ಈ ಪಂದ್ಯಾವಳಿಯಲ್ಲಿ ಈ ಬಾರಿಯಿಂದ ರೋಲಿಂಗ್ ಟ್ರೋಫಿ ಬಹುಮಾನ ನೀಡಲಾಗುತ್ತಿದೆ. ಉದ್ಯಮಿ ಬೊಮ್ಮನ ಕಿರಣ್ ಅವರು ಪ್ರಾಯೋಜನೆ ಮಾಡಿರುವ, ಸುಮಾರು ೩೨ ಕೆ.ಜಿ. ತೂಕದ ಬೀಟೆ ಮರದಲ್ಲಿ ಮಾಡಿದ ಆಕರ್ಷಕ ಟ್ರೋಫಿಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅನಾವರಣಗೊಳಿಸಿದರು. ಟ್ರೋಫಿಯನ್ನು ಎತ್ತಿಕೊಂಡ ಶಾಸಕರು; ‘ಅಬ್ಬಾ ಎಷ್ಟು ಭಾರ ಇದೆ, ಬ್ಯೂಟಿಫುಲ್’ ಎಂದು ಹೇಳಿದರು.