ಸಿದ್ದಾಪುರ, ಏ. ೨೨: ಚಾಲಕನ ನಿಯಂತ್ರಣ ತಪ್ಪಿ ಆಟೋ ಮಗುಚಿದ ಪರಿಣಾಮ ಚಾಲಕ ಮೃತಪಟ್ಟಿದ್ದು ಓರ್ವ ಗಂಭೀರ ಗಾಯಗೊಂಡ ಘಟನೆ ಮಾಲ್ದಾರೆಯಲ್ಲಿ ಸಂಭವಿಸಿದೆ.

ಮಾಲ್ದಾರೆ ನಿವಾಸಿ ಆಟೋ ಚಾಲಕ ಮಾದ(೩೯)ಮೃತ ದುರ್ದೈವಿ.

ಬುಧವಾರ ಅಂಚೆತಿಟ್ಟು ನಿವಾಸಿ ಸುನಿಲ್ ಎಂಬಾತ ತರಕಾರಿ ಖರೀದಿಸಿ ಮಾದ ಎಂಬಾತನ ಆಟೋ ರಿಕ್ಷಾದಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭ ಚಾಲಕ ವೇಗವಾಗಿ ವಾಹನ ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿದ ವಾಹನವು ರಸ್ತೆಯಲ್ಲಿ ಮಗುಚಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸ್ಥಳೀಯರು ವಾಹನವನ್ನು ಪರಿಶೀಲಿಸಿದಾಗ ವಾಹನದ ಕೆಳಬಾಗದಲ್ಲಿ ಚಾಲಕ ಸಿಲುಕಿರುವುದು ಕಂಡುಬAದಿದೆ. ಕೂಡಲೇ ಗಾಯಗೊಂಡ ಚಾಲಕ ಹಾಗೂ ಗ್ರಾಹಕ ಸುನಿಲ್‌ನನ್ನು ಸಿದ್ದಾಪುರ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಗಂಭೀರ ಗಾಯಗೊಂಡ ಚಾಲಕ ಮಾದ ಮೃತಪಟ್ಟಿರುವುದು ದೃಡಪಟ್ಟಿದೆ. ಜೊತೆಯಲ್ಲಿದ್ದ ಸುನಿಲ್ ಎಂಬಾತನಿಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಗೆ ದಾಖಲಿಸಲಾಗಿದೆ. ಘಟನೆ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.