ಮಡಿಕೇರಿ, ಏ. ೧೯: ಕೊಡಗು ಗೌಡ ವಿದ್ಯಾ ಸಂಘದ ಹಳೆಯ ಕಟ್ಟಡವನ್ನು ದಾನಿಗಳ ನೆರವಿನಿಂದ ಸುಮಾರು ೪ ಕೋಟಿ ರೂ.ವೆಚ್ಚದಲ್ಲಿ ಹಿಂದಿನ ವಿನ್ಯಾಸದಂತೆ ಪುನರ್ ನಿರ್ಮಾಣ ಮಾಡಲಾಗುತ್ತಿದೆ.
ವಿದ್ಯಾ ಸಂಘದ ಪುನರ್ ನಿರ್ಮಾಣ ಕಟ್ಟಡದ ಸವಿನೆನಪಿಗಾಗಿ ‘ವಿಶೇಷ ಸಂಚಿಕೆ’ಯೊAದನ್ನು ಹೊರತರಲಾಗುತ್ತಿದೆ. ಈ ವಿಶೇಷ ಸಂಚಿಕೆಗೆ ಕನ್ನಡ ಮತ್ತು ಅರೆಭಾಷೆಯಲ್ಲಿ ಲೇಖಕರಿಂದ ವಿವಿಧ ಲೇಖನ, ಕವನ, ಪ್ರಬಂಧಗಳನ್ನು ಆಹ್ವಾನಿಸಲಾಗಿದೆ.
ಲೇಖಕರು ತಮ್ಮ ಲೇಖನ ವನ್ನು ಬಿಳಿ ಹಾಳೆಯ ಒಂದೇ ಮಗ್ಗುಲಲ್ಲಿ ಬರೆದು ಅಥವಾ ಮುದ್ರಿಸಿ ಮೇ, ೧೫ ರೊಳಗೆ ಕೊಡಗು ಗೌಡ ವಿದ್ಯಾ ಸಂಘ(ರಿ) ಗುಡ್ಡೆಮನೆ ಅಪ್ಪಯ್ಯ ಗೌಡ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ-೫೭೧೨೦೧ ಈ ವಿಳಾಸಕ್ಕೆ ಭಾವಚಿತ್ರದೊಂದಿಗೆ ಅಂಚೆ ಮೂಲಕ ಅಥವಾ ಖುದ್ದಾಗಿ ನೀಡಲು ಕೋರಿದೆ. ಬರಹಗಳು ಈವರೆಗೆ ಎಲ್ಲಿಯೂ ಪ್ರಕಟವಾಗಿರಬಾರದು, ನಕಲು ಮಾಡಬಾರದು ಎಂದು ಸಂಚಿಕೆಯ ಸಂಪಾದಕ ಸೂದನ ಎಸ್. ಈರಪ್ಪ ತಿಳಿಸಿದ್ದಾರೆ.