ಮಡಿಕೇರಿ, ಏ. ೧೭: ಮರಗೋಡುವಿನ ಗೌಡ ಇವಿನಿಂಗ್ ಸ್ಟಾರ್ ವತಿಯಿಂದ ಭಾರತಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಗೌಡ ಜನಾಂಗದ ನಡುವಿನ ಗೌಡ ಕುಟುಂಬ ಕಲರವ ಕ್ರಿಕೆಟ್ ಪಂದ್ಯಾವಳಿಯಲ್ಲಿAದು ಬಿದ್ರುಪಣೆ ಹಾಗೂ ಪರ್ಲಕೋಟಿ ತಂಡ ಪ್ರಿ ಕ್ವಾರ್ಟರ್‌ಗೆ ಪ್ರವೇಶಿಸಿದೆ.

ಮಂಞಪುರ ಹಾಗೂ ಕೋಡಿ ತಂಡಗಳ ನಡುವಿನ ಹಣಾಹಣಿಯಲ್ಲಿ ಮೊದಲು ಬ್ಯಾಟ್ ಮಾಡಿದ ಮಂಞಪುರ ನಿಗದಿತ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೩೬ ರನ್‌ಗಳನ್ನಷ್ಟೆ ದಾಖಲಿಸಿತು. ಕೋಡಿ ಕೇವಲ ೨.೫ ಓವರ್‌ಗಳಲ್ಲಿ ೪೦ ರನ್ ಬಾರಿಸಿ ಗೆಲುವಿನ ನಗೆ ಬೀರಿತು. ಕೋಡಿ ಪರ ಆಟಗಾರ ೩ ಸಿಕ್ಸರ್, ೧ ಬೌಂಡರಿ ಬಾರಿಸಿದರು.

ಬಾರಿಕೆ ವಿರುದ್ಧ ಕೋಳಿಬೈಲು ೭ ರನ್‌ಗಳ ಜಯ ಸಾಧಿಸಿತು. ಕೋಳಿಬೈಲ್ ೩ ವಿಕೆಟ್ ನಷ್ಟಕ್ಕೆ ೭೬ ರನ್ ದಾಖಲಿಸಿದರೆ, ಬಾರಿಕೆ ೫ ವಿಕೆಟ್ ನಷ್ಟಕ್ಕೆ ೬೯ ರನ್ ದಾಖಲಿಸಿ ಸೋಲೊಪ್ಪಿಕೊಂಡಿತು. ಕೋಳಿಬೈಲು ಪರ ಹೇಮಂತ್ ೩ ಸಿಕ್ಸರ್ ಸಿಡಿಸಿ ಅಜೇಯ ೩೨ ರನ್ ಬಾರಿಸಿದರು. ನಡುವಟ್ಟಿರವನ್ನು ಮಣಿಸಿ ಬಿದ್ರುಪಣೆ ೪೦ ರನ್‌ಗಳ ಜಯ ಪಡೆಯಿತು. ಮೊದಲು ಬ್ಯಾಟ್ ಮಾಡಿದ ಬಿದ್ರುಪಣೆ ೫ ವಿಕೆಟ್ ಕಳೆದುಕೊಂಡು ೬೫ ರನ್ ಗುರಿ ನೀಡಿತು. ನಡುವಟ್ಟಿರ ೬ ವಿಕೆಟ್ ನಷ್ಟಕ್ಕೆ ಕೇವಲ ೨೫ ರನ್ ದಾಖಲಿಸಿ ಸೋಲೊಪ್ಪಿಕೊಂಡಿತು.

ಸೂದನ ವಿರುದ್ಧ ಮರದಾಳು ಗೆಲುವು ಪಡೆಯಿತು. ಸೂದನ ೪ ವಿಕೆಟ್ ನಷ್ಟಕ್ಕೆ ೭೨ ರನ್ ಬಾರಿಸಿದರೆ, ಮರದಾಳು ೫ ವಿಕೆಟ್ ನಷ್ಟಕ್ಕೆ ೭೪ ರನ್ ಬಾರಿಸಿ ಗೆಲುವು ಪಡೆದುಕೊಂಡಿತು. ೬ ಸಿಕ್ಸರ್, ೧ ಬೌಂಡರಿ ಸಹಿತ ಅಜೇಯ ೪೫ ರನ್‌ಅನ್ನು ಮರದಾಳು ಪರ ಆಟಗಾರ ತೇಜಸ್ ದಾಖಲಿಸಿದರು.

ಪಾರೆಮಜಲು ವಿರುದ್ಧ ಬಂಗಾರಕೋಡಿ ೫ ವಿಕೆಟ್‌ಗಳ ಜಯ ಸಂಪಾದಿಸಿತು. ಪಾರೆಮಜಲು ೬ ವಿಕೆಟ್ ನಷ್ಟಕ್ಕೆ ೫೦ ರನ್ ಬಾರಿಸಿತು. ಬಂಗಾರಕೋಡಿ ೫.೧ ಓವರ್‌ನಲ್ಲಿಯೇ ೫ ವಿಕೆಟ್ ಕಳೆದುಕೊಂಡು ೫೬ ರನ್ ಪೇರಿಸಿ ವಿಜಯಶಾಲಿಯಾಯಿತು.

ಬೊಳ್ತಾಜಿರ ವಿರುದ್ಧ ಪರ್ಲಕೋಟಿ ೧೦ ವಿಕೆಟ್‌ಗಳ ಜಯ ಪಡೆಯಿತು. ಬೊಳ್ತಾಜಿರ ನಿಗದಿತ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ಕೇವಲ ೨೮ ರನ್ ಬಾರಿಸಿತು. ಪರ್ಲಕೋಟಿ ೨.೧ ಓವರ್‌ನಲ್ಲಿಯೇ ಯಾವುದೇ ವಿಕೆಟ್ ಕಳೆದುಕೊಳ್ಳದೆ ಗುರಿ ಸಾಧಿಸಿ ಗೆಲುವಿನ ನಗೆ ಬೀರಿತು.

ಕೋಳಿಬೈಲು ವಿರುದ್ಧ ಕೋಡಿ ಜಯಗಳಿಸಿತು. ಮೊದಲು ಬ್ಯಾಟ್ ಮಾಡಿದ ಕೋಳಿಬೈಲ್ ೬ ವಿಕೆಟ್ ನಷ್ಟಕ್ಕೆ ೪೮ ರನ್ ಬಾರಿಸಿತು. ಕೋಡಿ ೨.೩ ಓವರ್‌ನಲ್ಲಿ ೫೧ ರನ್ ಬಾರಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು.

ಬಿದ್ರುಪಣೆ ಮತ್ತು ಮರದಾಳು ನಡುವಿನ ಪಂದ್ಯದಲ್ಲಿ ಬಿದ್ರುಪಣೆ ಗೆಲುವು ಪಡೆಯಿತು. ಮರದಾಳು ನಿಗದಿತ ಓವರ್‌ನಲ್ಲಿ ೪ ವಿಕೆಟ್ ನಷ್ಟಕ್ಕೆ ೫೮ ರನ್ ಬಾರಿಸಿತು. ಬಿದ್ರುಪಣೆ ೫.೩ ಓವರ್‌ಗಳಲ್ಲಿಯೇ ೨ ವಿಕೆಟ್ ನಷ್ಟಕ್ಕೆ ೬೧ ರನ್ ಗಳಿಸಿತು.

ಬಂಗಾರಕೋಡಿ ವಿರುದ್ಧ ಪಾಲಾರ್‌ಮೂಲೆ ೨೩ ರನ್‌ಗಳ ಅಂತರದ ಗೆಲವು ಪಡೆಯಿತು. ಪಾಲಾರ್ ಮೂಲೆ ೨ ವಿಕೆಟ್ ನಷ್ಟಕ್ಕೆ ೭೭ ರನ್ ಗಳಿಸಿದರೆ, ಬಂಗಾರಕೋಡಿ ೪ ವಿಕೆಟ್ ನಷ್ಟಕ್ಕೆ ೫೪ ರನ್ ಸಂಪಾದಿಸಿ ಸೋಲನುಭವಿಸಿತು.

ಕೋಡಿ ವಿರುದ್ಧ ಪರ್ಲಕೋಟಿ ಜಯ ಸಾಧಿಸಿತು. ೭ ವಿಕೆಟ್ ನಷ್ಟಕ್ಕೆ ಪರ್ಲಕೋಟಿ ೩೮ ರನ್ ಬಾರಿಸಿದರೆ, ಕೋಡಿ ೫ ವಿಕೆಟ್ ನಷ್ಟಕ್ಕೆ ೧೬ ರನ್ ಬಾರಿಸಿ ಸೋಲಿಗೆ ಶರಣಾಯಿತು.

ಪಾಲಾರ್ ಮೂಲೆ ವಿರುದ್ಧ ಬಿದ್ರುಪಣೆ ವಿಜಯಿಯಾಯಿತು. ಪಾಲಾರ್ ಮೂಲೆ ತಂಡ ೫ ವಿಕೆಟ್ ನಷ್ಟಕ್ಕೆ ೪೦ ರನ್ ರನ್ ದಾಖಲಿಸಿತ್ತು. ಗುರಿ ಬೆನ್ನತ್ತಿದ ಬಿದ್ರುಪಣೆ ೨ ವಿಕೆಟ್ ನಷ್ಟಕ್ಕೆ ೪೨ ರನ್ ಬಾರಿಸಿ ಪ್ರಿ ಕ್ವಾರ್ಟರ್ ಪ್ರವೇಶಿಸಿತು.