ವೀರಾಜಪೇಟೆ, ಏ. ೨೨: ಮೊಬೈಲ್ ಪ್ರಪಂಚದಲ್ಲಿ ವಿದ್ಯಾರ್ಥಿಗಳು ಕಾಲ ಕಳೆಯುವ ಬದಲು ಓದು ಮತ್ತು ಕ್ರೀಡೆಯಲ್ಲಿ ತೊಡಗಿಸಿಕೊಂಡು ಮುಂದಿನ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಒಲಂಪಿಯನ್ ಚೆಪ್ಪುಡಿರ ಪೂಣಚ್ಚ ಹೇಳಿದರು.
ವೀರಾಜಪೇಟೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಟ್ರಸ್ಟ್ ವತಿಯಿಂದ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ೩೦ನೇ ವರ್ಷದ ವಿದ್ಯಾರ್ಥಿಗಳ ಹಾಕಿ ತರಬೇತಿ ಶಿಬಿರದ ಸಮಾರೋಪದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ಕಿರಿಯರು ಹಿರಿಯರಿಗೆ ಗೌರವ ನೀಡುವುದರೊಂದಿಗೆ ಶಿಸ್ತನ್ನು ಪಾಲಿಸಬೇಕು. ಕ್ರೀಡಾ ಕ್ಷೇತ್ರ ಮಾನಸಿಕ ಹಾಗೂ ಶಾರೀರಿಕ ದೃಢತೆಯನ್ನು ತರುತ್ತದೆ ಎಂದರು.
ಸಮಾರAಭದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ನ ಅಧ್ಯಕ್ಷ ಡಾ. ಮುಕ್ಕಾಟಿರ ಕಾರ್ಯಪ್ಪ ಮಾತನಾಡಿ, ನಮ್ಮಲ್ಲಿ ತರಬೇತಿ ಪಡೆದ ಅನೇಕ ವಿದ್ಯಾರ್ಥಿಗಳು ಇಂದು ರಾಷ್ಟಿçÃಯ ಅಂತರರಾಷ್ಟಿçÃಯ ಮಟ್ಟದಲ್ಲಿ ಆಡಿದ್ದಾರೆ ಎನ್ನುವುದು ಹೆಮ್ಮೆಯ ವಿಚಾರ. ವಿದ್ಯಾರ್ಥಿಗಳಲ್ಲಿ ಆಸಕ್ತಿ ಇರಬೇಕು. ಅದರಲ್ಲಿಯೂ ಕ್ರೀಡಾ ಆಸಕ್ತಿ ಇರಬೇಕು. ಶೇ. ೧೦೦ ಅಂಕ ಗಳಿಸಿದರೆ ಸಾಲದು, ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಯಲ್ಲಿಯೂ ತೊಡಗಿಸಿಕೊಂಡಿರಬೇಕು ಎಂದರು.
ಟ್ರಸ್ಟ್ನ ಸದಸ್ಯರಾದ ಶ್ಯಾಂ ಪ್ರತಾಪ್, ಮುತ್ತಪ್ಪ, ಸುರೇಶ್ ಚಿಣ್ಣಪ್ಪ ಮುಂತಾದವರು ಉಪಸ್ಥಿತರಿದ್ದರು. ತರಬೇತುದಾರರಾದ ಅರೆಯಡ ಚಿಣ್ಣಪ್ಪ, ನೆಲ್ಲಮಕ್ಕಡ ಅಪ್ಪು ಕಾರ್ಯಪ್ಪ, ಕೂತಂಡ ಸಚಿನ್, ಮಾಳೇಟಿರ ಜೀವನ್ ಮತ್ತಿತರರು ಇದ್ದರು.
ಶಿಬಿರದಲ್ಲಿ ಕುಪ್ಪಂಡ ಮನ್ವಿಕ, ಚೋಕಂಡ ಚರ್ಮಣ್ಣ, ಕಳ್ಳಿಚಂಡ ಪ್ರಜ್ಞಾ ಮುತ್ತಮ್ಮ ಇವರನ್ನು ಶಿಸ್ತುಬದ್ಧ ಆಟಗಾರರೆಂದು ಗುರುತಿಸಿ ಗೌರವಿಸಲಾಯಿತು.