ಶನಿವಾರಸAತೆ, ಏ. ೨೩; ಸಮೀಪದ ಬಾಗೇರಿ ಗ್ರಾಮದ ಬಾಗೇರಿ ಬ್ರದರ್ಸ್ ವತಿಯಿಂದ ಆಯೋಜಕ ಬಾಗೇರಿ ರಾಜು ಹಾಗೂ ಉದ್ಯಮಿ ಬಾಗೇರಿ ಮಧು ಅವರ ಸಹಯೋಗದಲ್ಲಿ ಡಾ. ಪುನೀತ್ ರಾಜಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಪ್ರಥಮ ವರ್ಷದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ (ಅಪ್ಪು ಕಪ್) ತಾ.೨೬ ರಂದು ಬೆಳಿಗ್ಗೆ ೯ ಗಂಟೆಯಿAದ ಮೂದರವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ.
ಅಂತರ ರಾಜ್ಯಮಟ್ಟದ ಆಹ್ವಾನಿತ ತಂಡಗಳ ಎ ಗ್ರೇಡ್ ಪಂದ್ಯಾವಳಿ ಇದಾಗಿದ್ದು; ಪ್ರಥಮ ಬಹುಮಾನ ರೂ.೫೦,೦೦೦ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ರೂ.೩೦,೦೦೦ ನಗದು ಹಾಗೂ ಆಕರ್ಷಕ ಟ್ರೋಫಿ, ತೃತೀಯ ಬಹುಮಾನ ರೂ.೨೦,೦೦೦ ನಗದು ಹಾಗೂ ಆಕರ್ಷಕ ಟ್ರೋಫಿ, ಚತುರ್ಥ ಬಹುಮಾನ ರೂ.೧೦,೦೦೦ ನಗದು ಹಾಗೂ ಆಕರ್ಷಕ ಟ್ರೋಫಿ ಇರುತ್ತದೆ. ಜೊತೆಗೆ ಬೆಸ್ಟ್ ರೈಡರ್, ಬೆಸ್ಟ್ ಕ್ಯಾಚರ್, ಬೆಸ್ಟ್ ಆಲ್ ರೌಂಡರ್ಗೆ ಪ್ರಶಸ್ತಿ ನೀಡಲಾಗುತ್ತದೆ. ಭಾಗವಹಿಸಲು ಇಚ್ಛಿಸುವ ತಂಡಗಳು ತಾ. ೨೫ ರ ಮಧ್ಯಾಹ್ನ ೩ ಗಂಟೆಯ ಒಳಗೆ ತಮ್ಮ ತಂಡದ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮೊ.ನಂ.೯೮೪೪೪ ೪೫೦೫೬, ೮೬೧೮೬ ೭೫೬೮೪ ಸಂಪರ್ಕಿಸಬಹುದು.