ಚೆಯ್ಯಂಡಾಣೆೆ, ಏ. ೨೨: ನಾಪೋಕ್ಲುವಿನಲ್ಲಿ ಬುಧವಾರ ಮಧ್ಯಾಹ್ನದ ನಂತರ ಸುರಿದ ಗಾಳಿ, ಮಳೆಗೆ ಅಡಿಕೆ ಮರವೊಂದು ಅಂಗಡಿ ಮಳಿಗೆಯ ಮೇಲೆ ಉರುಳಿ ಬಿದ್ದ ಪರಿಣಾಮ ಮಳಿಗೆಗೆ ಅಳವಡಿಸಲಾದ ಶೀಟ್‌ಗಳು ಹಾನಿಯಾದ ಘಟನೆ ನಾಪೋಕ್ಲು - ಮಡಿಕೇರಿ ಮುಖ್ಯರಸ್ತೆಯ ಬೇತು ಗ್ರಾಮದಲ್ಲಿ ಸಂಭವಿಸಿದೆ.

ಬೇತು ಗ್ರಾಮದ ನಿವಾಸಿ ಟಿ.ಎ. ಮಹಮ್ಮದ್ ಹನೀಫ್ ಎಂಬವರ ಮನೆಯ ಸಮೀಪವಿರುವ ಅಡಿಕೆ ಮರವೊಂದು ಮನೆಯ ಸಮೀಪದ ವೆಲ್ಡಿಂಗ್ ಶಾಪ್ ಮಳಿಗೆಯ ಮೇಲೆ ಉರುಳಿ ಬಿದ್ದಿದೆ. ಇದರಿಂದ ಮಳಿಗೆಯ ಕಬ್ಬಿಣದ ಪೈಪ್ ಹಾಗೂ ೮ ಸಿಮೆಂಟ್ ಶೀಟ್‌ಗಳಿಗೆ ಹಾನಿಯಾಗಿದ್ದು ನಷ್ಟ ಸಂಭವಿಸಿದೆ. ಮರ ಬೀಳುವ ಶಬ್ದ ಕೇಳಿ ಮಳಿಗೆಯಲ್ಲಿ ಇದ್ದವರು ಹೊರ ಓಡಿ ಅಪಾಯದಿಂದ ಪಾರಾಗಿದ್ದಾರೆ.