ಮುಳ್ಳೂರು, ಏ. ೨೩: ಸಮಿಪದ ಮಾಲಂಬಿ ಗ್ರಾಮ ದೇವರುಗಳ ಸೇವಾ ಸಮಿತಿಯಿಂದ ನಡೆದ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ, ಶ್ರೀ ಬಸವಣ್ಣ ಸ್ವಾಮಿ, ಶ್ರೀ ಕನ್ನಂಬಾಡಿ ಅಮ್ಮನವರ ವಾರ್ಷಿಕ ಪೂಜಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆದು ಸಂಪನ್ನಗೊAಡಿತ್ತು

ಪೂಜಾ ಮಹೋತ್ಸವ ಸೋಮವಾರ ಬೆಳಿಗ್ಗೆ ಗ್ರಾಮದ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ ಬಳಿಕ ಗ್ರಾಮದÀ ಮಳೆ ಮಲ್ಲೇಶ್ವರ ಬೆಟ್ಟವನ್ನೇರಿ ಬೆಟ್ಟದ ಮೇಲಿರುವ ಶ್ರೀ ಮಳೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪೂಜಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿತ್ತು. ದೇವಸ್ಥಾನದಲ್ಲಿ ಪೂಜೆ, ಮಹಾಮಂಗಳಾರತಿಯೊAದಿಗೆ ಕದಲಿ ಪೂಜೆ ನೆರವೇರಿಸಲಾಯಿತು. ತದನಂತರ ಪ್ರಸಾದ ವಿನಿಯೋಗ ನಡೆದ ಬಳಿಕ ಆರತಿಯೊಂದಿಗೆ ಉತ್ಸವವು ವಾದ್ಯಗೋಷ್ಠಿ, ಮಹಿಳೆಯರು ಕುಂಭ ಕಳಸ ಸಮೇತವಾಗಿ ಮೂರ್ತಿಗಳ ಗಂಗಾಸ್ನಾನಕ್ಕೆ ತೆರಳಿದ ಬಳಿಕ ವಾಪಾಸಾಗಿ ದೇವಸ್ಥಾನವನ್ನು ಪ್ರವೇಶಿಸಿತ್ತು. ಅಡ್ಡಪಲ್ಲಕ್ಕಿ ಮೆರವಣಿಗೆ ಮೂಲಕ ವಿಜೃಂಬಣೆಯಿAದ ಜರುಗಿತ್ತು. ಈ ಸಂದರ್ಭ ಭಕ್ತಾದಿಗಳಿಗೆ ದೇವಸ್ಥಾನ ಸಮಿತಿಯಿಂದ ಅನ್ನಸಂತರ್ಪಣೆ ನಡೆಯಿತು

ಮಂಗಳವಾರ ಶ್ರೀ ಕನ್ನಂಬಾಡಿ ಅಮ್ಮನವರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ಭಕ್ತಾದಿಗಳು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಮಹಾಮಂಗಳಾರತಿ ಪ್ರಸಾದ ವಿನಿಯೋಗದೊಂದಿಗೆ ಗ್ರಾಮದ ದೇವರುಗಳು ಪೂಜಾ ಮಹೋತ್ಸವ ಸಂಪನ್ನಗೊAಡಿತು.