ವೀರಾಜಪೇಟೆ, ಏ. ೨೧: ಚೆÀಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಣಗೇರಿ, ಚೆಂಬೆಬೆಳ್ಳೂರು, ಪೊದಕೋಟೆ, ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆ ಹಾವಳಿಯಿಂದ ಗ್ರಾಮಸ್ಥರು ಬೆಸತ್ತಿದ್ದಾರೆ.
ಕೆಲವು ತಿಂಗಳುಗಳಿAದ ಕಾಡಾನೆಗಳು ನಿರಂತರವಾಗಿ ತೋಟ, ಹೊಲ, ಗದ್ದೆಗಳಿಗೆ ದಾಳಿ ಮಾಡುತ್ತಿದ್ದು, ವಾಣಿಜ್ಯ ಬೆಳೆಗಳಾದ ಕಾಫಿ, ಕಾಳು ಮೆಣಸು, ಬಾಳೆ, ಅಡಿಕೆ ಫಸಲನ್ನು ನಾಶ ಮಾಡುತ್ತಿದೆ ಚೆಂಬೆಬೆಳ್ಳೂರು ಗ್ರಾಮದ ಮಂಡೇಪAಡ ರಿಶು ಕಾರ್ಯಪ್ಪ ಅವರ ಕಾಫಿ ತೋಟ ಹಾಗೂ ಬಾಳೆ ತೋಟವನ್ನು ಧ್ವಂಸ ಮಾಡಿದ್ದು ಸಾವಿರಾರು ರೂಪಾಯಿಗಳ ನಷ್ಟ ಉಂಟಾಗಿದೆ. ಸುಮಾರು ೫೦ಕ್ಕೂ ಅಧಿಕ ಕಾಫಿ ಗಿಡಗಳನ್ನು ಬೇರು ಸಹಿತ ಕಿತ್ತು ಹಾಕಿದ್ದು ಮುಂದಿನ ಸಾಲಿನಲ್ಲಿ ಹೊಸ ಗಿಡ ಹಾಕುವ ಪರಿಸ್ಥಿತಿಗೆ ತಂದೊಡ್ಡಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಅರಣ್ಯ ಇಲಾಖೆ ಒಂದು ಪುಂಡಾನೆಯನ್ನು ಸೆರೆ ಹಿಡಿದ ಪರಿಣಾಮ ಗ್ರಾಮಸ್ಥರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿತ್ತು. ಆದರೆ ಕಳೆದ ಮೂರು ದಿನಗಳಿಂದ ಆನೆಗಳ ಹಿಂಡು ಸಂಚರಿಸುತ್ತಿದ್ದು, ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದೆ.