ಮಡಿಕೇರಿ, ಏ. ೧೯: ಕೊಡಗು ವಿಶ್ವವಿದ್ಯಾನಿಲಯದಲ್ಲಿ ಕೊಡವ ಸಂಸ್ಕೃತಿ ಅಧ್ಯಯನ ಪೀಠದ ಮೂಲಕ ಪೂರಕವಾದ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ವಿಶೇಷವಾದ ವಿನೂತನ ಚಿಂತನೆಗಳನ್ನು ಒಳಗೊಂಡ ಯೋಜನೆಯೊಂದನ್ನು ರೂಪಿಸಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಕೊಡಗು ವಿಶ್ವವಿದ್ಯಾನಿಲಯದ ಮೂಲಕ ಇದಕ್ಕೆ ಸಂಬAಧಿತ ರೂಪು - ರೇಷೆಗಳನ್ನು ಒಳಗೊಂಡ ಪ್ರಸ್ತಾವನೆಯನ್ನು ತಯಾರಿಸಲಾಗಿದ್ದು, ಇದರ ವಿವರ ಮಾಹಿತಿಯನ್ನು ಸರಕಾರಕ್ಕೂ ಸಲ್ಲಿಸುವ ಮೂಲಕ ಈ ನಿಟ್ಟಿನಲ್ಲಿ ಹೆಜ್ಜೆಯಿಡಲಾಗುತ್ತಿದೆ.
ಕೊಡಗು ವಿಶ್ವ ವಿದ್ಯಾನಿಲಯವು ೨೦೨೩ರಲ್ಲಿ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯವಾಗಿ ಕೊಡಗಿನ ಚಿಕ್ಕಅಳುವಾರದಲ್ಲಿ ಸ್ಥಾಪನೆಯಾಗಿದೆ. ಈ ವಿಶ್ವವಿದ್ಯಾನಿಲಯದಲ್ಲಿನ ಕೊಡವ ಸಂಸ್ಕೃತಿ ಅಧ್ಯಯನ ಪೀಠವನ್ನು ಇದೀಗ ಮತ್ತಷ್ಟು ಕ್ರಿಯಾಶೀಲಗೊಳಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಅವರ ಮುಂದಾಳತ್ವದಲ್ಲಿ ಕಾರ್ಯಯೋಜನೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.
ರೂ. ೧೦ ಕೋಟಿಯ ಶಾಶ್ವತ ದತ್ತಿನಿಧಿ
ಕೊಡವ ಸಂಸ್ಕೃತಿ ಅಧ್ಯಯನ ಪೀಠಕ್ಕಾಗಿ ರೂ. ೧೦ ಕೋಟಿಯ ಶಾಶ್ವತ ದತ್ತಿ ನಿಧಿ ಸ್ಥಾಪಿಸುವ ಗುರಿ ಹೊಂದಲಾಗಿದೆ. ಪೀಠದ ಈ ದತ್ತಿನಿಧಿಯ ಮೂಲಕ ಮೂಲ ಮೊತ್ತವನ್ನು ಖರ್ಚು ಮಾಡದೆ ಅದರಿಂದ ಬರುವ ಮತ್ತು ವಾರ್ಷಿಕ ಅನುದಾನಗಳನ್ನು ಮಾತ್ರ ಪೀಠದ ದೈನಂದಿನ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತದೆ. ಇದು ಪೀಠವು ದೀರ್ಘಕಾಲದವರೆಗೆ ಆರ್ಥಿಕವಾಗಿ ಸ್ವಾವಲಂಬಿಯಾಗಿರಲು ಸಹಾಯವಾಗಲಿದೆ. ಸಂಶೋಧನೆ ಮತ್ತು ಪ್ರಕಟಣೆ, ಪುಸ್ತಕ ಪ್ರಕಟಣೆ, ಸಂಶೋಧನಾ ಸಹಾಯಕರಿಗೆ ವಿದ್ಯಾರ್ಥಿ ವೇತನ, ಸಂಶೋಧನಾ ಭತ್ಯೆ ಅನುವಾದ ಕಾರ್ಯ ವಿಚಾರ ಸಂಕಿರಣ - ಕಾರ್ಯಾಗಾರ, ಸಾಂಸ್ಕೃತಿಕ ಉತ್ಸವಗಳು, ಉಪನ್ಯಾಸ ಮಾಲೆ, ಡಿಜಿಟಲ್ ಆರ್ಕೈವ್, ಗ್ರಂಥಾಲಯ, ಕ್ಷೇತ್ರ ಕಾರ್ಯ ಡಿಜಿಟಲ್ ಸಂಪನ್ಮೂಲ, ಜ್ಞಾನದ ಪಾಲುದಾರಿಕೆ ದೈನಂದಿನ ಕಚೇರಿ ನಿರ್ವಹಣೆ ಇತ್ಯಾದಿಗಳಿಗೆ ಈ ದತ್ತಿನಿಧಿಯ ಆದಾಯವನ್ನು ನಿಯಮಿತವಾಗಿ ಬಳಸಿಕೊಳ್ಳುವುದು ಚಿಂತನೆಯಾಗಿದೆ.
ನಿಧಿ ಕ್ರೋಢೀಕರಣ
ನಿಧಿ ಕ್ರೋಢೀಕರಣಕ್ಕಾಗಿ ಸರಕಾರದಿಂದ ಅನುದಾನ ಪಡೆಯುವುದು, ವೈಯಕ್ತಿಕವಾಗಿ ದಾನಿಗಳಿಂದ ಅಥವಾ ಸಂಸ್ಥೆಗಳ ಮೂಲಕ ದೇಣಿಗೆ ಪಡೆಯುವುದು, ಪ್ರಾಯೋಜಕತ್ವ ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಲು ಉದ್ದೇಶೀಸಲಾಗಿದೆ. ಸರಕಾರ, ವಿಶ್ವವಿದ್ಯಾನಿಲಯದ ನಿಯಮಾವಳಿಯಂತೆ ಹಣಕಾಸಿನ ಲೆಕ್ಕಪತ್ರವನ್ನು ಪಾರದರ್ಶಕವಾಗಿ ಇಡಲಾಗುವುದು.
ಮಹಾ ಪೋಷಕರಾಗಿ ರೂ. ೧ ಕೋಟಿ ಮತ್ತು ಅದಕ್ಕಿಂತ ಹೆಚ್ಚು, ಪೋಷಕರಾಗಿ ರೂ. ೫೦ ಲಕ್ಷದಿಂದ ೧ ಕೋಟಿ, ಸಹಪೋಷಕರಾಗಿ ರೂ. ೨೫ ಲಕ್ಷದಿಂದ ೫೦ ಲಕ್ಷ, ವಿಶೇಷ ದಾನಿಗಳಾಗಿ ರೂ. ೧೦ ರಿಂದ ೨೫ ಲಕ್ಷ, ದತ್ತಿದಾನಿಗಳಾಗಿ ರೂ ೧ ಲಕ್ಷದಿಂದ ೧೦ ಲಕ್ಷ, ಹಿತೈಷಿಗಳಿಂದ ರೂ. ೨೫ ಸಾವಿರದಿಂದ ರೂ. ೧ ಲಕ್ಷದಂತೆ ಹಣ ಕ್ರೋಢೀಕರಿಸುವ ಚಿಂತನೆ ಮಾಡಲಾಗಿದೆ.
ಅಧ್ಯಯನದ ಪ್ರಮುಖ ಕ್ಷೇತ್ರಗಳ (ಇತಿಹಾಸ ಮತ್ತು ಕುಲ ಶಾಸ್ತಿçÃಯ ಅಧ್ಯಯನ) ಭಾಷಾ - ಸಂರಕ್ಷಣೆ - ಸಂವರ್ಧನೆ, ಪರಂಪರೆ ಮತ್ತು ಸಾಂಪ್ರದಾಯಿಕ ಜೀವನ ಶೈಲಿ, ಅಧ್ಯಯನ, ಸಮುದಾಯದ ಸಬಲೀಕರಣ ಇತ್ಯಾದಿ) ಶೀರ್ಷಿಕೆಗಳಿಗೆ ದಾನಿಗಳ ಹೆಸರನ್ನು ಜೋಡಿಸಲಾಗುವುದು. ನಿರ್ದಿಷ್ಟ ಸಂಶೋಧನಾ ವಿದ್ಯಾರ್ಥಿ ವೇತನವನ್ನು ದಾನಿಗಳ ಹೆಸರಿನಲ್ಲಿ ಸೇರಿಸಲಾಗುವುದು. ವಿಶ್ವವಿದ್ಯಾನಿಲಯದ ಮುಖ್ಯ ಸಭಾಂಗಣದಲ್ಲಿ ದಾನಿಗಳ, ಕುಟುಂಬ ಅಥವಾ ಒಕ್ಕದ ಮೂಲಕ ಸಹಾಯ ಹಸ್ತ ನೀಡುವ ಕುಟುಂಬಗಳ ಹೆಸರನ್ನು ದಾಖಲಿಸುವ ಯೋಜನೆ ರೂಪಿಸಲಾಗಿದೆ. ಈ ಕುರಿತಾದ ಪ್ರಸ್ತಾವನೆಯನ್ನು ಸರಕಾರಕ್ಕೂ ಸಲ್ಲಿಸಲಾಗಿದೆ ಎಂದು ಪ್ರೊ. ಅಶೋಕ ಸಂಗಪ್ಪ ಆಲೂರ ಅವರು ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು, ಕೊಡವ ಅಕಾಡೆಮಿ, ಕೊಡವ ಸಮಾಜಗಳು, ಕೊಡವ ಸಹಪಾರಿವಾರಕ ಸಮಾಜಗಳು, ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆಗಳು, ಶೈಕ್ಷಣಿಕ ಮತ್ತು ಸಾಹಿತ್ಯ ಕ್ಷೇತ್ರದ ಗಣ್ಯರು, ನಿವೃತ್ತ ಸೇನಾಧಿಕಾರಿಗಳು, ಕ್ರೀಡಾ ಸಾಧಕರು, ಸಮುದಾಯದ ಹಾಗೂ ಇತರ ಪ್ರಮುಖರು ಕೊಡವ ಸಂಸ್ಕೃತಿ ಅಧ್ಯಯನ ಪೀಠದ ದತ್ತಿನಿಧಿ ಸ್ಥಾಪನೆಗೆ ಸಹಯೋಗ ಮತ್ತು ಬೆಂಬಲ ನೀಡಲು ಕೊಡಗು ವಿಶ್ವವಿದ್ಯಾನಿಲಯವು ಕೋರುವದಾಗಿ ಕುಲಪತಿಗಳು ತಿಳಿಸಿದ್ದಾರೆ.
ಉದ್ದೇಶ
ಜಿಲ್ಲೆಯಲ್ಲಿ ಕಂಡು ಬರುವ ಕೊಡವ ಸಂಸ್ಕೃತಿಯು ಭಾರತದ ಇತರ ಸಂಸ್ಕೃತಿಗಳಿಗಿAತ ಭಿನ್ನವಾಗಿರುವ ಸಾಂಸ್ಕೃತಿಕ ಆಸ್ಮಿತೆಯಾಗಿದ್ದು, ವಿಶಿಷ್ಟ ಸಂಪ್ರದಾಯ ಆಚರಣೆಗಳನ್ನು ಒಳಗೊಂಡಿರುವ ಪಶ್ಚಿಮ ಘಟ್ಟ ಪ್ರದೇಶದ ಸ್ಥಳೀಯ ಕೊಡವ ಸಮದಾಯಗಳ ಜೀವನ ಕ್ರಮವಾಗಿದೆ. ಕೊಡವ ಸಂಸ್ಕೃತಿಯು ಪ್ರಾಚೀನ ಪರಂಪರೆ, ಸಮರ ಕೌಶಲ್ಯ, ಕೃಷಿ, ಪ್ರಕೃತಿ ಮತ್ತು ಕುಟುಂಬ ನೆಲೆಗಟ್ಟಿನೊಂದಿಗೆ ಸಂಯೋಜನೆ ಹೊಂದಿರುವ ಸಾಮುದಾಯಕ ಜೀವನ ಪದ್ಧತಿಯಾಗಿದೆ ಮತ್ತು ಹೇರಳವಾದ ಮೌಖಿಕ ಸಾಹಿತ್ಯವನ್ನು ಹೊಂದಿರುವ ಶ್ರೀಮಂತ ಜಾನಪದ ಸಂಸ್ಕೃತಿಯಾಗಿದೆ. ಕೊಡವರು ಮತ್ತು ಇತರ ೨೧ ಕೊಡವ ಸಹ-ಸಾಂಸ್ಕೃತಿಕ ಪರಿವಾರಗಳು ಕೊಡಗು ಜಿಲ್ಲೆಯ ಮೂಲನಿವಾಸಿಗಳಾಗಿದ್ದು, ಸಮಾನ ಸಾಂಸ್ಕೃತಿಕ ಗುಣಧರ್ಮ, ಮೌಲ್ಯಗಳು ಮತ್ತು ಪಾರಿವಾರಿಕ ಸಮನ್ವಯತೆಯನ್ನು ಹೊಂದಿರುವುದು ಕಂಡುಬAದಿದೆ.
ಕೊಡವ ಸಂಸ್ಕೃತಿಯ ವೈವಿಧ್ಯತೆಗಳು, ಸಾಮಾಜಿಕ ಸ್ಥಿತಿಗತಿಗಳು, ಪಾರಂಪಾರಿಕ ನೆಲೆಗಟ್ಟು, ನಾಗರಿಕತೆ ಮತ್ತು ಜೀವನಪದ್ಧತಿಗಳ ವಿಕಾಸದ ಸಂಕೀರ್ಣತೆ ಇತ್ಯಾದಿಗಳನ್ನು ಅರಿಯುವ ನಿಟ್ಟಿನಲ್ಲಿ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಸಮಗ್ರ ಅಧ್ಯಯನವನ್ನು ಕುಲಶಾಸ್ತಿçÃಯ, ಪ್ರಾಥಮಿಕ ಸಂಶೋಧನೆಯ ಮೂಲಕ ಕೈಗೊಳ್ಳುವ ಅಗತ್ಯವಿದೆ. ಅಧ್ಯಯನದ ಪ್ರಮುಖ ಭಾಗವಾಗಿ ಪೂರ್ವೋತಿಹಾಸಿಕ ಮತ್ತು ಐತಿಹಾಸಿಕ ಅಧ್ಯಯನ, ಶಾಸನಗಳು ಮತ್ತು ಸ್ಮಾರಕಗಳು, ಸಮಾಜಶಾಸ್ತç-ಮಾನವಶಾಸ್ತç-ಪುರಾತತ್ವ ಮೂಲಗಳು, ವಿವಿಧ ಕೊಡವ ಸಹ-ಸಾಂಸ್ಕೃತಿಕ ಪರಿವಾರಗಳ ಕುಲಶಾಸ್ತç, ಪಾರಿವಾರಿಕ ಜಾನಪದ ಸಂಪ್ರದಾಯಗಳು, ಧಾರ್ಮಿಕ ನೆಲೆಗಟ್ಟು ಮತ್ತು ಸ್ಥಿತ್ಯಂತರ, ಬದಲಾದ ಕಾಲಘಟ್ಟದಲ್ಲಿ ಭಾಷೆ, ಸಂಸ್ಕೃತಿ, ಆರಾಧನೆ, ಆಚರಣೆಗಳ ಸ್ಥಿತ್ಯಂತರ, ಪ್ರಾದೇಶಿಕ ಪರಿಸರ ಸಂಪತ್ತು ಮತ್ತು ಜೀವವೈವಿಧ್ಯ, ಜನಜೀವನ, ಜೀವನೋಪಾಯ, ಆರ್ಥಿಕತೆ ಮತ್ತು ಅಭಿವೃದ್ಧಿಯ ಸವಾಲುಗಳು ಇತ್ಯಾದಿಗಳ ಆಮೂಲಾಗ್ರ ಅಧ್ಯಯನದ ಅಗತ್ಯವಿದೆ. ಅಲ್ಲದೆ, ಪ್ರಸಕ್ತ ಕಾಲಘಟ್ಟದಲ್ಲಿ ಕೊಡವ ಭಾಷೆ, ಸಂಸ್ಕೃತಿಯ ಅಳಿಯುಳಿವಿನ ಆತಂಕವನ್ನು ಪರಿಹರಿಸುವ ವಿಧಿವಿಧಾನಗಳನ್ನು ಸ್ಥಾಪಿಸುವ ಅಗತ್ಯ ಕೂಡ ಇದೆ ಎಂದು ಅಭಿಪ್ರಾಯಿಸಲಾಗಿದೆ.
ಕೊಡವ ಸಂಸ್ಕೃತಿಯನ್ನು ದಾಖಲಿಸುವ ಮತ್ತು ಸಂರಕ್ಷಿಸುವ ಪ್ರಯತ್ನಗಳ ಹೊರತಾಗಿಯೂ, ಹಲವಾರು ವಿಚಾರಗಳಲ್ಲಿ ಮೂಲ ಮತ್ತು ಪೂರಕ ಸಂಶೋಧನೆಗಳ ಕೊರತೆಯಿರುವ ಕಾರಣ ಮತ್ತು ಸದರಿ ಕಾರ್ಯದಲ್ಲಿ ಅನಿರ್ದಿಷ್ಟ ವಿಳಂಬವಾಗಿರುವ ಕಾರಣದಿಂದ ಅಧ್ಯಯನಕ್ಕೆ ಮೂಲ ಪುರಾವೆಗಳ ಅಲಭ್ಯತೆ ಮತ್ತು ಪೂರಕ ಕಾಲ ಗತಿಸಿಹೋಗುವ ಆತಂಕವಿರುವ ಹಿನ್ನಲೆಯಲ್ಲಿ ಸಮರೋಪಾದಿಯಲ್ಲಿ ಅಧ್ಯಯನ ಮತ್ತು ಸಂಶೋಧನೆಯನ್ನು ಆರಂಭಿಸಬೇಕಾದ ಅಗತ್ಯತೆಯನ್ನು ಪರಿಗಣಿಸಿರುವ ಕೊಡಗು ವಿಶ್ವವಿದ್ಯಾಲಯವು, ಈ ಪ್ರದೇಶದ ಮೇಲೆ ಮಾತ್ರ ಕಾರ್ಯವ್ಯಾಪ್ತಿಯನ್ನು ಹೊಂದಿರುವುದರಿAದ, ಪ್ರಸ್ತಾಪಿತ ಅಧ್ಯಯನದ ಉದ್ದೇಶಕ್ಕಾಗಿ ಸರ್ಕಾರ ಮತ್ತು ಕೊಡಗಿನ ಪ್ರಾಜ್ಞರು ಮತ್ತು ಅಭಿಮಾನಿಗಳ ಸಹಯೋಗದೊಂದಿಗೆ ವಿಶ್ವವಿದ್ಯಾಲಯದಲ್ಲಿ ‘ಕೊಡವ ಸಂಸ್ಕೃತಿ ಅಧ್ಯಯನ ಪೀಠ' ಎಂಬ ದತ್ತಿ ಪೀಠವನ್ನು ಸ್ಥಾಪಿಸಲು ಪ್ರಸ್ತಾಪಿಸಿದೆ. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ ೨೦೦೦ ರ ಅಡಿಯಲ್ಲಿ ಪೀಠಕ್ಕೆ ಶಾಸನಬದ್ಧ ಆಧಾರವನ್ನು ನೀಡುವ ಸಲುವಾಗಿ ಪೂರಕ ಅಧಿನಿಯಮವನ್ನು ಸಿದ್ಧಪಡಿಸಿ ಸರಕಾರದ ಅನುಮೋದನೆಗಾಗಿ ಸೂಕ್ತ ಪ್ರಾಧಿಕಾರಕ್ಕೆ ಕಳುಹಿಸಲಾಗಿದೆ.