ವೀರಾಜಪೇಟೆ, ಏ. ೨೦: ಕಾರಿನ ಹಿಂಭಾಗದ ಡೋರ್ ತೆರೆದುಕೊಂಡು ರೀಲ್ಸ್ ಮಾಡುತ್ತಿದ್ದವರಿಗೆ ವೀರಾಜಪೇಟೆ ನಗರ ಠಾಣಾ ಪೊಲೀಸರು ದಂಡ ವಿಧಿಸಿದ್ದಾರೆ.

ಸಿದ್ದಾಪುರದಿಂದ ಕೆಎ೧೮ ಜೆಡ್ ೩೯೭೮ ಸಂಖ್ಯೆಯ ಕಾರಿನಲ್ಲಿ ವೀರಾಜಪೇಟೆ ನಗರದಲ್ಲಿ ಮದುವೆಗೆಂದು ಬಂದಿದ್ದ ಯುವಕರ ತಂಡ ಕಾರಿನ ಡೋರ್ ತೆರೆದುಕೊಂಡು ವೀರಾಜಪೇಟೆ ಅಮ್ಮತ್ತಿ ಮುಖ್ಯರಸ್ತೆಯಲ್ಲಿ ರೀಲ್ಸ್ ಮಾಡುತ್ತಿದ್ದನ್ನು ಗಮನಿಸಿದ ಪೊಲೀಸರು ಕಾರಿನಲ್ಲಿದ್ದವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.