ಚೆಯ್ಯಂಡಾಣೆ, ಏ. ೧೯: ಕುಂದಾಪುರದಿAದ ಎಮ್ಮೆಮಾಡು ದರ್ಗಾಕ್ಕೆ ಬಂದಿದ್ದ ಪ್ರವಾಸಿಗನ ಮೃತದೇಹ ಎಮ್ಮೆಮಾಡು ಗ್ರಾಮದ ಕಾವೇರಿ ನದಿ ದಡದಲ್ಲಿ ಪತ್ತೆಯಾಗಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಾವಿನಕಟ್ಟೆ ಕುPðÀಂಜೆ ಗ್ರಾಮದ ನಿವಾಸಿ ಹಸೈನಾರ್ ಸಾಹೇಬ್ (೬೫) ಮೃತ ದುರ್ದೈವಿ.
ಹಸೈನಾರ್ ತಾ. ೧೩ ರಂದು ಕುಂದಾಪುರದಿAದ ಸಂಬAಧಿಕರೊAದಿಗೆ ದರ್ಗಾ ಪ್ರವಾಸಕ್ಕೆ ಬಂದಿದ್ದು, ತಾ. ೧೫ ರಂದು ರಾತ್ರಿ ೧೧.೩೦ಗಂಟೆಗೆ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಎಮ್ಮೆಮಾಡು ಗ್ರಾಮಕ್ಕೆ ತಲುಪಿದ್ದರು. ಎಮ್ಮೆಮಾಡುವಿನಲ್ಲಿ ರೂಮ್ ಸಿಗದ ಕಾರಣ ಮಸೀದಿಯ ಆವರಣದಲ್ಲಿ ಹಸೈನಾರ್ ಮಲಗಿದ್ದರು. ರಾತ್ರಿ ಮಲಗಿದ್ದ ಜಾಗದಿಂದ ೪ಐದನೇ ಪುಟಕ್ಕೆ
ಹಸೈನಾರ್ ನಾಪತ್ತೆಯಾಗಿದ್ದರು. ಹುಡುಕಾಡಿದರೂ ಸುಳಿವು ಸಿಗದ ಹಿನ್ನೆಲೆ ಮಸೀದಿಯ ಸಿಸಿ ಕ್ಯಾಮರಾವನ್ನು ಪರಿಶೀಲಿಸಿದಾಗ ಮಸೀದಿಯ ಮುಖ್ಯದ್ವಾರದ ಮೂಲಕ ಹಸೈನಾರ್ ಹೊರ ತೆರಳಿರುವುದು ಕಂಡು ಬಂದಿದೆ. ತಾ. ೧೬ ರಂದು ಸಂಬAಧಿಕರು ನಾಪೋಕ್ಲು ಠಾಣೆಗೆ ಹಸೈನಾರ್ ಅವರು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ ಪತ್ತೆಗೆ ಶೋಧ ಕಾರ್ಯ ಕೈಗೊಂಡಿದ್ದರು.
ತಾ. ೧೯ ರಂದು ಎಮ್ಮೆಮಾಡು ಗ್ರಾಮಸ್ಥರು ಹಾಗೂ ಪೊಲೀಸರು ಶೋಧ ನಡೆಸಿದ ಸಂದರ್ಭ ಎಮ್ಮೆಮಾಡು ಗ್ರಾಮದ ಕಾವೇರಿ ನದಿ ದಡದ ಪೊದೆಯಲ್ಲಿ ಹಸೈನಾರ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆೆ ಸಂಬAಧ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. - ಅಶ್ರಫ್