ಮಡಿಕೇರಿ, ಏ. ೨೧; ಮಡಿಕೇರಿ ಅರೆಭಾಷೆ ಗೌಡ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಗೌಡ ಜನಾಂಗ ಬಾಂಧವರಿಗಾಗಿ ಏರ್ಪಡಿಸಲಾಗಿದ್ದ ಎರಡನೇ ವರ್ಷದ ಗೌಡ ಕ್ರೀಡಾ ಹಬ್ಬದ ಪುರುಷರ ವಿಭಾಗದ ಮುಕ್ತ ಫುಟ್ಬಾಲ್ ಪಂದ್ಯಾವಳಿಯಲ್ಲಿ ಗೌಡ ಫುಟ್ಬಾಲ್ ಅಕಾಡೆಮಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಗೌಡ ಫೈರ‍್ಸ್ ತಂಡ ದ್ವಿತೀಯ ಸ್ಥಾನ ಗಳಿಸಿದೆ.

ಮಡಿಕೇರಿಯ ಗಾಂಧಿ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ಪುರುಷರ ಮುಕ್ತ ವಿಭಾಗದಲ್ಲಿ ಒಟ್ಟು ೧೨ ತಂಡಗಳು ಭಾಗವಹಿಸಿದ್ದು, ಈ ಪೈಕಿ ಗೌಡ ಫುಟ್ಬಾಲ್ ಅಕಾಡೆಮಿ ಹಾಗೂ ಗೌಡ ಟೈರ‍್ಸ್ ತಂಡಗಳು ಅಂತಿಮ ಹಂತಕ್ಕೆ ಪ್ರವೇಶಿಸಿತು. ರೋಚಕತೆಯಿಂದ ಕೂಡಿದ್ದ ಪಂದ್ಯಾವಳಿಯಲ್ಲಿ ಗೌಡ ಫುಟ್ಬಾಲ್ ಅಕಾಡೆಮಿ ತಂಡ ೩-೧ ಗೋಲುಗಳ ಅಂತರದಿAದ ಗೆಲುವು ಸಾಧಿಸಿತು. ಕುಶಾಲನಗರ ಗೌಡ ಎಫ್‌ಸಿ ತಂಡ ಮೂರನೇ ಹಾಗೂ ಅಯ್ಯಪ್ಪ ಯುವಕ ಸಂಘ ನಾಲ್ಕನೇ ಸ್ಥಾನ ಗಳಿಸಿದವು.

೧೬ ವರ್ಷದೊಳಗಿನ ಬಾಲಕರ ನಡುವಿನ ಪಂದ್ಯಾವಳಿಯಲ್ಲಿ ಕೌಂಟಿ ಸ್ಪೋರ್ಟ್ಸ್ ಕೊಡಗು ೩-೨ ಗೋಲುಗಳ ಅಂತರದಿAದ ಪ್ರಥಮ ಸ್ಥಾನ ಗಳಿಸಿದರೆ, ಯಂಗ್ ಫೈರ‍್ಸ್ ದ್ವಿತೀಯ ಸ್ಥಾನ ಗಳಿಸಿತು. ಮಹಿಳೆಯರ ನಡುವಿನ ಫುಟ್ಬಾಲ್ ಪಂದ್ಯಾವಳಿಯಲ್ಲಿ ಡ್ರಿಬ್ಲಿಂಗ್ ದಿವಾಸ್ ೨-೧ ಗೋಲಿನಿಂದ ಪ್ರಥಮ ಸ್ಥಾನ ಗಳಿಸಿದರೆ, ಯುನೈಟೆಡ್ ಗೌಡ ಫ್ಯಾಮಿಲೀಸ್ ಎಫ್‌ಸಿ ದ್ವಿತೀಯ ಸ್ಥಾನ ಗಳಿಸಿತು.

ಮಹಿಳೆಯರ ಹಗ್ಗ ಜಗ್ಗಾಟ

ರೋಚಕತೆಯಿಂದ ಕೂಡಿದ್ದ ಗ್ರಾಮವಾರು ಮಹಿಳೆಯರ ಹಗ್ಗ ಜಗ್ಗಾಟ ಪಂದ್ಯಾವಳಿ ಪ್ರೇಕ್ಷಕರಿಗೆ ಮನರಂಜನೆ ನೀಡಿತು. ಜಿದ್ದಾಜಿದ್ದಿನಿಂದ ಕೂಡಿದ್ದ ಈ ಪಂದ್ಯದಲ್ಲಿ ಅಂತಿಮವಾಗಿ ಚೇರಂಬಾಣೆ ಗೌಡ ಮಹಿಳಾ ಒಕ್ಕೂಟ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿತು. ನಂಜರಾಯಪಟ್ಟಣ ಗೌಡ ಯುವತಿ ಮಂಡಳಿ ದ್ವಿತೀಯ ಸ್ಥಾನ ಗಳಿಸಿತು. ಈ ಪಂದ್ಯಾವಳಿಯನ್ನು ಮುಖ್ಯ ಅತಿಥಿಗಳಾಗಿದ್ದ ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಅಮೆ ದಮಯಂತಿ, ಮಡಿಕೇರಿ ನಗರಸಭಾ ನಿವೃತ್ತ ಆಯುಕ್ತೆ ಮೂಟೇರ ಪುಷ್ಪಾವತಿ, ನಗರಸಭಾ ಸದಸ್ಯೆ ಕುಟ್ಟನ ಶ್ವೇತಾ ಪ್ರಶಾಂತ್, ಬೆಳೆಗಾರರಾದ ದಂಬೆಕೋಡಿ ಭೀಷ್ಮ ಕವನ, ಸಮೃದ್ಧಿ ಹೆಲ್ತ್ಕೇರ್ ಹಾಗೂ ಡಯಾಗ್ನೋಸ್ಟಿಕ್ ಸೆಂಟರ್‌ನ ಟಿ.ಎ. ಹೇಮಲತಾ ಅವರುಗಳು ಉದ್ಘಾಟಿಸಿದರು.

ವೈಯಕ್ತಿಕ ಬಹುಮಾನಗಳು

ಪುರುಷರ ಮುಕ್ತ ಪಂದ್ಯಾವಳಿಯಲ್ಲಿ ಉತ್ತಮ ಆಟಗಾರರಾಗಿ ಸುಜಯ್ ಬಡುವಂಡ್ರ, ಡಿಫೆಂಡರ್ ಆಗಿ ಪ್ರವೀಣ್ ಕಡ್ಯದ, ಉತ್ತಮ ಗೋಲ್‌ಕೀಪರ್ ಆಗಿ ರೋಶನ್ ಬೊಳ್ಳೂರು, ಉದಯೋನ್ಮುಖ ಆಟಗಾರನಾಗಿ ಗಗನ್ ಬೊಳ್ಳೂರು, ಟಾಪ್ ಸ್ಕೋರರ್ ಆಗಿ ಮಹೇಶ್ ಪಾಣತ್ತಲೆ ಬಹುಮಾನ ಪಡೆದುಕೊಂಡರು.

೧೬ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಉತ್ತಮ ಆಟಗಾರನಾಗಿ ಅಕುಲ್ ಬೈಲೋಳಿ, ಡಿಫೆಂಡರ್ ಆಗಿ ಯುಗನ್ ಮರದಾಳು, ಗೋಲ್‌ಕೀಪರ್ ಆಗಿ ವಿಕಾಸ್ ಬಾರಿಕೆ, ಉದಯೋನ್ಮುಖ ಆಟಗಾರನಾಗಿ ಜೀವಿತ್ ಬಳಪದ, ಟಾಪ್ ಸ್ಕೋರರ್ ಆಗಿ ಲಿಖಿತ್ ಬಾರಿಕೆ ಬಹುಮಾನ ಪಡೆದುಕೊಂಡರು. ಮಹಿಳೆಯರ ವಿಭಾಗದಲ್ಲಿ ಉತ್ತಮ ಆಟಗಾರ್ತಿಯಾಗಿ ವಿದಿತ ಕೋಡಿ, ಡಿಫೆಂಡರ್ ಆಗಿ ಹರ್ಷಿತ ಬಾರಿಕೆ, ಗೋಲ್‌ಕೀಪರ್ ಆಗಿ ರಕ್ಷಿತ ಕುಂಬAಡ, ಉದಯೋನ್ಮುಖ ಆಟಗಾರ್ತಿಯಾಗಿ ನಂದಿತ ಪಡೋಳಿ, ಟಾಪ್ ಸ್ಕೋರರ್ ಆಗಿ ವಿದಿತ ಕೋಡಿ ಬಹುಮಾನ ಪಡೆದುಕೊಂಡರು.