ವೀರಾಜಪೇಟೆ, ಏ. ೨೩: ಪಟ್ಟಣದ ಶ್ರೀ ದಕ್ಷಿಣ ಮಾರಿಯಮ್ಮ ದೇವಸ್ಥಾನದಲ್ಲಿ ಮಹಾ ಕುಂಭಾಭಿಷೇಕ ಸಾಂಪ್ರಾದಾಯಿಕವಾಗಿ ವಿವಿಧ ಪೂಜಾ ಕೈಂಕರ್ಯಗಳೊAದಿಗೆ ಶ್ರದ್ಧಾಭಕ್ತಿಯಿಂದ ನೆರವೇರಿತು.

ಶ್ರೀ ಮಾರಿಯಮ್ಮ ಮತ್ತು ಶ್ರೀ ಅಂಗಾಳ ಪರಮೇಶ್ವರಿ ದೇವಸ್ಥಾನ ಟ್ರಸ್ಟ್, ಸಾಧುಶೆಟ್ಟಿ ೨೪ ಮನೆ ತೆಲುಗು ಶೆಟ್ಟಿ ಸಂಘ, ತೆಲುಗು ಶೆಟ್ಟರ ಬೀದಿ ವೀರಾಜಪೇಟೆ ವತಿಯಿಂದ ಶ್ರೀ ದಕ್ಷಿಣ ಮಾರಿಯಮ್ಮ ದೇವಿಯ ಮಹಾ ಕುಂಭಾಭಿಷೇಕ ಮೂರು ದಿನಗಳ ಕಾಲ ನಡೆಯಿತು. ಮೊದಲ ದಿನ ಗಣಪತಿ ಪೂಜೆಯೊಂದಿಗೆ ಆರಂಭವಾದ ಮಹಾಕುಂಭಾಭಿಷೇಕದ ವಿಧಿವಿಧಾನಗಳು ವಾಸ್ತುಶಾಂತಿ, ಅಂಕುರಾರ್ಪಣೆ, ಪ್ರಥಮ ಕಾಲಯಾ ಪೂಜೆ, ಪ್ರಥಮ ಕಾಲ ಯಾಗಶಾಲಾ ಪ್ರವೇಶ, ಪೂರ್ಣಾಹುತಿ, ಮಹಾ ಮಂಗಳಾರತಿ ಸೇರಿದಂತೆ ಅನ್ನ ಸಂತರ್ಪಣೆ ನಡೆಯಿತು.

ಎರಡನೆ ದಿನ ವಿಘ್ನೇಶ್ವರ ಪೂಜೆ, ಶಿವಸೂರ್ಯ ಪೂಜೆ, ವಿಶೇಷ ಸಂಧಿ, ಎರಡನೇ ಕಾಲ ಯಾಗಪೂಜೆ, ಮೂಲ ಮಂತ್ರ, ಅಸ್ತçಮಂತ್ರ ಹೋಮ, ದ್ರವ್ಯಾಹುತಿ, ಮಹಾಮಂಗಳಾರತಿ, ಸಂಜೆ ವಿನಾಯಕ ಪೂಜೆ, ಸೋಮಕುಂಭ ಪೂಜೆ, ದ್ರವ್ಯಾಹುತಿ, ಲಲಿತ ತ್ರಿಶದಿ ಪಾರಾಯಣ, ಮಹಾಪೂರ್ಣಾಹುತಿ, ಮಹಾ ಮಂಗಳಾರತಿ, ರಾತ್ರಿ ಯಂತ್ರ ಸ್ಥಾಪನೆ, ಅಷ್ಟಬಂಧನ ಪೂಜೆ, ಅನ್ನ ಸಂತರ್ಪಣೆ ನಡೆಯಿತು.

ಮೂರನೆ ದಿನ ಗಣಪತಿ ಪೂಜೆ, ಸೂರ್ಯಪೂಜೆ, ತತ್ವರ್ಚನ, ಶಡದ್ವ ಹೋಮ, ಬಿಂಬಶುದ್ಧಿ, ಸ್ಪರ್ಶಾಹುತಿ, ದ್ರವ್ಯಾಹುತಿ, ಪೂರ್ಣಾಹುತಿ, ಮಹಾಪೂರ್ಣಾಹುತಿ, ಗೋಪುರ ಕಲಶ ಕುಂಭಾಭಿಷೇಕ , ಶ್ರೀ ಗಣಪತಿ, ಶ್ರೀ ಸುಬ್ರಹ್ಮಣ್ಯ, ಶ್ರೀ ಮಾರಿಯಮ್ಮ ದೇವಿಗೆ ಕುಂಭಾಭಿಷೇಕ, ತದನಂತರ ಗೋಪೂಜೆ, ಮಹಾಭಿಷೇಕ, ಅಲಂಕಾರ ಪೂಜೆ ನಡೆಯಿತು. ಬಳಿಕ ತೀರ್ಥ ಪ್ರಸಾದ ವಿತರಣೆ, ಅನ್ನ ಪ್ರಸಾದ ವಿತರಣೆ ನಡೆಯಿತು. ಮೂರು ದಿನಗಳ ಕಾಲ ವಿರಾಜಪೇಟೆ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಟಿ.ಪಿ.ಕೃಷ್ಣ ಉಪಾಧ್ಯಕ್ಷ ಟಿ.ಜಿ ಮಂಜುನಾಥ್, ಮಹೇಶ್ ಶೆಟ್ಟಿ, ಅಯ್ಯಪ್ಪ ಶೆಟ್ಟಿ, ಲೋಕೇಶ್ ಶೆಟ್ಟಿ, ಶ್ರೀಕಾಂತ್ ಶೆಟ್ಟಿ, ಮಂಜುನಾಥ್, ಷಣ್ಮುಗ ಶೆಟ್ಟಿ, ಹರೀಶ್ ಶೆಟ್ಟಿ, ಭರತ್ ಶೆಟ್ಟಿ, ರಂಜಿತ್ ಶೆಟ್ಟಿ, ಟಿ.ಎನ್. ವೆಂಕಟೇಶ್ ಶೆಟ್ಟಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.