ಕೂಡಿಗೆ, ಏ. ೨೩: ಕೂಡಿಗೆ ಗ್ರಾಮದ ದಂಡಿನಮ್ಮ ಶ್ರೀ ಬಸವೇಶ್ವರ ಶ್ರೀ ಮುತ್ತತ್ ರಾಯ ದೇವಸ್ಥಾನ ಹಾಗೂ ಗ್ರಾಮದೇವತಾ ಸಮಿತಿ ಕೂಡಿಗೆ-ಕೊಪ್ಪಲು, ಹೆಗ್ಗಡಳ್ಳಿ-ಕೋಟೆ ಇವರ ವತಿಯಿಂದ ತಾ. ೨೪ ರಂದು (ಇಂದು) ಗ್ರಾಮ ದೇವತೆಯ ಹಬ್ಬ ಮತ್ತು ಜಾತ್ರೋತ್ಸವ ನಡೆಯಲಿದೆ.

ಶ್ರೀ ದಂಡಿನಮ್ಮ ದೇವಿಗೆ ವಿಶೇಷ ಪೂಜೆ, ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ರಾತ್ರಿ ೮ ಗಂಟೆಗೆ ಅಗ್ನಿಸ್ಥಾಪನೆ, ಶ್ರೀ ಬಸವೇಶ್ವರ ದೇವಸ್ಥಾನದಿಂದ ಗ್ರಾಮಸ್ಥರು ಮತ್ತು ಭಕ್ತಾದಿಗಳು ಕಾವೇರಿ ನದಿಗೆ ತೆರಳಿ ಕಲಶ ಪೂಜೆ, ಹಣ್ಣಾಡಗೆ ಉತ್ಸವ, ಮತ್ತು ಕೊಂಡೋತ್ಸವ ಹಾಗೂ ಮುಂಜಾನೆ ಉಯ್ಯಾಲೆ ಮಹೋತ್ಸವ ಕಾರ್ಯಕ್ರಮ ನಡೆಯಲಿವೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಎಸ್. ಚಂದ್ರು ತಿಳಿಸಿದ್ದಾರೆ.

ತಾ. ೨೫ ರಂದು ಶ್ರೀ ದಂಡಿನಮ್ಮ ದೇವಿಗೆ ಪೂಜೆ, ನಂತರ ಮುತ್ತತ್ ರಾಯ ದೇವರ ಹರಿಸೇವಾ ಮಹೋತ್ಸವ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ ಎಂದು ಸಮಿತಿ ಕಾರ್ಯದರ್ಶಿ ಕೆ.ಟಿ. ವೆಂಕಟೇಶ್ ತಿಳಿಸಿದ್ದಾರೆ.