ಮಡಿಕೇರಿ, ಏ. ೧೯: ಜನಾಂಗದ ಬಗ್ಗೆ ಅಭಿಮಾನ ಹೊಂದಿದ್ದಲ್ಲಿ ಮಾತ್ರ ಜನಾಂಗದ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಹೊಳೆನರಸೀಪುರ ಚೆಸ್ಕಾಂ ಅಭಿಯಂತರ ಕೆ.ಕೆ. ಮೋಹನ್ ಕುಮಾರ್ ಪ್ರತಿಪಾದಿಸಿದರು. ಕಣ್ಣಂಗಾಲ ಒಕ್ಕಲಿಗರ ಸಂಘದಿAದ ಯುಗಾದಿ ಪ್ರಯುಕ್ತ ಅಮ್ಮತ್ತಿ ಒಂಟಿಯAಗಡಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಒಕ್ಕಲಿಗರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಒಕ್ಕಲಿಗರು ಎಲ್ಲಾ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ. ನಮ್ಮೊಳಗೆ ನಾನು ಒಕ್ಕಲಿಗ ಎಂಬ ಭಾವನೆ ಮೂಡಿದಲ್ಲಿ ಮಾತ್ರ ಜನಾಂಗದ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಕಣ್ಣಂಗಾಲ ಒಕ್ಕಲಿಗರ ಸಂಘವು ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಯಾವುದೇ ಸಂಘಗಳು ಗಟ್ಟಿಯಾಗಿ ನಿಲ್ಲಬೇಕೆಂದರೆ ನಮ್ಮಲ್ಲಿ ಒಗ್ಗಟ್ಟಿರಬೇಕು. ಯಾವುದೇ ಭಿನ್ನಾಭಿಪ್ರಾಯ ಬಾರದಂತೆ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ವೀರಾಜಪೇಟೆ ತಾಲೂಕು ಸಂಘದ ವ್ಯವಸ್ಥಾಪಕಿ ಕೆ.ಆರ್ ಸ್ವರೂಪ ಮಾತನಾಡಿ, ಗೆಲುವು-ಸೋಲು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುವ ಶಕ್ತಿ ಕ್ರೀಡಾಪಟುಗಳಲ್ಲಿ ಅತ್ಯವಶ್ಯಕ. ಕ್ರೀಡಾ ಮನೋಭಾವದಿಂದ ಎಲ್ಲರೂ ಪಾಲ್ಗೊಂಡು, ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತಾನಾಡಿದ ಸಂಘದ ಅಧ್ಯಕ್ಷ ಕೆ.ಎಸ್ ಗೋಪಾಲಕೃಷ್ಣ ಅವರು, ಯುಗಾದಿ ಹಬ್ಬದ ಪ್ರಯುಕ್ತ ಕಳೆದ ಎರಡು ವರ್ಷಗಳಿಂದ ಒಕ್ಕಲಿಗ ಸಮುದಾಯದವರಿಗಾಗಿ ಕ್ರೀಡಾಕೂಟಗಳನ್ನು ನಡೆಸಲು ಸಾಧ್ಯವಾಗಲಿಲ್ಲ. ಆದರೆ ಈ ವರ್ಷ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ಕ್ರೀಡಾಕೂಟವನ್ನು ಆಯೋಜಿಸಿದ್ದೇವೆ. ಒಕ್ಕಲಿಗ ಸಮುದಾಯ ಒಗ್ಗಟ್ಟು ಮತ್ತಷ್ಟು ಗಟ್ಟಿಯಾಗಬೇಕೆಂದರು.

ಪುರುಷರಿಗೆ ವಾಲಿಬಾಲ್, ಮಹಿಳೆಯರಿಗೆ ಥ್ರೋಬಾಲ್, ಪಾಸಿಂಗ್ ದಿ ಬಾಲ್, ಬಾಲಕ ಮತ್ತು ಬಾಲಕಿಯರಿಗೆ ನೂರು ಮೀಟರ್ ಓಟ ಹಾಗೂ ಮಕ್ಕಳಿಗೆ ಕಾಳು ಹೆಕ್ಕುವ ಸ್ಪರ್ಧೆ ನಡೆಯಿತು.

ವೇದಿಕೆಯಲ್ಲಿ, ಉಪಾಧ್ಯಕ್ಷ ವಿ.ಜಿ. ಪಾರ್ಥ, ಖಜಾಂಜಿ ವಿ.ಬಿ. ಮಧು, ನಿರ್ದೇಶಕರಾದ ಕೆ.ಪಿ. ಅಜಿತ್, ವಿ.ಪಿ. ಜೀವನ್ ಕುಮಾರ್ ವಿ.ಟಿ ರಾಕೇಶ್, ವಿ.ಸಿ. ಕಿರಣ್, ವಿ.ಕೆ. ರಂಜು, ಸೌಮ್ಯ ಸಂಪತ್, ನಮೃತ ಗೌರಿಶಂಕರ್, ವಿ.ಎಂ. ದಿನೇಶ್ ಇದ್ದರು. ಸಮೃದ್ಧಿ ಹಾಗೂ ಹಿಮಾನ್ಸಿ ಪ್ರಾರ್ಥಿಸಿ, ಕಾರ್ಯದರ್ಶಿ ವಿ.ವಿ ಮಹಾಲಕ್ಷಿö್ಮ ಸ್ವಾಗತಿಸಿ, ಸಾಮಾಜಿಕ ಜಾಲತಾಣದ ಸಂಯೋಜಕಿ ಪಂಚಮಿ ಅಭಿಷೇಕ್ ವಂದಿಸಿದರು.