ಗೋಣಿಕೊಪ್ಪಲು, ಏ. ೧೯: ಕುಟ್ಟ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಯೂತ್ ಫ್ರೆಂಡ್ಸ್ ವತಿಯಿಂದ ದಿ. ಮುಕ್ಕಾಟಿರ ಶಿವು ಮಾದಪ್ಪ ಜ್ಞಾಪಕಾರ್ಥ ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿಗೆ ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಶಾಸಕ ಎ.ಎಸ್. ಪೊನ್ನಣ್ಣ ಅವರು, ಶಿವು ಮಾದಪ್ಪ ಅವರ ಜನಸೇವೆ, ರಾಜಕೀಯ ಇಚ್ಛಾಶಕ್ತಿ, ಅನುಭವ ಮಾದರಿಯಾಗಿದೆ. ಸಮಾಜಮುಖಿಯಾಗಿ ತೊಡಗಿಸಿಕೊಂಡಿದ್ದ ಅವರು ಯುವ ರಾಜಕಾರಣಿಗಳಿಗೆ ಸ್ಫೂರ್ತಿದಾಯಕವಾಗಿದೆ.

ಅವರು ತಮ್ಮ ಕೆಲಸಗಳ ಮೂಲಕ ಇಂದಿಗೂ ಜೀವಂತರಾಗಿದ್ದಾರೆ ಎಂದ ಅವರು, ಅವರ ಹೆಸರಿನಲ್ಲಿ ಕ್ರಿಕೆಟ್ ಆಯೋಜಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಿವು ಮಾದಪ್ಪ ಅವರ ಪತ್ನಿ ಮುಕ್ಕಾಟಿರ ಅರ್ಚನ ಮಾದಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲ್ಲಕು ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪಲ್ವಿನ್ ಪೂಣಚ್ಚ, ಶ್ರೀಮಂಗಲ ಗ್ರಾ.ಪಂ. ಮಾಜಿ ಸದಸ್ಯ ಮಾದೀರ ಸುಧಿ ಪೊನ್ನಪ್ಪ, ಕುಟ್ಟ ಗ್ರಾ.ಪಂ. ಮಾಜಿ ಅಧ್ಯಕ್ಷ ಹೆಚ್.ವೈ. ರಾಮಕೃಷ್ಣ, ಯೂತ್ ಫ್ರೆಂಡ್ಸ್ನ ಫರ್ದೀನ್, ಪ್ರಮುಖರಾದ ತೀತಿರ ಮಂದಣ್ಣ, ಪೆಮ್ಮಂಡ ರಾಜ, ಬೋಸ್ ಮಾದಪ್ಪ, ಮಲ್ಚಿರ ಅಪ್ಪಣ್ಣ, ಬಾಚರಣಿಯಂಡ ಅಯ್ಯಪ್ಪ, ಕೊಟ್ಟಂಗಡ ಅರುಣ್, ಅಶ್ರಫ್, ಮುಸ್ತಫಾ, ಇರ್ಲಾಡಿ ರಮೇಶ್, ಟಿ.ಆರ್.ಸುರೇಶ್, ತೀತಿರ ಗಿರೀಶ್, ಗೋಪಾಲಕೃಷ್ಣ, ಆಲೆಮಾಡ ಸೋಮಣ್ಣ, ಮಚ್ಚಮಾಡ ಸುರೇಶ್, ಎಂ.ಕೆ.ಮAದಣ್ಣ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಹೆಚ್.ವೈ. ರಾಮಕೃಷ್ಣ ಸ್ವಾಗತಿಸಿ, ಮಾದೀರ ಸುಧಿ ಪೊನ್ನಪ್ಪ ವಂದಿಸಿದರು.