ಸೋಮವಾರಪೇಟೆ, ಏ. ೧೯: ಇಲ್ಲಿನ ಪೊಲೀಸ್ ಠಾಣೆಗೆ ಪ್ರಥಮ ಮಹಿಳಾ ಸಬ್ ಇನ್ಸ್ಪೆಕ್ಟರ್ ಆಗಿ ಯು. ಖತೀಜಾ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ಈ ಹಿಂದೆ ಸಬ್ ಇನ್ಸ್ಪೆಕ್ಟರ್ ಅಧೀನದಲ್ಲಿದ್ದ ಪೊಲೀಸ್ ಠಾಣೆಗಳನ್ನು ಉನ್ನತೀಕರಣಗೊಳಿಸಿ ಪೊಲೀಸ್ ಇನ್ಸ್ಪೆಕ್ಟರ್ ಠಾಣೆಗಳನ್ನಾಗಿ ಮೇಲ್ದರ್ಜೆಗೇರಿಸಿದ ನಂತರ ಕಾನೂನು ಸುವ್ಯವಸ್ಥೆ ವಿಭಾಗದ ಪ್ರಥಮ ಮಹಿಳಾ ಸಬ್ ಇನ್ಸ್ಪೆಕ್ಟರ್ ಆಗಿ ಖತೀಜಾ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಕಳೆದ ತಾ. ೬ರಂದು ಸೋಮವಾರಪೇಟೆ ಠಾಣೆಗೆ ನಿಯೋಜನೆಯಾದ ಖತೀಜಾ ಅವರು, ಕಳೆದ ೩೦ ವರ್ಷಗಳ ಹಿಂದೆ ಇಲಾಖೆಗೆ ಸೇರ್ಪಡೆಗೊಂಡವರು. ೨೦೧೬ ರಲ್ಲಿ ಶನಿವಾರಸಂತೆ, ೨೦೧೭-೨೦೨೦ ರವರೆಗೆ ಕುಶಾಲನಗರ, ೨೦೨೧ ರಲ್ಲಿ ಸೋಮವಾರಪೇಟೆ ಠಾಣೆಯಲ್ಲಿ ಎಎಸ್‌ಐ ಆಗಿದ್ದ ಇವರು, ನಂತರ ೨೦೨೨ರಲ್ಲಿ ಸಕಲೇಶಪುರ ಹಾಗೂ ಯಸಳೂರು ಠಾಣೆಗಳಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇವರು ಮೂಲತಃ ಮಾದಾಪುರದ ನಿವಾಸಿಯಾಗಿದ್ದು, ಪ್ರಸ್ತುತ ಕಲ್ಕಂದೂರು ಗ್ರಾಮದಲ್ಲಿ ನೆಲೆಸಿದ್ದಾರೆ.