ಮಡಿಕೇರಿ, ಏ. ೨೧; ಮಕ್ಕಂದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆಮ್ಮೆತ್ತಾಳು ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಿಯ ವಾರ್ಷಿಕ ಉತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಬೆಳಿಗ್ಗೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ನಡೆದು ಮಧ್ಯಾಹ್ನ ಮಹಾಮಂಗಳಾರತಿ ನೆರವೇರಿತು. ಇದರೊಂದಿಗೆ ನಾಗದೇವರು, ಗುಳಿಗ ದೈವಗಳಿಗೂ ಪೂಜೆ ನೆರವೇರಿಸಲಾಯಿತು.

ದೇವಾಲಯದ ಪೂಜಾರಿಗಳಾದ ಗಂಗಾಧರ, ಕೋಡಿಯಡ್ಕ ಅಶೋಕ, ಕುದುಪಜೆ ವಿಕಾಸ್ ಅವರುಗಳು ಪೂಜಾ ಕಾರ್ಯ ನೆರವೇರಿಸಿದರು. ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಕಟ್ಟೆಮನೆ ಗಣೇಶ್, ಉಪಾಧ್ಯಕ್ಷ ಕುಡೆಕಲ್ ಸಂಪತ್, ಕಾರ್ಯದರ್ಶಿ ಗಿರೀಶ್, ಸಿ. ಧರ್ಮರಾಜ ಸೇರಿದಂತೆ ಪದಾಧಿಕಾರಿಗಳು, ಸದಸ್ಯ

ರುಗಳು ಪಾಲ್ಗೊಂಡಿದ್ದರು. ''