ಮಡಿಕೇರಿ, ಏ. ೧೯: ಮರಗೋಡುವಿನ ಗೌಡ ಇವಿನಿಂಗ್ ಸ್ಟಾರ್ ವತಿಯಿಂದ ಭಾರತಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಗೌಡ ಜನಾಂಗದ ನಡುವಿನ ಗೌಡ ಕುಟುಂಬ ಕಲರವ ಕ್ರಿಕೆಟ್ ಪಂದ್ಯಾವಳಿಯಲ್ಲಿAದು ಚೀಯಪ್ಪನ ತಂಡ ಪ್ರಿ ಕ್ವಾರ್ಟರ್‌ಗೆ ಪ್ರವೇಶಿಸಿದೆ.

ಇಟ್ಟಣಿಕೆ ವಿರುದ್ಧ ಬಾಕಿಲನ ೯ ವಿಕೆಟ್‌ಗಳ ಜಯ ಸಾಧಿಸಿತು. ಇಟ್ಟಣಿಕೆ ನಿಗದಿತ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೪೯ ರನ್ ಪೇರಿಸಿತು. ಗುರಿ ಬೆನ್ನತ್ತಿದ ಬಾಕಿಲನ ೪.೧ ಓವರ್‌ಗಳಲ್ಲಿಯೇ ೧ ವಿಕೆಟ್ ಕಳೆದುಕೊಂಡು ೪೯ ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಕುಂಬನ ವಿರುದ್ಧ ಚೀಯಪ್ಪನ ತಂಡ ಭರ್ಜರಿ ೫೭ ರನ್ ಅಂತರದ ಜಯ ಪಡೆಯಿತು. ಮೊದಲು ಬ್ಯಾಟ್ ಮಾಡಿದ ಚೀಯಪ್ಪನ ೩ ವಿಕೆಟ್ ನಷ್ಟಕ್ಕೆ ಭರ್ಜರಿ ೮೯ ರನ್ ಕಲೆಹಾಕಿತು. ಗುರಿ ಬೆನ್ನತ್ತಿದ ಕುಂಬನ ೬ ವಿಕೆಟ್ ನಷ್ಟಕ್ಕೆ ಕೇವಲ ೩೨ ರನ್‌ಗಳನ್ನಷ್ಟೆ ಗಳಿಸಲು ಶಕ್ತವಾಯಿತು. ಚಿಯ್ಯಪ್ಪನ ಪರ ಚರಣ್ ಮಿಥುನ್‌ಮಡಿಕೇರಿ, ಏ.೧೯: ಚೆರಿಯಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೇನಂಡ ಕಪ್ ಹಾಕಿ ನಮ್ಮೆಯಲ್ಲಿಂದು ೫ ಪಂದ್ಯಗಳಿಗೆ ಮಳೆ ಅಡ್ಡಿಯಾಗಿದ್ದು, ಈ ಪಂದ್ಯಗಳನ್ನು ತಾ.೨೧ಕ್ಕೆ ಮುಂದೂಡಲಾಗಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.

ಇಂದು ನಡೆದ ಇತರ ಪಂದ್ಯಗಳ ಫಲಿತಾಂಶ

ಚAದುರ ತಂಡವು ಮಚ್ಚಮಾಡ ತಂಡವನ್ನು ೧-೦ ಗೋಲುಗಳಿಂದ ಮಣಿಸಿತು. ಅಪ್ಪನೆರವಂಡ ತಂಡವು ಚಿಂಡಮಾಡ ತಂಡದ ವಿರುದ್ಧ ೩-೨ ಗೋಲುಗಳಿಂದ ಗೆಲುವು ಸಾಧಿಸಿತು. ಕರೋಟಿರ ತಂಡವು ನಾಯಕಂಡ ತಂಡದ ವಿರುದ್ಧ ಟೈ ಬ್ರೇಕರ್‌ನಲ್ಲಿ ೫-೪ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ನಿಗದಿತ ಪಂದ್ಯದಲ್ಲಿ ೧-೧ ಸಮಬಲವಾಗಿತ್ತು ಮುಕ್ಕಾಟಿರ(ಪುಲಿಕೋಟ್) ತಂಡವು ಶಾಂತೆಯAಡ ತಂಡವನ್ನು ೪-೧ ಗೋಲುಗಳಿಂದ ಮಣಿಸಿತು. ಮುಕ್ಕಾಟಿರ ಪರ ಪೂಣಚ್ಚ ಹ್ಯಾಟ್ರಿಕ್ ಬಾರಿಸಿದರು.

ಬಿದ್ದಾಟಂಡ ತಂಡವು ಮಲ್ಲಾಜಿರ ತಂಡವನ್ನು ೪-೦ ಅಂತರದಲ್ಲಿ ಸೋಲಿಸಿತು. ಮಣವಟ್ಟಿರ ತಂಡವು ಅಲ್ಲಪಂಡ ತಂಡದ ವಿರುದ್ಧ ೩-೧ ಗೋಲುಗಳಿಂದ ಗೆಲುವು ಸಾಧಿಸಿತು. ನಾಪಂಡ ತಂಡವು ಚೌರಿರ(ಹೊದವಾಡ) ತಂಡದ ವಿರುದ್ಧ ೨-೦ ಅಂತರದಲ್ಲಿ ಜಯ ಸಾಧಿಸಿತು. ಸೋಮೆಯಂಡ ತಂಡವು ಮಳವಂಡ ತಂಡವನ್ನು ೩-೦ ಅಂತರದಲ್ಲಿ ಮಣಿಸಿತು. ನೆರವಂಡ ತಂಡವು ಮಾದೆಯಂಡ ತಂಡವನ್ನು ೪-೦ ಗೋಲುಗಳಿಂದ ಸೋಲಿಸಿತು.

ಮುಕ್ಕಾಟಿರ(ಹರಿಹರ) ತಂಡವು ಐತಿಚಂಡ ತಂಡದ ವಿರುದ್ಧ ೨-೦ ಗೋಲುಗಳಿಂದ ಗೆಲುವು ಸಾಧಿಸಿತು. ಬೊಟ್ಟೋಳಂಡ ತಂಡವು ಸುಳ್ಳಿಮಾಡ ತಂಡದ ವಿರುದ್ಧ ೧-೦ ಅಂತರದಲ್ಲಿ ಜಯ ಬೀರಿತು. ಕೊಲ್ಲಿರ ತಂಡವು ಚಂಗುಲAಡ ತಂಡವನ್ನು ೪-೧ ಗೋಲುಗಳಿಂದ ಮಣಿಸಿತು. ಕೊಲ್ಲಿರ ಪರ ಲೇಕನ್ ಅಪ್ಪಚ್ಚು ಹ್ಯಾಟ್ರಿಕ್ ಸಾಧನೆ ಗೈದರು. ಅರಮಣಮಾಡ ತಂಡವು ಉದ್ದಿನಾಡಂಡ ತಂಡವನ್ನು ೧-೦ ಗೋಲುಗಳಿಂದ ಸೋಲಿಸಿತು.

ನಂದೇಟಿರ ತಂಡವು ಪಾಲೆಕಂಡ ತಂಡದ ವಿರುದ್ಧ ೧-೦ ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಮುಕ್ಕಾಟಿರ(ಮೂವತೋಕ್ಲು) ತಂಡವು ಮಚ್ಚಂಡ ತಂಡವನ್ನು ಟೈ ಬ್ರೇಕರ್‌ನಲ್ಲಿ ೨-೧ ಗೋಲುಗಳಿಂದ ಮಣಿಸಿತು. ನಿಗದಿತ ಪಂದ್ಯದಲ್ಲಿ ೦-೦ ಸಮಬಲವಾಗಿತ್ತು.

ನಾಗಂಡ ತಂಡವು ತೀತರಮಾಡ ತಂಡದ ವಿರುದ್ಧ ೨-೦ ಗೋಲುಗಳಿಂದ ಜಯ ಸಾಧಿಸಿತು.

೫ ಸಿಕ್ಸರ್ ಸಹಿತ ಅಜೇಯ ೫೨ ರನ್ ಗಳಿಸಿ ತಂಡಕ್ಕೆ ನೆರವಾದರು. ಕೀಜನ ವಿರುದ್ಧ ಕನ್ನಡ್ಕ ಜಯ ಸಾಧಿಸಿತು. ೭೨ ರನ್ ಗುರಿಯನ್ನು ಬೆನ್ನತ್ತಿದ ಕನ್ನಡ್ಕ ೫.೪ ಓವರ್‌ನಲ್ಲಿ ೭೩ ರನ್ ಬಾರಿಸಿ ಗೆಲುವು ಪಡೆದುಕೊಂಡಿತು. ಯಾಪಾರೆ ವಿರುದ್ಧ ಕುಯ್ಯಮುಡಿ ೫ ವಿಕೆಟ್‌ಗಳ ಜಯ ಪಡೆಯಿತು. ಯಾಪಾರೆ ನೀಡಿದ್ದ ೩೫ ರನ್‌ಗಳ ಗುರಿಯನ್ನು ಬೆನ್ನತ್ತಿದ್ದ ಕುಯ್ಯಮುಡಿ ೫.೨. ಓವರ್‌ನಲ್ಲಿ ೫ ವಿಕೆಟ್ ನಷ್ಟಕ್ಕೆ ೩೬ ರನ್ ಬಾರಿಸಿತು. ಕುಲ್ಲಚೆಟ್ಟಿ ವಿರುದ್ಧ ಹುಲಿಮನೆ ವಿಜಯಿಯಾಯಿತು. ಕುಲ್ಲಚೆಟ್ಟಿ ೪ ವಿಕೆಟ್ ನಷ್ಟಕ್ಕೆ ೫೬ ರನ್ ದಾಖಲಿಸಿತು. ಹುಲಿಮನೆ ೫.೫ ಓವರ್‌ನಲ್ಲಿ ೪ ವಿಕೆಟ್ ನಷ್ಟಕ್ಕೆ ೫೭ ರನ್ ಬಾರಿಸಿ ಗೆಲುವಿನ ನಗೆ ಬೀರಿತು. ಸಣ್ಣಜನ ವಿರುದ್ಧ ಬಾಜಿನಡ್ಕ (ಅಡ್ಕಬಳೆ) ಪರಾಭವಗೊಂಡಿತು. ೪ ವಿಕೆಟ್ ನಷ್ಟಕ್ಕೆ ೫೯ ರನ್ ಗುರಿಯನ್ನು ಬೆನ್ನತ್ತಿದ ಸಣ್ಣಜನ ೪.೪ ಓವರ್‌ನಲ್ಲಿಯೇ ೬೪ ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು. ಕುದುಪಜೆ ವಿರುದ್ಧ ಬಾಕಿಲನ ಸೋಲನುಭವಿಸಿತು. ೫ ವಿಕೆಟ್ ನಷ್ಟಕ್ಕೆ ಬಾಕಿಲನ ೪೪ ರನ್ ಪೇರಿಸಿತು. ಇದನ್ನು ಬೆನ್ನತ್ತಿದ ಕುದುಪಜೆ ೩.೫ ಓವರ್‌ನಲ್ಲಿಯೇ ೧ ವಿಕೆಟ್ ಕಳೆದುಕೊಂಡು ೪೫ ರನ್ ಪೇರಿಸಿ ಜಯ ಗಳಿಸಿತು. ಚೀಯಪ್ಪನ ತಂಡ ಕಾನಡ್ಕ ವಿರುದ್ಧ ೩೫ ರನ್ ಅಂತರದಲ್ಲಿ ಜಯ ದಾಖಲಿಸಿತು. ನಿಗದಿತ ಓವರ್‌ನಲ್ಲಿ ೪ ವಿಕೆಟ್ ನಷ್ಟಕ್ಕೆ ೮೪ ರನ್ ಚೀಯಪ್ಪನ ದಾಖಲಿಸಿತ್ತು. ಗುರಿ ಬೆನ್ನತ್ತಿದ ಕಾನಡ್ಕ ೫ ವಿಕೆಟ್ ನಷ್ಟಕ್ಕೆ ಕೇವಲ ೪೯ ರನ್‌ಗಳನ್ನಷ್ಟೆ ದಾಖಲಿಸಲು ಶಕ್ತವಾಯಿತು.

ಹುಲಿಮನೆ ವಿರುದ್ಧ ಕುಯ್ಯಮುಡಿ ಜಯ ಗಳಿಸಿತು. ಮೊದಲು ಬ್ಯಾಟ್ ಮಾಡಿದ ಹುಲಿಮನೆ ೭ ವಿಕೆಟ್ ಕಳೆದುಕೊಂಡು ೪೭ ರನ್ ದಾಖಲಿಸಿತು. ಕುಯ್ಯಮುಡಿ ೫ ಓವರ್‌ಗಳಲ್ಲಿಯೇ ೪ ವಿಕೆಟ್ ನಷ್ಟಕ್ಕೆ ೫೨ ರನ್ ಬಾರಿಸಿ ವಿಜಯಶಾಲಿಯಾಯಿತು. ನಂಗಾರು ವಿರುದ್ಧ ಸಣ್ಣಜನ ೩೩ ರನ್‌ಗಳ ಜಯ ಪಡೆಯಿತು. ೫ ವಿಕೆಟ್ ನಷ್ಟಕ್ಕೆ ಸಣ್ಣಜನ ೫೭ ರನ್ ಪೇರಿಸಿತು. ನಂಗಾರು ೬ ವಿಕೆಟ್ ನಷ್ಟಕ್ಕೆ ಕೇವಲ ೨೪ ರನ್‌ಗಳನ್ನಷ್ಟೆ ದಾಖಲಿಸಿ ಪರಾಜಿತಗೊಂಡಿತು. ಕುದುಪಜೆ ವಿರುದ್ಧ ಚೀಯಪ್ಪನ ೪೩ ರನ್‌ಗಳ ಜಯವನ್ನು ದಾಖಲಿಸಿತು. ಚೀಯಪ್ಪನ ೪ ವಿಕೆಟ್ ಕಳೆದುಕೊಂಡು ೬೯ ರನ್ ದಾಖಲಿಸಿತು. ಕುದುಪಜೆ ೬ ವಿಕೆಟ್ ಕಳೆದುಕೊಂಡು ಕೇವಲ ೨೬ ರನ್ ದಾಖಲಿಸಿ ಸೋಲೊಪ್ಪಿಕೊಂಡಿತು.