ಕಣಿವೆ, ಏ. ೨೪: ಇಲ್ಲಿಗೆ ಸಮೀಪದ ಗೊಂದಿಬಸವನಹಳ್ಳಿ ಗ್ರಾಮದ ಮೈನ್ ಕೋರೆಯಲ್ಲಿರುವ ಶ್ರೀ ಮಾರಿಯಮ್ಮ ದೇವರ ವಾರ್ಷಿಕ ಪೂಜೋತ್ಸವ ಶ್ರದ್ದಾಭಕ್ತಿಯಿಂದ ಜರುಗಿತು. ಮೂರು ದಿನಗಳ ಕಾಲ ನಡೆದ ಪೂಜೋತ್ಸವದಲ್ಲಿ ಗ್ರಾಮದ ಮಹಿಳೆಯರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ದೇವರಿಗೆ ಇಷ್ಟವೆನ್ನಲಾದ ತಂಬಿಟ್ಟು ಉಂಡೆಗಳನ್ನು ಭಕ್ತಿಯಿಂದ ಮೆರವಣಿಗೆಯಲ್ಲಿ ತಂದು ನೈವೇದ್ಯ ಮಾಡಿ ಪುನೀತರಾದರು. ದೇವಾಲಯದ ಗರ್ಭ ಗುಡಿಯಲ್ಲಿ ಶ್ರೀ ಮಾರಿಯಮ್ಮ ದೇವರ ಮೂರ್ತಿಯನ್ನು ಬಗೆ ಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ದೇವಾಲಯ ಸಮಿತಿ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ಗಣೇಶ, ಖಜಾಂಚಿ ಮಣಿ, ಪ್ರಮುಖರಾದ ಸುಧಾಕರ, ಸಂತೋಷ, ಎಂ.ಚAದ್ರು, ನವೀನ, ರಾಜೇಂದ್ರ, ರವಿ ಮತ್ತಿತರರಿದ್ದರು. ಅರ್ಚಕ ಮುತ್ತುಸ್ವಾಮಿ ಧಾರ್ಮಿಕ ವಿಧಿವಿಧಾನ ನಡೆಸಿದರು.