ಸುಂಟಿಕೊಪ್ಪ, ಏ. ೧೯: ಕೊಡಗರಹಳ್ಳಿಯ ಕುಂದೂರುಮೊಟ್ಟೆ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ ಶ್ರೀ ಮಹಾವಿಷ್ಣು, ಶ್ರೀ ಚಾಮುಂಡೇಶ್ವರಿ, ರಕ್ತೇಶ್ವರಿ ಪರಿವಾರ ದೇವರುಗಳ ೪೮ನೇ ವಾರ್ಷಿಕ ಮಹೋತ್ಸವ ತಾ. ೨೦ ರಿಂದ ೨೨ರವರೆಗೆ ನಡೆಯಲಿದೆ.
ತಾ. ೨೦ ರಂದು (ಇಂದು) ಪೂರ್ವಾಹ್ನ ಗಣಪತಿ ಹೋಮ ಮತ್ತು ಕೊಡಿ ಏರಿಸುವುದರೊಂದಿಗೆ ಪೂಜಾ ಕಾರ್ಯಕ್ರಮಗಳು ಚಾಲನೆ ನೀಡಲಾಗುವುದು. ಸಂಜೆ ೭ ಗಂಟೆಯಿAದ ದೀಪರಾಧÀನೆ, ಏಳು ಸುತ್ತಿನ ಪ್ರದಕ್ಷಿಣೆ ಹಾಗೂ ಚಂಡೆ ಮೇಳ ಜರುಗಲಿದೆ.
ತಾ. ೨೧ ರಂದು ಶ್ರೀ ಚಾಮುಂಡೇಶ್ವರಿ ದೇವಿಯ ಅಭಿಷೇಕ ಪೂಜೆ, ರಾತ್ರಿಯಿಂದ ವಿವಿಧ ದೈವಗಳ ಕೋಲ ನಡೆಯಲಿದೆ. ತಾ. ೨೨ ರಂದು ಪೂರ್ವಾಹ್ನ ಅಜ್ಜಪ್ಪ ಕೋಲ, ವಿಷ್ಣುಮೂರ್ತಿ ಕೋಲ, ರಕ್ತೇಶ್ವರಿ ಹಾಗೂ ಚಾಮುಂಡೇಶ್ವರಿ ಕೋಲದೊಂದಿಗೆ ರಾತ್ರಿ ೮ ಗಂಟೆಗೆ ಶ್ರೀದೇವಿ ನೇವೈದ್ಯದೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ ಎಂದು ಶ್ರೀ ಕುಂದೂರುಮೊಟ್ಟೆ ಚಾಮುಂಡೇಶ್ವರಿ ದೇವಾಲಯ ಸಮಿತಿ ತಿಳಿಸಿದೆ.