ಮಡಿಕೇರಿ, ಏ. ೨೦: ಮರಗೋಡುವಿನ ಗೌಡ ಇವಿನಿಂಗ್ ಸ್ಟಾರ್ ವತಿಯಿಂದ ಭಾರತಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಗೌಡ ಜನಾಂಗದ ನಡುವಿನ ಗೌಡ ಕುಟುಂಬ ಕಲರವ ಕ್ರಿಕೆಟ್ ಪಂದ್ಯಾವಳಿಯಲ್ಲಿAದು ಪಾಣತ್ತಲೆ, ಕೊಂಬAಡ ಪ್ರಿ ಕ್ವಾರ್ಟರ್‌ಗೆ ಪ್ರವೇಶ ಪಡೆದುಕೊಂಡಿತು.
ತೊತ್ತಿಯನ ಹಾಗೂ ಬಡುವಂಡ್ರ ನಡುವಿನ ಪಂದ್ಯದಲ್ಲಿ ತೊತ್ತಿಯನ ೫೪ ರನ್‌ಗಳ ಜಯ ಪಡೆಯಿತು. ಮೊದಲು ಬ್ಯಾಟ್ ಮಾಡಿದ ತೊತ್ತಿಯನ ೫ ವಿಕೆಟ್ ನಷ್ಟಕ್ಕೆ ೮೪ ರನ್ ಪೇರಿಸಿತು. ಬೃಹತ್ ಮೊತ್ತ ಬೆನ್ನತ್ತಿದ ಬಡುವಂಡ್ರ ೭ ವಿಕೆಟ್ ಕಳೆದುಕೊಂಡು ಕೇವಲ ೩೦ ರನ್‌ಗಳನ್ನಷ್ಟೆ ದಾಖಲಿಸಿ ಸೋಲೊಪ್ಪಿಕೊಂಡಿತು.
ತೋಟಂಬೈಲು ವಿರುದ್ಧ ಕೊಂಬAಡ ಜಯ ಸಾಧಿಸಿತು. ೫ ವಿಕೆಟ್ ನಷ್ಟಕ್ಕೆ ಕೊಂಬAಡ ೭೫ ರನ್ ದಾಖಲಿಸಿತು. ತೋಟಂಬೈಲ್ ೪ ವಿಕೆಟ್ ಕಳೆದುಕೊಂಡು ಕೇವಲ ೩೮ ರನ್‌ಗಳನ್ನಷ್ಟೆ ದಾಖಲಿಸಲು ಶಕ್ತವಾಯಿತು.
ಬೈಚನ ವಿರುದ್ಧ ಕಡ್ಯದ ೬ ವಿಕೆಟ್‌ಗಳ ಜಯ ಪಡೆಯಿತು. ಬೈಚನ ತಂಡ ೧೦ ವಿಕೆಟ್ ಕಳೆದುಕೊಂಡು ೫೨ ರನ್ ಪೇರಿಸಿತು. ಕಡ್ಯದ ೪.೪ ಓವರ್‌ಗಳಲ್ಲಿ ೩ ವಿಕೆಟ್ ಕಳೆದುಕೊಂಡು ೫೩ ರನ್ ಗಳಿಸಿ ಗೆಲುವಿನ ನಗೆಬೀರಿತು. ಕುಕ್ಕನೂರು ತಂಡವನ್ನು ಕೂಡಕಂಡಿ ಮಣಿಸಿತು. ಮೊದಲು ಬ್ಯಾಟ್ ಮಾಡಿದ ಕುಕ್ಕನೂರು ನಿಗದಿತ ಓವರ್‌ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೪೪ ರನ್ ಪೇರಿಸಿತು. ಕೂಡಕಂಡಿ ಕೇವಲ ೨.೫ ಓವರ್‌ನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ೪೬ ರನ್ ಪೇರಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು.
ಎಡಿಕೇರಿ (ಎ) ವಿರುದ್ಧ ಅಯ್ಯಂಡ್ರ ಗೆಲುವು ಪಡೆದುಕೊಂಡಿತು. ೩ ವಿಕೆಟ್ ನಷ್ಟಕ್ಕೆ ಎಡಿಕೇರಿ ೫೧ ರನ್ ಬಾರಿಸಿತು. ಗುರಿ ಬೆನ್ನತ್ತಿದ ಅಯ್ಯಂಡ್ರ ೩.೧ ಓವರ್‌ನಲ್ಲಿ ೨ ವಿಕೆಟ್ ನಷ್ಟಕ್ಕೆ ೫೬ ರನ್ ಗಳಿಸಿ ಗೆಲುವಿನ ನಗೆ ಬೀರಿತು. ಪೋರೆಯನ ವಿರುದ್ಧ ಪಾಣತ್ತಲೆ ಜಯ ಸಾಧಿಸಿತು. ಪೋರೆಯನ ೪ ವಿಕೆಟ್ ನಷ್ಟಕ್ಕೆ ೪೪ ರನ್ ದಾಖಲಿಸಿತು. ಪಾಣತ್ತಲೆ ೩.೫ ಓವರ್‌ನಲ್ಲಿ ೪೫ ರನ್ ಬಾರಿಸಿ ಗೆಲುವು ಪಡೆದುಕೊಂಡಿತು.
ತೊತ್ತಿಯನ ತಂಡವನ್ನು ಬಿಳಿಯಂಡ್ರ ಮಣಿಸಿತು. ತೊತ್ತಿಯನ ೩ ವಿಕೆಟ್ ನಷ್ಟಕ್ಕೆ ೫೪ ರನ್ ಬಾರಿಸಿತು. ಬಿಳಿಯಂಡ್ರ ೩.೪. ಓವರ್‌ನಲ್ಲಿ ೫೫ ರನ್ ಪೇರಿಸಿ ಗೆಲುವು ತನ್ನದಾಗಿಸಿಕೊಂಡಿತು.
ಕಡ್ಯದ ವಿರುದ್ಧ ಕೊಂಬAಡ ೪೦ ರನ್‌ಗಳ ಜಯ ಪಡೆಯಿತು. ಕೊಂಬAಡ ೫ ವಿಕೆಟ್ ನಷ್ಟಕ್ಕೆ ೭೫ ರನ್ ಪೇರಿಸಿತು. ಕಡ್ಯದ ಕೇವಲ ೩೫ ರನ್ ಗಳಿಸಿ ಪರಾಜಿತಗೊಂಡಿತು.
ಕೂಡಕಂಡಿ ತಂಡ ಅಯ್ಯಂಡ್ರ ತಂಡವನ್ನು ಮಣಿಸಿತು. ಮೊದಲು ಬ್ಯಾಟ್ ಮಾಡಿದ ಅಯ್ಯಂಡ್ರ ೪ ವಿಕೆಟ್ ನಷ್ಟಕ್ಕೆ ೬೩ ರನ್ ಪೇರಿಸಿತು. ಗುರಿ ಬೆನ್ನತ್ತಿದ್ದ ಕೂಡಕಂಡಿ ೫.೧ ಓವರ್‌ನಲ್ಲಿಯೇ ೪ ವಿಕೆಟ್ ಕಳೆದುಕೊಂಡು ೬೪ ರನ್ ಬಾರಿಸಿ ಜಯಗಳಿಸಿತು. ಪಾಣತ್ತಲೆ ಕುಟ್ಟನ ತಂಡವನ್ನು ಮಣಿಸಿತು. ಪಾಣತ್ತಲೆ ೬ ವಿಕೆಟ್ ನಷ್ಟಕ್ಕೆ ೩೧ ರನ್ ದಾಖಲಿಸಿದರೆ, ಕುಟ್ಟನ ೮ ವಿಕೆಟ್ ನಷ್ಟಕ್ಕೆ ೩೦ ರನ್ ಬಾರಿಸಿ ಸೋಲನುಭವಿಸಿತು. ಬಿಳಿಯಂಡ್ರ ವಿರುದ್ಧ ಕೊಂಬAಡ ಜಯ ಸಾಧಿಸಿತು. ಕೊಂಬAಡ ೩ ವಿಕೆಟ್ ನಷ್ಟಕ್ಕೆ ೫೦ ರನ್ ಪೇರಿಸಿದರೆ, ಬಿಳಿಯಂಡ್ರ ೪ ವಿಕೆಟ್ ನಷ್ಟಕ್ಕೆ ೪೫ ರನ್ ಗಳಿಸಿ ಸೋಲೊಪ್ಪಿಕೊಂಡಿತು. ಪಾಣತ್ತಲೆ ವಿರುದ್ಧ ಕೂಡಕಂಡಿ ಪರಾಭವಗೊಂಡಿತು. ಪಾಣತ್ತಲೆ ೪ ವಿಕೆಟ್ ನಷ್ಟಕ್ಕೆ ೫೭ ರನ್ ಬಾರಿಸಿದರೆ, ಕೂಡಕಂಡಿ ೭ ವಿಕೆಟ್ ನಷ್ಟಕ್ಕೆ ೪೨ ರನ್ ಗಳಿಸಿ ಸೋಲು ಕಂಡಿತು.