ಈ ಬಾರಿಯ ಕ್ರೀಡಾ ಹಬ್ಬದಲ್ಲಿ ೪೫ ವರ್ಷ ಮೇಲ್ಪಟ್ಟವರ ಲೆಜೆಂಡ್ಸ್ ಚಾಂಪಿಯನ್‌ಶಿಪ್‌ನಲ್ಲಿ ಹಿರಿಯ ಆಟಗಾರರು ತಮ್ಮ ವಯಸ್ಸನ್ನು ಲೆಕ್ಕಿಸದೆ ಮೈದಾನಕ್ಕಿಳಿದು ಆಟವಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಅಂತರರಾಷ್ಟಿçÃಯ ಮಟ್ಟದ ಆಟಗಾರ ಬೆಪ್ಪುರನ ಅಣ್ಣಪ್ಪಕುಮಾರ್ ಸೇರಿದಂತೆ ಹಿರಿಯರಾದ ೬೨ ವರ್ಷ ಪ್ರಾಯದ ಶ್ರೀನಿವಾಸ್ ಕೂಡ ಆಟದ ಮೈದಾನಕ್ಕಿಳಿದು ಗಮನ ಸೆಳೆದರು. ಸರಿ ಸುಮಾರು ೨೫ ವರ್ಷದ ಬಳಿಕ ಪಂದ್ಯಾಟಕ್ಕಿಳಿದ ಈ ಎಲ್ಲ ಲೆಜೆಂಡ್ಸ್ಗಳು ಯುವ ಆಟಗರರಿಗಿಂತ ತಾವೇನೂ ಕಮ್ಮಿ ಇಲ್ಲವೆಂಬುದನ್ನು ತೋರಿಸಕೊಟ್ಟರು.

ಈ ಪಂದ್ಯಾವಳಿಯಲ್ಲಿ ಆರು ತಂಡಗಳಿAದ ೩೮ ಆಟಗಾರರು ಆಟವಾಡಿದರು. ಉತ್ತಮ ಆಟಗಾರರಾಗಿ ಜಗದೀಶ್ ಪಾಣತ್ತಲೆ, ಡಿಫೆಂಡರ್ ಆಗಿ ನವೀನ್ ಮುಕ್ಕಾಟಿ, ಗೋಲ್‌ಕೀಪರ್ ಆಗಿ ಚಿದಾನಂದ ಕಾಂಗೀರ, ಉದಯೋನ್ಮುಖ ಆಟಗಾರರಾಗಿ ನಿಶ್ಚಿಂತ್ ಕೆದಂಬಾಡಿ, ಟಾಪ್ ಸ್ಕೋರರ್ ಆಗಿ ಗಿರೀಶ್ ಕೊಳಂಬೆ ಬಹುಮಾನ ಪಡೆದುಕೊಂಡರು.