ಮಡಿಕೇರಿ, ಏ. ೧೭: ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ ೨೪ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ ಯಲ್ಲಿ ಕೋಟ್ರಮಾಡ ವಿರುದ್ಧ ಮಚ್ಚಮಾಡ ಭರ್ಜರಿ ೬೧ ರನ್ಗಳ ಅಂತರದ ಜಯ ಸಾಧಿಸಿ ಮುನ್ನಡೆ ಸಾಧಿಸಿತು. ಮೈದಾನ ೧ರಲ್ಲಿ ಓಡಿಯಂಡ ಮತ್ತು ಅಮ್ಮುಣಿಚಂಡ ತಂಡಗಳ ನಡುವಿನ ಪಂದ್ಯದಲ್ಲಿ ಓಡಿಯಂಡಕ್ಕೆ ೯ ವಿಕೆಟ್ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಮ್ಮುಣಿಚಂಡ ೬ ಓವರ್ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೪೧ ರನ್ ಗಳಿಸಿತು. ಓಡಿಯಂಡ ಕೇವಲ ೧.೫ ಓವರ್ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೪೩ ರನ್ಗಳನ್ನು ಪೇರಿಸಿ ಗೆಲುವು ದಾಖಲಿಸಿತು.
ಕೊಚ್ಚೇರ ಮತ್ತು ಚೆಯ್ಯಂಡ (ಬಲಂಬೇರಿ) ನಡುವಿನ ಪಂದ್ಯದಲ್ಲಿ ಕೊಚ್ಚೇರ ೧೩ ರನ್ಗಳಿಂದ ಜಯ ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೊಚ್ಚೇರ ೬ ಓವರ್ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೭೫ ರನ್ ದಾಖಲಿಸಿತು. ಚೆಯ್ಯಂಡ ೬ ಓವರ್ನಲ್ಲಿ ೫ ವಿಕೆಟ್ ನಷ್ಟಕ್ಕೆ ೬೨ ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಪಾಲಚಂಡ ಮತ್ತು ಐಚೋಡಿಯಂಡ ನಡುವಿನ ಪಂದ್ಯದಲ್ಲಿ ಐಚೋಡಿಯಂಡ ತಂಡಕ್ಕೆ ೧೦ ವಿಕೆಟ್ಗಳ ಗೆಲುವು ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಲಚಂಡ ೬ ಓವರ್ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೭೩ ರನ್ ಗಳಿಸಿತು. ಐಚೋಡಿಯಂಡ ೬ ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ೭೭ ರನ್ ಗಳನ್ನು ಸೇರಿಸಿ ಗೆಲುವಿನ ನಗು ಬೀರಿತು.
ಚೆರುವಾಳಂಡ (ಪಾಲೂರು) ಮತ್ತು ಚೆಕ್ಕೇರ ನಡುವಿನ ಪಂದ್ಯದಲ್ಲಿ ಚೆಕ್ಕೇರ ೧೦ ವಿಕೆಟ್ಗಳ ಜಯ ಸಂಪಾದಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಚೆರುವಾಳಂಡ ೬ ಓವರ್ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೪೨ ರನ್ ಪೇರಿಸಿತು. ಚೆಕ್ಕೇರ ಯಾವುದೇ ೬ ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ೪೫ ರನ್ ಗಳಿಸಿ ಗೆಲುವು ಕಂಡಿತು.
ಬೊಳಕಾರಂಡ ಮತ್ತು ಅಡ್ಡೇಂಗಡ ನಡುವಿನ ಪಂದ್ಯದಲ್ಲಿ ಬೊಳಕಾರಂಡ ತಂಡಕ್ಕೆ ೯ ವಿಕೆಟ್ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಡ್ಡೇಂಗಡ ೬ ಓವರ್ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೫೧ ರನ್ ಸೇರಿಸಿತು. ಬೊಳಕಾರಂಡ ೬ ಓವರ್ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೫೨ ರನ್ ಗಳಿಸಿ ವಿಜಯಿಯಾಯಿತು.
ಆಲೆಮಾಡ ಮತ್ತು ಚಾಮೇರ ನಡುವಿನ ಹಣಾಹಣಿಯಲ್ಲಿ ಚಾಮೇರ ೯ ವಿಕೆಟ್ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಲೆಮಾಡ ೬ ಓವರ್ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೬೩ ರನ್ ಗಳಿಸಿತು. ಚಾಮೇರ ೪.೩ ಓವರ್ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೬೬ ರನ್ ಸೇರಿಸಿ ಗೆಲುವು ತನ್ನದಾಗಿಸಿಕೊಂಡಿತು.
ಕರ್ತಮಾಡ ಮತ್ತು ಮೋಟನಾಳಿರ ನಡುವಿನ ಪಂದ್ಯದಲ್ಲಿ ಮೋಟನಾಳಿರ ೧೫ ರನ್ಗಳಿಂದ ಜಯ ಕಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮೋಟನಾಳಿರ ೬ ಓವರ್ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೬೯ ರನ್ ಸೇರಿಸಿತು. ಕರ್ತಮಾಡ ೬ ಓವರ್ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೫೪ ರನ್ ಗಳಿಸಿ ಸೋಲು ಕಂಡಿತು.
ಮೈದಾನ ೨ರಲ್ಲಿ ಚಂಗುಲAಡ ಮತ್ತು ಪೊನ್ನಚಂಡ ತಂಡಗಳ ನಡುವಿನ ಪಂದ್ಯದಲ್ಲಿ ಪೊನ್ನಚಂಡ ೧೦ ವಿಕೆಟ್ಗಳಿಂದ ಗೆಲುವು ದಾಖಲಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಚಂಗುಲAಡ ೬ ಓವರ್ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೬೭ ರನ್ಗಳನ್ನು ಗಳಿಸಿತು. ಪೊನ್ನಚಂಡ ೫.೧ ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ೭೧ ರನ್ ಗಳನ್ನು ಸೇರಿಸಿ ಗೆಲುವಿನ ನಗು ಬೀರಿತು.
ಮೀದೇರಿರ ಮತ್ತು ಕೋಳುಮಾಡಂಡ (ರ್ವತ್ತೊಕ್ಲು) ನಡುವಿನ ಪಂದ್ಯದಲ್ಲಿ ಕೋಳುಮಾಡಂಡ ತಂಡಕ್ಕೆ ೯ ವಿಕೆಟ್ಗಳ ಜಯ ಲಭಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮೀದೇರಿರ ೬ ಓವರ್ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೩೯ ರನ್ ಸೇರಿಸಿತು. ಕೋಳುಮಾಡಂಡ ೩.೨ ಓವರ್ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೪೦ ರನ್ ಗಳನ್ನು ಗಳಿಸಿ ವಿಜಯ ಸಾಧಿಸಿತು.
ಮಂಡಿರ (ನೆಲಜಿ) ಮತ್ತು ಚೊಟ್ಟಂಗಡ ನಡುವಿನ ಪಂದ್ಯದಲ್ಲಿ ಚೊಟ್ಟಂಗಡ ೧೦ ವಿಕೆಟ್ಗಳಿಂದ ಗೆಲುವು ಸಾಧಿಸಿತು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮಂಡಿರ ೬ ಓವರ್ನಲ್ಲಿ ೩ ವಿಕೆಟ್ ನಷ್ಟಕ್ಕೆ ೩೪ ರನ್ ಗಳನ್ನು ಗಳಿಸಿತು. ಚೊಟ್ಟಂಗಡ ೨.೧ ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ೩೮ ರನ್ಗಳನ್ನು ಸೇರಿಸಿ ಗೆಲುವು ಪಡೆದುಕೊಂಡಿತು.
ಕೊಟ್ರಮಾಡ ಮತ್ತು ಮಚ್ಚಮಾಡ ನಡುವಿನ ಪಂದ್ಯದಲ್ಲಿ ಮಚ್ಚಮಾಡ ೬೧ ರನ್ಗಳಿಂದ ಜಯ ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮಚ್ಚಮಾಡ ೬ ಓವರ್ ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ಭರ್ಜರಿ ೧೨೧ ರನ್ ಸೇರಿಸಿತು. ಕೊಟ್ರಮಾಡ ೬ ಓವರ್ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೬೦ ರನ್ ಗಳನ್ನಷ್ಟೇ ಗಳಿಸಿ ಸೋಲೊಪ್ಪಿಕೊಂಡಿತು.
ಓಡಿಯAಡ ಮತ್ತು ಕೊಚ್ಚೇರ ನಡುವಿನ ಪಂದ್ಯದಲ್ಲಿ ಓಡಿಯಂಡ ತಂಡಕ್ಕೆ ೯ ವಿಕೆಟ್ಗಳ ಜಯ ಲಭಿಸಿತು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೊಚ್ಚೇರ ೬ ಓವರ್ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೪೨ ರನ್ ಗಳಿಸಿತು. ಓಡಿಯಂಡ ೬ ಓವರ್ ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೪೬ ರನ್ ಸೇರಿಸಿ ಗೆಲುವು ಸಾಧಿಸಿತು.