ಚೆಯ್ಯಂಡಾಣೆ, ಏ. ೨೨: ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಚೆರಿಯಪರಂಬು ಗ್ರಾಮದಲ್ಲಿ ಯುವಕನೊಬ್ಬನ ಮೇಲೆ ನಡೆದ ಗುಂಪು ಹಲ್ಲೆ ಪ್ರಕರಣಕ್ಕೆ ಸಂಬAಧಿಸಿದAತೆ ಆರು ಮಂದಿ ಯುವಕರ ವಿರುದ್ಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ತಾ. ೨೦ ರಂದು ಮುಂಜಾನೆ ಎರಡು ಗಂಟೆಗೆ ಚೆರಿಯಪರಂಬು ಗ್ರಾಮದಲ್ಲಿ ಸ್ನೇಹಿತನೊಂದಿಗೆ ಎಮ್ಮೆಮಾಡು ಉರೂಸ್‌ಗೆ ಬಂದ ಶನಿವಾರಸಂತೆ ನಿವಾಸಿ ಅಬ್ದುಲ್ ರೆಹಮಾನ್ ಎಂಬ ಯುವಕನ ಮೇಲೆ ಯುವಕರ ಗುಂಪೊAದು ಹಲ್ಲೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವನ್ನು ಹರಿಯ ಬಿಡಲಾಗಿತ್ತು.
ಹಲ್ಲೆಗೊಳಗಾದ ಯುವಕ ಶನಿವಾರಸಂತೆಯಲ್ಲಿರುವ ಪೋಷಕರ ಗಮನಕ್ಕೆ ತಂದು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ಪೊಲೀಸರಿಗೆ ದೂರು ನೀಡಿದ್ದ.
ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಗಳಾದ ಕೊಟ್ಟಮುಡಿಯ ಅನೀಸ್, ಬೇತು ಗ್ರಾಮದ ತೌಫೀಕ್, ಕೊಟ್ಟಮುಡಿಯ ಅಜ್ಮಲ್, ಎಮ್ಮೆಮಾಡುವಿನ ನಾಝಿಮ್, ಚೆರಿಯಪರಂಬುವಿನ ಸಹದ್ ಶನಿವಾರಸಂತೆ ತ್ಯಾಗರಾಜ ಕಾಲೋನಿಯ ನೌಶಿಕ್ ಮತ್ತಿತರರ ವಿರುದ್ಧ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದ ತಂಡದಲ್ಲಿ ಇನ್ನೂ ಹಲವು ಯುವಕರು ಇದ್ದರು ಎನ್ನಲಾಗಿದೆ.
ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ. ಯುವಕನ ಮೇಲೆ ನಡೆದ ಗುಂಪು ಹಲ್ಲೆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದ್ದಂತೆ ನಾಪೋಕ್ಲು ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಪುಡಿ ರೌಡಿ, ಪುಂಡರ ಹಾವಳಿ ಜಾಸ್ತಿಯಾಗಿದೆ. ಪೊಲೀಸರು ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ಸಾರ್ವಜನಿಕರು ಒತ್ತಾಯ ಕೂಡ ಮಾಡಿದ್ದರು. ಹಲ್ಲೆ ನಡೆಸಿದ ಆರೋಪಿಗಳು ಈಗಾಗಲೇ ತಲೆಮರೆಸಿ ಕೊಂಡಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆಂದು ತಿಳಿದುಬಂದಿದೆ.