ನಾಪೋಕ್ಲು. ಏ. ೧೯: ಇಲ್ಲಿಗೆ ಸಮೀಪದ ಇತಿಹಾಸ ಪ್ರಸಿದ್ಧ ಬಲಮುರಿ ಈಶ್ವರ ದೇವಸ್ಥಾನದ ಅರ್ಚಕರಿಗೆ ದಾನಿಗಳು ನೂತನ ಗೃಹ ನಿರ್ಮಿಸಿ ಮನೆಯನ್ನು ದೇವಸ್ಥಾನದ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು.

ಬಲಮುರಿ ಗ್ರಾಮದ ನಿವೃತ್ತ ಮೇಜರ್ ಬೊಳ್ಳಚೆಟ್ಟಿರ ಅಪ್ಪಚ್ಚು ಹಾಗೂ ಗ್ರಾಮಸ್ಥರ ನೆರವಿನಿಂದ ನೂತನ ಗೃಹ ನಿರ್ಮಾಣಗೊಂಡಿದ್ದು, ಅರ್ಚಕರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಬೊಳ್ಳಚೆಟ್ಟಿರ ಸುರೇಶ್ ಅವರು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಕೊಂಗೀರAಡ ಸಾಧು ತಮ್ಮಯ್ಯ ಅವರಿಗೆ ಮನೆಯನ್ನು ಹಸ್ತಾಂತರಿಸಿದರು.

ಏಪ್ರಿಲ್ ೨೯ ರಂದು ಸಭೆ ನಡೆಸಿ ನೂತನ ಮನೆಯನ್ನು ಅರ್ಚಕರಿಗೆ ಹಸ್ತಾಂತರಿಸಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ. ಈ ಸಂದರ್ಭ ಬಲಮುರಿ ಈಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.