ಮಡಿಕೇರಿ, ಏ. ೨೪: ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ ೨೪ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆಯಲ್ಲಿ ತಂಡಗಳ ನಡುವೆ ಗೆಲುವಿಗಾಗಿ ರೋಚಕ ಹಣಾಹಣಿಗಳು ನಡೆದವು.

ಮೂರ್ನಾಡು ಲಾಲು ಮುದ್ದಯ್ಯ ಮೈದಾನದಲ್ಲಿ ನಡೆದ ಪಂದ್ಯಾಟದಲ್ಲಿ ಕೋಳೆರ ಮತ್ತು ಗೀಜಿಗಂಡ ತಂಡಗಳ ನಡುವಿನ ಪಂದ್ಯದಲ್ಲಿ ಕೋಳೆರ ೭ ವಿಕೆಟ್‌ಗಳಿಂದ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಗೀಜಿಗಂಡ ೬ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೪೬ ರನ್ ಗಳಿಸಿತು. ಕೋಳೆರ ೫.೧ ಓವರ್‌ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೪೭ ರನ್ ಸೇರಿಸಿ ಜಯ ಕಂಡಿತು.

ಪಾರುವಂಡ ಮತ್ತು ಮಂದೆಯAಡ (ಮಾದಾಪುರ) ನಡುವಿನ ಪಂದ್ಯದಲ್ಲಿ ಪಾರುವಂಡ ತಂಡಕ್ಕೆ ೮ ವಿಕೆಟ್‌ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮಂದೆಯAಡÀ ೬ ಓವರ್‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೪೯ ರನ್ ಸೇರಿಸಿತು. ಪಾರುವಂಡ ೨.೪ ಓವರ್‌ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೫೪ ರನ್ ಗಳಿಸಿ ಗೆಲುವಿನ ನಗು ಬೀರಿತು.

ಮೂಕಳೆರ ಮತ್ತು ಮುಕ್ಕಾಟಿರ (ಬೆಳ್ಳೂರು-ಹರಿಹರ) ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ೭ ವಿಕೆಟ್‌ಗಳಿಂದ ಜಯ ಗಳಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮೂಕಳೆರ ೬ ಓವರ್‌ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೬೮ ರನ್ ಗಳಿಸಿತು. ಮುಕ್ಕಾಟಿರ ತಂಡ ೫.೩ ಓವರ್‌ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೭೩ ರನ್ ಪೇರಿಸಿ ವಿಜಯ ಸಾಧಿಸಿತು.

ಕೊಟ್ಟಂಗಡ ಮತ್ತು ಮೂಕೊಂಡ ನಡುವಿನ ಪಂದ್ಯದಲ್ಲಿ ಕೊಟ್ಟಂಗಡ ತಂಡಕ್ಕೆ ೮ ವಿಕೆಟ್‌ಗಳ ಜಯ ದೊರೆಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮೂಕೊಂಡ ೬ ಓವರ್ ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೫೯ ರನ್ ಸೇರಿಸಿತು. ಕೊಟ್ಟಂಗಡ ೪.೪ ಓವರ್‌ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೬೦ ರನ್ ಗಳಿಸಿ ಜಯ ಸಾಧಿಸಿತು.

ಅರಮೇರಿ ಎಸ್‌ಎಂಎಸ್ ಮೈದಾನದಲ್ಲಿ ಮುಕ್ಕಾಟಿರ (ಕುಂಬಳದಾಳು) ಮತ್ತು ನೆರವಂಡ ನಡುವಿನ ಪಂದ್ಯದಲ್ಲಿ ನೆರವಂಡ ತಂಡಕ್ಕೆ ೨೪ ರನ್‌ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನೆರವಂಡ ೬ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೪೯ ರನ್ ಗಳನ್ನು ಗಳಿಸಿತು. ಮುಕ್ಕಾಟಿರ ೬ ಓವರ್‌ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೨೫ ರನ್‌ಗಳನ್ನಷ್ಟೇ ಸೇರಿಸಿ ಸೋಲು ಕಂಡಿತು.

ತAಬುಕುತ್ತಿರ ಮತ್ತು ಮಾಳೇಟಿರ (ಕೆದಮುಳ್ಳೂರು) ನಡುವಿನ ಹಣಾಹಣಿಯಲ್ಲಿ ಮಾಳೇಟಿರ ೯ ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ತಂಬುಕುತ್ತಿರ ೬ ಓವರ್‌ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೪೨ ರನ್ ಸೇರಿಸಿತು. ಮಾಳೇಟಿರ ಕೇವಲ ೨.೫ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೪೩ ರನ್ ಸೇರಿಸಿ ಜಯ ದಾಖಲಿಸಿತು.

ಕರಿನೆರವಂಡ ಮತ್ತು ನಂದಿನೆರವAಡ ನಡುವಿನ ಪಂದ್ಯದಲ್ಲಿ ಕರಿನೆರವಂಡ ೭ ರನ್‌ಗಳಿಂದ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರಿನೆರವಂಡ ೬ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೭೯ ರನ್ ಸೇರಿಸಿತು. ನಂದಿನೆರವAಡ ೬ ಓವರ್‌ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೭೨ ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಅಳಮೇಂಗಡ ಮತ್ತು ದಾಸಂಡ ನಡುವಿನ ಪಂದ್ಯದಲ್ಲಿ ಅಳಮೇಂಗಡ ೯ ವಿಕೆಟ್‌ಗಳಿಂದ ಗೆಲುವು ಕಂಡಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಾಸಂಡ ೬ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೩೮ ರನ್ ಗಳಿಸಿತು. ಅಳಮೇಂಗಡ ೨.೨ ಓವರ್ ೨ ವಿಕೆಟ್ ನಷ್ಟಕ್ಕೆ ೪೨ ರನ್ ಸೇರಿಸಿ ಜಯ ಸಾಧಿಸಿತು.

ಮಹಿಳಾ ಕ್ರಿಕೆಟ್

ಮಾಚಿಮಂಡ ಮತ್ತು ಪಾಸುರ ತಂಡಗಳ ನಡುವಿನ ಪಂದ್ಯದಲ್ಲಿ ಪಾಸುರ ೯ ವಿಕೆಟ್‌ಗಳಿಂದ ಜಯ ಸಾಧಿಸಿತು. ಮಾಚಿಮಂಡ ೫ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೩೫ ರನ್ ಗಳಿಸಿತು. ಪಾಸುರ ೩.೩ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೩೬ ರನ್ ಸೇರಿಸಿ ಗೆಲುವು ಕಂಡಿತು.

ಮುಕ್ಕಾಟಿರ (ಹರಿಹರ) ಮತ್ತು ಮಾಚಮಾಡ ನಡುವಿನ ಹಣಾಹಣಿಯಲ್ಲಿ ಮುಕ್ಕಾಟಿರ ೨೪ ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಮುಕ್ಕಾಟಿರ ೫ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೪೭ ರನ್ ಸೇರಿಸಿತು. ಮಾಚಮಾಡ ೫ ಓವರ್ ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೨೩ ರನ್ ಗಳಿಸಿ ಸೋಲು ಕಂಡಿತು.

ಮೇವಡ ಮತ್ತು ಓಡಿಯಂಡ ನಡುವಿನ ಪಂದ್ಯದಲ್ಲಿ ಓಡಿಯಂಡ ತಂಡಕ್ಕೆ ೬೦ ರನ್‌ಗಳ ಜಯ ಲಭಿಸಿತು. ಓಡಿಯಂಡ ತಂಡ ೫ ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ೯೫ ರನ್ ಗಳಿಸಿತು. ಮೇವಡ ೫ ಓವರ್‌ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೩೫ ರನ್‌ಗಳನ್ನಷ್ಟೇ ಸೇರಿಸಿ ಸೋಲು ಕಂಡಿತು.

ಚೆಕ್ಕೇರ ಮತ್ತು ಕಂಬೀರAಡ ನಡುವಿನ ಪಂದ್ಯದಲ್ಲಿ ಚೆಕ್ಕೇರ ತಂಡಕ್ಕೆ ೯ ವಿಕೆಟ್‌ಗಳ ಜಯ ದೊರೆಯಿತು. ಕಂಬೀರAಡ ತಂಡ ೫ ಓವರ್ ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೧೩ ರನ್ ಗಳನ್ನು ಸೇರಿಸಿತು. ಚೆಕ್ಕೇರ ೩.೫ ಓವರ್ ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೧೫ ರನ್ ಗಳನ್ನು ಗಳಿಸಿ ಗೆಲುವಿನ ನಗೆ ಬೀರಿತು.