ನಾಪೋಕ್ಲು, ಏ. ೨೧: ಸಮೀಪದ ಬಲ್ಲಮಾವಟಿ ಗ್ರಾಮದ ಭಗವತಿ ಭದ್ರಕಾಳಿ ರಾಟೆ ದೇವಸ್ಥಾನದ ಉತ್ಸವ ತಾ. ೨೩ ಮತ್ತು ೨೪ ರಂದು ನಡೆಯಲಿದೆ.
ತಾ. ೨೩ ರಂದು ಬೆಳಿಗ್ಗೆ ೧೦ ಗಂಟೆಗೆ ತಕ್ಕರ ಮನೆಯಿಂದ ಭಂಡಾರ ಬರುವುದು, ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ, ಮಧ್ಯಾಹ್ನ ೨ ಗಂಟೆಗೆ ಬೇಡು ಬರುವುದು, ತಾ. ೨೪ರಂದು ಕಾರೇರಿಯಂಡ ತಕ್ಕರಲ್ಲಿಂದ ಭಂಡಾರ ಬರುವುದು, ಬಳಿಕ ಆರಾಟ್, ಬೊಳಕಾಟ್ ನಡೆದು ನಂತರ ದೇವರಿಗೆ ಹರಕೆ ಸಲ್ಲಿಕೆ ನಡೆಯಲಿದೆ. ಮಧ್ಯಾಹ್ನ ೧೧:೩೦ ಕ್ಕೆ ರಾಟೆಯಲ್ಲಿ ದೇವರನ್ನು ಆಡಿಸುವುದು, ದೇವಾಲಯದಲ್ಲಿ ಕ್ಷೇತ್ರಪಾಲ, ಸಾರ್ತಾವು, ಭದ್ರಕಾಳಿ ತೆರೆಮುಡಿ ಜರುಗಲಿದೆ ಎಂದು ದೇವಾಲಯ ತಕ್ಕ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.