ನಾಪೋಕ್ಲು, ಏ. ೧೯: ಇಲ್ಲಿಗೆ ಸಮೀಪದ ಕೊಳಕೇರಿ ಗ್ರಾಮದ ಐತಿಹಾಸಿಕ ಮೂಟೇರಿ ಶ್ರೀ ಉಮಾಮಹೇಶ್ವರಿ ದೇವರ ವಾರ್ಷಿಕ ಉತ್ಸವ ನಡೆಯಿತು.
ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ನಡೆದುಬಂದ ಶ್ರೀ ಉಮಾಮಹೇಶ್ವರಿ ದೇವರ ಹಬ್ಬವು ಪಟ್ಟಣಿ ಆಚರಣೆಯೊಂದಿಗೆ ಜರುಗಿತು. ಪಟ್ಟಣಿ ಹಬ್ಬದ ವಿಶೇಷ ಪೂಜಾ ಕಾರ್ಯಗಳು ಜರುಗಿ ದೇವರ ದರ್ಶನ ನಂತರ ಎತ್ತುಪೋರಾಟ ವಿಶೇಷ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, ಗ್ರಾಮಸ್ಥರಿಂದ ಬೊಳಕಾಟ್, ದೇವರ ದರ್ಶನ ನೃತ್ಯ ಮಹೋತ್ಸವ ನೆರವೇರಿತು. ಭಕ್ತಾದಿಗಳಿಗೆ ಅನ್ನದಾನ, ಎತ್ತುಕಾಡು ಹೊಳೆಯಲ್ಲಿ ಭಗವತಿ ದೇವರ ಅವಭೃಸ್ನಾನದ ಬಳಿಕ ಚಂಡೆ ಮೇಳಗಳೊಂದಿಗೆ ದೇವಾಲಯಕ್ಕೆ ಹಿಂತಿರುಗಿ ನೃತ್ಯೋತ್ಸವದೊಂದಿಗೆ ಹಬ್ಬವು ಸಂಪನ್ನಗೊAಡಿತು.
ಉತ್ಸವದ ಧಾರ್ಮಿಕ ವಿಧಿ ವಿಧಾನವನ್ನು ಮುಖ್ಯ ಅರ್ಚಕ ತಂತ್ರಿ ರಮೇಶ್ ಭಟ್, ಸುರೇಶ್ ಹಾಗೂ ಕುಟುಂಬದ ಸದಸ್ಯರು ಹಾಗೂ ದೇವರ ನೃತ್ಯ ಮಹೋತ್ಸವವನ್ನು ಜಯಚಂದ್ರ ನೆರವೇರಿಸಿದರು. ಶನಿವಾರ ಶುದ್ಧ ಕಲಶದೊಂದಿಗೆ ವಾರ್ಷಿಕ ಉತ್ಸವಕ್ಕೆ ತೆರೆ ಎಳೆಯಲಾಯಿತು. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಆಪ್ಪಚೀರ ರಮ್ಮಿ ನಾಣಯ್ಯ, ಕಾರ್ಯದರ್ಶಿ ಪುಲ್ಲೇರ ವಿಠಲ. ಸದಸ್ಯರು, ದೇವಾಲಯದ ದೇವತಕ್ಕರಾದ ವಾಂಜAಡ ಬೋಪಯ್ಯ ಸೇರಿದಂತೆ ಇತರ ತಕ್ಕಮುಖ್ಯಸ್ಥರು ಉಪಸ್ಥಿತರಿದ್ದರು.