್ದೇಶಕರಾದ ಜನಾರ್ಧನ್ ಹಾಜರಿದ್ದರು.