ಮಕ್ಕಂದೂರು ನಿವಾಸಿ, ಸಾಹಿತಿ, ಸಂಶೋಧÀಕ ಪುತ್ತೂರು ಅನಂತರಾಜ ಗೌಡ (೮೧) ತಾ. ೨೦ ರಂದು ನಿಧನರಾದರು. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ. ೨೧ ರಂದು (ಇಂದು) ಮಡಿಕೇರಿಯ ಗೌಡ ರುದ್ರಭೂಮಿಯಲ್ಲಿ ನಡೆಯಲಿದೆ. ಅನಂತರಾಜ ಗೌಡ ಅವರು ಅರೆಭಾಷೆ ಸಮುದಾಯದ ಕುರಿತು ೨ ಸಂಶೋಧನ ಗ್ರಂಥಗಳನ್ನು ಬರೆದಿದ್ದು, ಸಮಾಜಮುಖಿಯಾಗಿ ತೊಡಗಿಸಿಕೊಂಡಿದ್ದರು.

ಮಡಿಕೇರಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ

ಅನಂತ ರಾಜ ಗೌಡ ಅವರ ಅಂತಿಮ ದರ್ಶನಕ್ಕೆ ಬೆಳಿಗ್ಗೆ ೯ ಗಂಟೆಯಿAದ ಮಧ್ಯಾಹ್ನ ೧೨ ಗಂಟೆಯ ತನಕ ಮಡಿಕೇರಿಯ ಗಾಂಧಿ ಮೈದಾನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕೊಡಗು ಗೌಡ ಸಮಾಜಗಳ ಒಕ್ಕೂಟ ತಿಳಿಸಿದೆ.

ನಿಧನಕ್ಕೆ ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಅಂಬೇಕಲ್ಲು ನವೀನ್ ಕುಶಾಲಪ್ಪ ಸಂತಾಪ ಸೂಚಿಸಿದ್ದಾರೆ.