ಮಡಿಕೇರಿ, ಏ.೧೮ : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ ೨೪ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆಯಲ್ಲಿ ತಾ.೧೮ ರಂದು ೧೩ ತಂಡಗಳು ಗೆಲುವು ಸಾಧಿಸಿದವು.

ಮೈದಾನ ೧ರಲ್ಲಿ ತೀತಮಾಡ(ಕುಂದ) ಮತ್ತು ಕಾಣತಂಡ ತಂಡಗಳ ನಡುವಿನ ಪಂದ್ಯದಲ್ಲಿ ಕಾಣತಂಡ ೩೦ ರನ್ ಗಳ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕಾಣತಂಡ ೬ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೯೪ ರನ್ ಗಳಿಸಿತು. ತೀತಮಾಡ ೬ ಓವರ್ ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೬೪ ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಆದೇAಗಡ ಮತ್ತು ಗೀಜಿಗಂಡ ನಡುವಿನ ಪಂದ್ಯದಲ್ಲಿ ಗೀಜಿಗಂಡÀ ೧೫ ರನ್ ಗಳಿಂದ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗೀಜಿಗಂಡ ೬ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೬೦ ರನ್ ಗಳಿಸಿತು. ಆದೇಂಗಡ ೬ ಓವರ್‌ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೪೫ ರನ್ ಗಳಿಸಿ ಸೋಲು ಕಂಡಿತು.

ಪರುವAಡ ಮತ್ತು ಕನ್ನಿಗಂಡ ನಡುವಿನ ಪಂದ್ಯದಲ್ಲಿ ಪರುವಂಡ ೪೮ ರನ್ ಗಳಿಂದ ವಿಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪರುವಂಡ ೬ ಓವರ್‌ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ಭರ್ಜರಿ ೧೦೩ ಗಳಿಸಿತು. ಕನ್ನಿಗಂಡ ೬ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೫೫ ರನ್ ಗಳನ್ನಷ್ಟೇ ಗಳಿಸಿ ಸೋಲು ಅನುಭವಿಸಿತು.

ಉಡುವೆರ ಮತ್ತು ಮುಕ್ಕಾಟಿರ (ಬೇತ್ರಿ) ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ೯ ವಿಕೆಟ್‌ಗಳ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಉಡುವೆರ ೬ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೫೩ ರನ್ ಗಳನ್ನು ಗಳಿಸಿತು. ಮುಕ್ಕಾಟಿರ ಕೇವಲ ೨.೨ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೫೫ ರನ್ ಗಳನ್ನು ಸೇರಿಸಿ ಗೆಲುವಿನ ನಗು ಬೀರಿತು.

ಮೂಕಳೇರ ಮತ್ತು ಬಲ್ಯಮೀದೇರಿರ ನಡುವಿನ ಪಂದ್ಯದಲ್ಲಿ ಮೂಕಳೇರ ೮ ವಿಕೆಟ್‌ಗಳಿಂದ ಗೆಲುವು ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಲ್ಯಮೀದೇರಿರ ೬ ಓವರ್ ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೪೮ ರನ್ ಗಳನ್ನು ಗಳಿಸಿತು. ಮೂಕಳೇರ ೩.೫ ಓವರ್‌ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೪೯ ರನ್‌ಗಳನ್ನು ಗಳಿಸಿ ಜಯ ಕಂಡಿತು.

ಮAಡೇಪAಡ ಮತ್ತು ಕಾಡ್ಯಮಾಡ ನಡುವಿನ ಪಂದ್ಯದಲ್ಲಿ ಮಂಡೇಪAಡ ೭ ವಿಕೆಟ್‌ಗಳ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕಾಡ್ಯಮಾಡ ೬ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೩೮ ರನ್ ಗಳಿಸಿತು. ಮಂಡೇಪAಡ ೫.೪ ಓವರ್‌ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೩೯ ರನ್ ಗಳನ್ನು ಗಳಿಸಿ ಗೆಲುವು ಕಂಡಿತು.

ನೆರವಂಡ ಮತ್ತು ಪೊನ್ನಿಮಾಡ ನಡುವಿನ ಹಣಾಹಣಿಯಲ್ಲಿ ನೆರವಂಡ ೫೧ ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನೆರವಂಡ ೬ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೮೭ ರನ್ ಗಳಿಸಿತು. ಪೊನ್ನಿಮಾಡ ೬ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೩೬ ರನ್‌ಗಳನ್ನಷ್ಟೇ ಗಳಿಸಿ ಸೋಲು ಕಂಡಿತು.

ಮೈದಾನ ೨ರಲ್ಲಿ ಕೋಳೇರ ಮತ್ತು ಕುಂಞAಡ ತಂಡಗಳ ನಡುವಿನ ಪಂದ್ಯದಲ್ಲಿ ಕೋಳೇರ ೯ ವಿಕೆಟ್‌ಗಳ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕುಂಞAಡ ೬ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೩೭ ರನ್ ಗಳಿಸಿತು. ಕೋಳೇರ ೨.೨ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೩೮ ರನ್‌ಗಳಿಸಿ ಗೆಲುವು ಕಂಡಿತು.

ಬಾರಿಯಂಡ ಮತ್ತು ಬೊಟ್ಟಂಗಡ ನಡುವಿನ ಪಂದ್ಯದಲ್ಲಿ ಬೊಟ್ಟಂಗಡ ೮೫ ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬೊಟ್ಟಂಗಡ ೬ ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ೧೦೯ ರನ್ ಗಳಿಸಿತು. ಬಾರಿಯಂಡ ೬ ಓವರ್ ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ಕೇವಲ ೨೯ ರನ್ ಗಳನ್ನಷ್ಟೇ ಗಳಿಸಿ ಸೋಲೊಪ್ಪಿಕೊಂಡಿತು.

ಮAಡೆಯAಡ (ಮಾದಾಪುರ) ಮತ್ತು ಮಂದAಗಡ ನಡುವಿನ ಪಂದ್ಯದಲ್ಲಿ ಮಂಡೆಯAಡ ೬ ವಿಕೆಟ್ ಗಳ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮಂದAಗಡ ೬ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೬೧ ರನ್ ಗಳಿಸಿತು. ಮಂಡೆಯAಡ ೬ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೬೨ ಗಳನ್ನು Àಗಳಿಸಿ ಗೆಲುವು ಸಾಧಿಸಿತು.

ಮಂಡುವAಡ ಮತ್ತು ಅಚ್ಚಪ್ಪಂಡ ನಡುವಿನ ಪಂದ್ಯದಲ್ಲಿ ಮಂಡುವAಡ ೮ ರನ್ ಗಳಿಂದ ವಿಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮಂಡುವAಡ ೬ ಓವರ್‌ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೭೩ ರನ್ ಗಳಿಸಿತು. ಅಚ್ಚಪ್ಪಂಡ ೬ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೬೫ ರನ್ ಗಳನ್ನು ಗಳಿಸಿ ಸೋಲು ಕಂಡಿತು.

ಮುಕ್ಕಾಟಿರ (ಮೂವತ್ತೊಕ್ಲು) ಮತ್ತು ಕಳಕಂಡ ನಡುವಿನ ಪಂದ್ಯದಲ್ಲಿ ಕಳಕಂಡ ೮ ವಿಕೆಟ್‌ಗಳ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಕ್ಕಾಟಿರ ೬ ಓವರ್‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೫೦ರನ್ ಗಳಿಸಿತು. ಕಳಕಂಡ ೨.೧ ಓವರ್‌ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೫೧ ರನ್‌ಗಳಿಸಿ ಗೆಲುವಿನ ನಗೆ ಬೀರಿತು.

ಬೊಳ್ಳೆಪಂಡ ಮತ್ತು ಐಚಂಡ (ದೇವಣಗೇರಿ) ನಡುವಿನ ಹಣಾಹಣಿಯಲ್ಲಿ ಬೊಳ್ಳೆಪಂಡ ತಂಡ ೭ ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಐಚಂಡ ೬ ಓವರ್ ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೫೯ ರನ್ ಗಳನ್ನು ಗಳಿಸಿತು. ಬೊಳ್ಳೆಪಂಡ ೫ ಓವರ್‌ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೬೦ ರನ್‌ಗಳನ್ನು ಗಳಿಸಿ ವಿಜಯ ಸಾಧಿಸಿತು.

ಚೇರಂಡ ಮತ್ತು ಚಿಮ್ಮಣಮಾಡ ನಡುವಿನ ಪಂದ್ಯದಲ್ಲಿ ಚೇರಂಡ ೮ ವಿಕೆಟ್‌ಗಳ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚಿಮ್ಮಣಮಾಡ ೬ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೬೪ ರನ್ ಗಳಿಸಿತು. ಚೇರಂಡ ೫.೪ ಓವರ್‌ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೬೫ ರನ್ ಗಳಿಸಿ ಗೆಲುವು ಕಂಡಿತು.